ಇಸ್ರೇಲ್ ಸೇನೆ 
ವಿದೇಶ

ಲೆಬೆನಾನ್ ಭೂಮಾರ್ಗದಲ್ಲಿ ಸೇನಾ ದಾಳಿ: Israel ಸುಳಿವು

ಹೆಜ್ಬೊಲ್ಲಾ ಬಂಡುಕೋರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಧ್ಯಪ್ರಾಚ್ಯದಲ್ಲಿ "ಸಂಪೂರ್ಣ ಯುದ್ಧ" ದ ವಿರುದ್ಧ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಸೇನೆ IDF ಭೂಮಾರ್ಗವಾಗಿ ಸೇನಾ ದಾಳಿ ನಡೆಸುವ ಕುರಿತು ಮಾಹಿತಿ ನೀಡಿದೆ.

ಟೆಲ್ ಅವೀವ್: ಲೆಬನಾನ್‌ನಲ್ಲಿ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಬಂಡುಕೋರರ ವಿರುದ್ಧ ವಾಯುದಾಳಿ ನಡೆಸುತ್ತಿರುವ ಇಸ್ರೇಲ್ ಸೇನೆ ಇದೀಗ 'ಸೇನಾ ದಾಳಿ' ನಡೆಸುವ ಕುರಿತು ಸುಳಿವು ನೀಡಿದೆ.

ಹೆಜ್ಬೊಲ್ಲಾ ಬಂಡುಕೋರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಧ್ಯಪ್ರಾಚ್ಯದಲ್ಲಿ "ಸಂಪೂರ್ಣ ಯುದ್ಧ" ದ ವಿರುದ್ಧ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್ ಸೇನೆ IDF ಭೂಮಾರ್ಗವಾಗಿ ಸೇನಾ ದಾಳಿ ನಡೆಸುವ ಕುರಿತು ಮಾಹಿತಿ ನೀಡಿದೆ.

ಇಸ್ರೇಲ್‌ನ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೆವಿ ಅವರು ಲೆಬನಾನ್‌ಗೆ ಸೇನೆ ಪ್ರವೇಶಿಸುವ ಸಾಧ್ಯತೆ ಕುರಿತು ಮಾಹಿತಿ ನೀಡಿದ್ದು, ಇದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಟ್ಯಾಂಕ್ ಬ್ರಿಗೇಡ್‌ಗೆ ಬುಧವಾರ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಲೆಬನಾನ್‌ನಲ್ಲಿ 2,000 ಕ್ಕೂ ಹೆಚ್ಚು ಹಿಜ್ಬುಲ್ಲಾ ಗುರಿಗಳನ್ನು ಇಸ್ರೇಲ್ ವಾಯುದಾಳಿ ಮೂಲಕ ಹೊಡೆದಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ. ಗಡಿಯಾಚೆಗಿನ ಘರ್ಷಣೆಗಳಿಂದ ಸ್ಥಳಾಂತರಗೊಂಡ ಉತ್ತರದ ನಿವಾಸಿಗಳು ಸುರಕ್ಷಿತವಾಗಿ ತಮ್ಮ ಮನೆಗಳಿಗೆ ಮರಳುವವರೆಗೆ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳು ನಿಲ್ಲುವುದಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ.

ರಾಜಧಾನಿ ಟೆಲ್ ಅವಿವ್‌ನ ಹೊರವಲಯದಲ್ಲಿರುವ ಇಸ್ರೇಲ್‌ನ ಮೊಸ್ಸಾದ್ ಬೇಹುಗಾರಿಕಾ ಸಂಸ್ಥೆಯ ಪ್ರಧಾನ ಕಛೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ಹೆಜ್ಬೊಲ್ಲಾ ನಾಯಕರು ಹೇಳಿದ ನಂತರ ಇಸ್ರೇಲ್‌ನ ಈ ಎಚ್ಚರಿಕೆಗಳು ಬಂದಿವೆ.

ಆದರೆ ಇದಕ್ಕೆ ವ್ಯತಿರಿಕ್ತ ಎಂಬಂತೆ ಇಸ್ರೇಲ್‌ನ ನಿಕಟ ಮಿತ್ರರಾಷ್ಟ್ರ ಅಮೆರಿಕ, ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳ ನೆಲದ ಕಾರ್ಯಾಚರಣೆಯು "ಸನ್ನಿಹಿತವಾಗಿದೆ" ಎಂದು ತಾನು ಭಾವಿಸುವುದಿಲ್ಲ ಎಂದು ಹೇಳಿದೆ.

ಏತನ್ಮಧ್ಯೆ ಅಮೆರಿಕ, ಫ್ರಾನ್ಸ್, ಜರ್ಮನಿ, ಸೌದಿ ಅರೇಬಿಯಾ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇತರ ಕೆಲವು ಪಾಲುದಾರ ರಾಷ್ಟ್ರಗಳು ಇಸ್ರೇಲ್-ಲೆಬನಾನ್ ಗಡಿಯುದ್ದಕ್ಕೂ ತಕ್ಷಣದ 21 ದಿನಗಳ ಕದನ ವಿರಾಮಕ್ಕೆ ಕರೆ ನೀಡಿವೆ ಎಂದು ಬುಧವಾರ ತಡವಾಗಿ ಬಿಡುಗಡೆಯಾದ ದೇಶಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಒಟ್ಟಾರೆ ದಿನಕಳೆದಂತೆ ಲೆಬೆನಾನ್ ನಲ್ಲಿ ಹೆಜ್ಬೊಲ್ಲಾ ಬಂಡುಕೋರರು ಮತ್ತು ಇಸ್ರೇಲ್ ಸೇನಾ ಸಂಘರ್ಷ ತಾರಕಕ್ಕೇರುತ್ತಿದ್ದು, ವಿಶ್ವಸಂಸ್ಥೆ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT