ಸ್ಫೋಟಗೊಂಡ ವಾಕಿ-ಟಾಕಿಗಳು  online desk
ವಿದೇಶ

ಪೇಜರ್ ಸ್ಫೋಟದ ಬೆನ್ನಲ್ಲೇ ಹೆಜ್ಬೊಲ್ಲಾಗಳ ವಾಕಿ-ಟಾಕಿ ಗಳೂ ಸ್ಫೋಟ; 14 ಸಾವು, 450 ಕ್ಕೂ ಹೆಚ್ಚು ಮಂದಿಗೆ ಗಾಯ!

ಈ ವಾಕಿ ಟಾಕಿ ಉಪಕರಣಗಳನ್ನು 5 ತಿಂಗಳ ಹಿಂದೆ ಹೆಜ್ಬೊಲ್ಲಾಗಳು ಖರೀದಿಸಿದ್ದರು. ಪೇಜರ್‌ಗಳನ್ನೂ ಅದೇ ಸಮಯದಲ್ಲಿ ಖರೀದಿಸಿದ್ದಾರೆ ಎಂದು ಭದ್ರತಾ ಮೂಲವೊಂದು ಈಗ ಬಹಿರಂಗಪಡಿಸಿದೆ.

ಬೈರುತ್: ಲೆಬನಾನ್ ನಾದ್ಯಂತ ಹಿಜ್ಬುಲ್ಲಾಗಳು ಬಳಕೆ ಮಾಡುತ್ತಿದ್ದ ಪೇಜರ್ ಗಳು ಸ್ಫೋಟಗೊಂಡ ಬೆನ್ನಲ್ಲೇ ವಾಕಿ-ಟಾಕಿಗಳೂ ಸ್ಫೋಟಗೊಳ್ಳಲು ಆರಂಭವಾಗಿವೆ. ವಾಕಿ-ಟಾಕಿಗಳ ಸ್ಫೋಟದ ಪರಿಣಾಮವಾಗಿ 14 ಮಂದಿ ಸಾವನ್ನಪ್ಪಿದ್ದು, 450 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

"ಸೊಹ್ಮೋರ್ ಪಟ್ಟಣದಲ್ಲಿ ಸಾಧನಗಳು ಸ್ಫೋಟಗೊಂಡ ನಂತರ ಮೂವರು ಸಾವನ್ನಪ್ಪಿದ್ದಾರೆ" ಎಂದು ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಹೇಳಿದೆ. ದೇಶದ ಅನೇಕ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಂಡಿರುವ ಇತ್ತೀಚಿನ ಪ್ರಕರಣಗಳಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸರ್ಕಾರ ದೃಢಪಡಿಸಿದೆ.

ಈ ವಾಕಿ ಟಾಕಿ ಉಪಕರಣಗಳನ್ನು 5 ತಿಂಗಳ ಹಿಂದೆ ಹೆಜ್ಬೊಲ್ಲಾಗಳು ಖರೀದಿಸಿದ್ದರು. ಪೇಜರ್‌ಗಳನ್ನೂ ಅದೇ ಸಮಯದಲ್ಲಿ ಖರೀದಿಸಿದ್ದಾರೆ ಎಂದು ಭದ್ರತಾ ಮೂಲವೊಂದು ಈಗ ಬಹಿರಂಗಪಡಿಸಿದೆ. ಪೂರ್ವ ಮತ್ತು ದಕ್ಷಿಣದ ಹೆಜ್ಬೊಲ್ಲಾಹ್ ಭದ್ರಕೋಟೆಗಳಲ್ಲಿ ಪೇಜರ್‌ಗಳು ಮತ್ತು "ಸಾಧನಗಳು" ಸ್ಫೋಟಗೊಂಡಿವೆ ಎಂದು ರಾಜ್ಯ ಸುದ್ದಿ ಸಂಸ್ಥೆ ಹೇಳಿದೆ, ಎಎಫ್‌ಪಿ ವರದಿಗಾರರು ಸಹ ಸ್ಫೋಟಗಳ ಸದ್ದನ್ನು ಕೇಳುತ್ತಿದ್ದಾರೆ ಎಂದು ವರದಿ ಮಾಡಿದೆ.

ಹೆಜ್ಬೊಲ್ಲಾಹ್ ಗಳು ಹೊಂದಿದ್ದ ಪೇಜಿನೇಟರ್ ಸಾಧನಗಳು ದೇಶದಾದ್ಯಂತ ಸ್ಫೋಟಗೊಂಡು 12 ಜನರು ಸಾವನ್ನಪ್ಪಿದ್ದು, 2,800 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಬೆರಳುಗಳು ದೇಹದಿಂದ ಬೇರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; ರಾಜ್ಯಸಭಾ ಸದಸ್ಯತ್ವ ನಿರಾಕರಣೆ

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

'ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯನಾಗಿರುತ್ತೇನೆ': ಸಿದ್ದರಾಮಯ್ಯ

ರಾಜ್ಯದ ಮುಂದಿನ CM ಆಗಲು ಕಾಂಗ್ರೆಸ್ ಟ್ರಬಲ್ ಶೂಟರ್ ರೆಡಿ: ಯಾರಿದು ಡಿಕೆ ಶಿವಕುಮಾರ್? ರಾಜಕೀಯವಾಗಿ ಬೆಳೆದುಬಂದದ್ದು ಹೇಗೆ?

SCROLL FOR NEXT