ಸ್ಯೂಸೈಡ್ ಪಾಡ್ 
ವಿದೇಶ

Suicide Pod ಬಳಸಿ ಮೊದಲ ಸಾವು: Switzerland ಪೊಲೀಸರಿಂದ ನಾಲ್ವರ ಬಂಧನ!

ಈ ಸ್ಯೂಸೈಡ್ ಪಾಡ್ ನಿರ್ಮಾಣವಾದಾಗಿನಿಂದ ಇದರಲ್ಲಿ ಸಾವಿಗೆ ಶರಣಾದ ಮೊದಲ ವ್ಯಕ್ತಿ ಈಕೆಯೇ ಎನ್ನಲಾಗಿದೆ.

ಜ್ಯೂರಿಚ್: Switzerland ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ Suicide Podನಲ್ಲಿ 64 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಪೊಲೀಸರು 4 ಮಂದಿಯನ್ನು ಬಂಧಿಸಿದ್ದಾರೆ.

ಹೌದು.. ಈ ಹಿಂದೆ 'ಒಂದೇ ನಿಮಿಷದಲ್ಲಿ ನೋವಿಲ್ಲದೆ ಸಾಯಿಸುವ ಯಂತ್ರ'ವನ್ನು ಸ್ವಿಟ್ಜರ್ಲೆಂಡ್ ಆವಿಷ್ಕರಿಸಲಾಗಿತ್ತು. ಇದಕ್ಕೆ ಸ್ವಿಟ್ಜರ್ಲೆಂಡ್‌ ಸರ್ಕಾರ ಕೂಡ ಅನುಮೋದನೆ ನೀಡಿತ್ತು ಎನ್ನಲಾಗಿತ್ತು.

ಇದರಿಂದ ಈಗ ಮೊದಲ ಸಾವಾಗಿದ್ದು, ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 64 ವರ್ಷದ ಅಮೆರಿಕನ್ ಮಹಿಳೆ ಈ Suicide Pod ಮೂಲಕ ಸಾವಿಗೆ ಶರಣಾಗಿದ್ದಾರೆ.

ಈ ಸ್ಯೂಸೈಡ್ ಪಾಡ್ ನಿರ್ಮಾಣವಾದಾಗಿನಿಂದ ಇದರಲ್ಲಿ ಸಾವಿಗೆ ಶರಣಾದ ಮೊದಲ ವ್ಯಕ್ತಿ ಈಕೆಯೇ ಎನ್ನಲಾಗಿದೆ.

ಜರ್ಮನಿಯ ಗಡಿಯಲ್ಲಿರುವ ಶಾಫ್‌ಹೌಸೆನ್‌ನ ಉತ್ತರ ಕ್ಯಾಂಟನ್‌ನಲ್ಲಿರುವ ಪೊಲೀಸರು "ಸಾರ್ಕೊ" ಕ್ಯಾಪ್ಸುಲ್ ಅನ್ನು ಆತ್ಮಹತ್ಯೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟ ಆರೋಪದ ಮೇರೆಗೆ 4 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಆತ್ಮಹತ್ಯೆಗೆ ಪ್ರೇರೇಪಣೆ ಮತ್ತು ಕೆಲ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಈ Suicide Pod ನಿರ್ಮಾಣ ಸಂಸ್ಥೆ ದಿ ಲಾಸ್ಟ್ ರೆಸಾರ್ಟ್‌ನ ಸಹ-ಅಧ್ಯಕ್ಷ ಫ್ಲೋರಿಯನ್ ವಿಲೆಟ್, ಡಚ್ ಪತ್ರಕರ್ತ ಮತ್ತು ಇಬ್ಬರು ಸ್ವಿಸ್ ಪ್ರಜೆಗಳು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆ: ಭೂಕುಸಿತದಲ್ಲಿ ಆರು ಮಂದಿ ಸಾವು ; 1,150 ಕ್ಕೂ ಹೆಚ್ಚು ರಸ್ತೆಗಳು ಬಂದ್

ಜಮ್ಮು- ಕಾಶ್ಮೀರದಲ್ಲಿ ಭಾರೀ ಮಳೆಗೆ ಪ್ರವಾಹ ಭೀತಿ: ಚೆನಾಬ್, ಝೇಲಂನಲ್ಲಿ ಅಪಾಯದ ಮಟ್ಟ ಮೀರಿದ ನೀರು; ಶಾಲೆಗಳಿಗೆ ರಜೆ, ಹೆದ್ದಾರಿ ಬಂದ್

ಭ್ರಷ್ಟಾಚಾರ ಆರೋಪ: ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆಗೆ ನಿರ್ಧಾರ; ಎಸ್.ರವಿಕುಮಾರ್‌

ಅಮೆರಿಕಾ ಮೇಲೆ ಭಾರತ ನಂಬಲಸಾಧ್ಯ ತೆರಿಗೆಯನ್ನು ವಿಧಿಸಿದ್ದು, ಇದು ವಿಶ್ವದಲ್ಲೇ ಅತ್ಯಧಿಕ: ಸುಂಕಾಸ್ತ್ರ ಕ್ರಮಕ್ಕೆ ಟ್ರಂಪ್ ಸಮರ್ಥನೆ

ನಿಮ್ಮ-ಭಾರತ ಸಂಬಂಧಕ್ಕೆ ನಮ್ಮ ತಕರಾರಿಲ್ಲ ಆದರೆ, ನಮ್ಮ ಬಾಂಧವ್ಯ ಗಟ್ಟಿಗೊಳಿಸೋಣ: ರಷ್ಯಾಗೆ ಪಾಕ್ ಮನವಿ

SCROLL FOR NEXT