ಮಕ್ಕಳ ರಕ್ಷಿಸಿದ ದಾದಿಯರು 
ವಿದೇಶ

Myanmar Earthquake: ಜೀವದ ಹಂಗು ತೊರೆದು ಪುಟ್ಟ ಮಕ್ಕಳ ರಕ್ಷಿಸಿದ ದಾದಿಯರು! Video Viral

ಭೂಕಂಪನ ಎಂತಹವರನ್ನೂ ಪ್ರಾಣಭೀತಿಗೆ ದೂಡುತ್ತದೆ. ಎಂತಹ ಗಟ್ಟಿ ಮನುಷ್ಯನೇ ಆದರೂ ಭೂಕಂಪನದಿಂದ ಪ್ರಾಣ ಉಳಿಸಿಕೊಳ್ಳಲು ಕಟ್ಟಡಗಳಿಂದ ದೂರ ಓಡುತ್ತಾರೆ.

ನವದೆಹಲಿ: ಮ್ಯಾನ್ಮಾರ್ ನಲ್ಲಿ ಸಂಭವಿಸಿದ ಭೀಕರ 7.7 ತೀವ್ರತೆಯ ಭೂಕಂಪನದ ನಡುವೆಯೂ ಆಸ್ಪತ್ರೆಯೊಂದರ ದಾದಿಯರು ತಮ್ಮ ಜೀವದ ಹಂಗು ತೊರೆದು ಅಲುಗಾಡುತ್ತಿದ್ದ ಕಟ್ಟಡದಲ್ಲೇ ಪುಟ್ಟಮಕ್ಕಳನ್ನು ರಕ್ಷಿಸಲು ಹರಸಾಹಸ ಪಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಭೂಕಂಪನ ಎಂತಹವರನ್ನೂ ಪ್ರಾಣಭೀತಿಗೆ ದೂಡುತ್ತದೆ. ಎಂತಹ ಗಟ್ಟಿ ಮನುಷ್ಯನೇ ಆದರೂ ಭೂಕಂಪನದಿಂದ ಪ್ರಾಣ ಉಳಿಸಿಕೊಳ್ಳಲು ಕಟ್ಟಡಗಳಿಂದ ದೂರ ಓಡುತ್ತಾರೆ. ಮೊದಲು ತಾವು ಬದುಕುಳಿದರೆ ಸಾಕು ಎಂಬಂತೆ ತಮ್ಮ ಪ್ರೀತಿ ಪಾತ್ರರನ್ನೂ ಕೂಡ ಬಿಟ್ಟು ಓಡುತ್ತಾರೆ. ಆದರೆ ಮ್ಯಾನ್ಮಾರ್ ನ ಆಸ್ಪತ್ರೆಯೊಂದರಲ್ಲಿ ಭೂಕಂಪನಕ್ಕೆ ಸಿಲುಕಿ ಇಡೀ ಆಸ್ಪತ್ರೆ ಕಟ್ಟಡ ಅಲುಗಾಡುತ್ತಿದ್ದರೂ ಅಲ್ಲಿದ್ದ ಇಬ್ಬರು ದಾದಿಯರು ಮಾತ್ರ ಅಲ್ಲಿದ್ದ ಪುಟ್ಟ ಮಕ್ಕಳನ್ನು ರಕ್ಷಿಸಲು ಹರಸಾಹಸ ಪಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ, ಮ್ಯಾನ್ಮಾರ್ ಭೂಕಂಪದ ಸಮಯದಲ್ಲಿ ನವಜಾತ ಶಿಶುಗಳನ್ನು ದಾದಿಯರು ರಕ್ಷಿಸಿದ್ದಾರೆ. ತಮ್ಮ ಕರ್ತವ್ಯ ಪ್ರಜ್ಞೆ ಮತ್ತು ಮಾನವೀಯತೆಯನ್ನು ಮೆರೆದಿರುವುದು ಕಂಡುಬಂದಿದೆ. ಪ್ರಾಣಭಯಕ್ಕಿಂತ ಮಾನವೀಯತೆಗೆ ಒತ್ತುಕೊಟ್ಟಿರುವ ದಾದಿಯರು, ಭೂಕಂಪದ ನಡುವೆಯೂ ಗಾಯಾಳುಗಳಿಗೆ ಚಿಕಿತ್ಸೆ ನೀಡುವುದರನ್ನು ಮುಂದುವರೆಸಿದ್ದಾರೆ.

ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ದಾದಿಯರು ಭೂಕಂಪದ ನಡುವೆಯೂ ನವಜಾತ ಶಿಶುಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಭೂಕಂಪ ಸಂಭವಿಸಿದಾಗ ತೊಟ್ಟಿಲುಗಳು ಉರುಳದಂತೆ ತಡೆಯಲು ಇಬ್ಬರು ನರ್ಸ್ ಧಾವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ಭೂಕಂಪದಲ್ಲಿ ಆಸ್ಪತ್ರೆ ಕಟ್ಟಡವು ಅಲುಗಾಡಿದೆ. ಆ ದಾದಿಯರು ಭೀಕರ ಕಂಪನದ ಸಮಯದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗದೆ, ಶಿಶುಗಳ ತೊಟ್ಟಿಲುಗಳನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ನವಜಾತ ಶಿಶುಗಳನ್ನ ಕಾಪಾಡಲು ಮುಂದಾಗುತ್ತಾರೆ.

ಯಾವ ಆಸ್ಪತ್ರೆ?

ಇನ್ನು ವೈರಲ್ ಆಗಿರುವ ಈ ವಿಡಿಯೋದಲ್ಲಿರುವ ದಾದಿಯರನ್ನು ಚೀನಾದ ಯುನ್ನಾನ್‌ನಲ್ಲಿರುವ ಜಿಂಗ್ಚೆಂಗ್ ಆಸ್ಪತ್ರೆಯ ದಾದಿಯರು ಎಂದು ಹೇಳಲಾಗಿದೆ. ಇಬ್ಬರು ದಾದಿಯರ ಪ್ರಾಮಾಣಿಕ ಕೆಲಸ, ಕರ್ತವ್ಯ ಪ್ರಜ್ಞೆ ಜಗತ್ತಿಗೆ ಮಾದರಿ. ಮುಖ್ಯವಾಗಿ ಇಲ್ಲಿ ಮಾನವೀಯತೆ ಗೆದ್ದಿದೆ. ದಾದಿಯರ ಧೈರ್ಯವೇ ಇದಕ್ಕೆ ಸಾಕ್ಷಿ. ದಾದಿಯರು ಭೂಕಂಪ ಸಂಭವಿಸಿದರೂ ಓಡಿ ಹೋಗದೇ, ಅವರ ಅಲ್ಲಿಯೇ ಇದ್ದು ನವಜಾತ ಶಿಶುಗಳ ಜೀವಗಳನ್ನು ಉಳಿಸಿದ್ದಾರೆ. ದಾದಿಯರು ನಮಗೆ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ನೆಟ್ಟಿಗರ ಶ್ಲಾಘಿಸಿದ್ದಾರೆ.

ಅಂದಹಾಗೆ ನಾಲ್ಕು ದಿನಗಳ ಹಿಂದೆ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪವು ಭಾರಿ ವಿನಾಶವನ್ನುಂಟು ಮಾಡಿದೆ. 7.7 ತೀವ್ರತೆಯ ಭೂಕಂಪದಿಂದ ಹಲವಾರು ಕಟ್ಟಡಗಳು ಉರುಳಿಬಿದ್ದಿವೆ. ಕನಿಷ್ಠ 2,056 ಮಂದಿ ಸಾವನ್ನಪ್ಪಿದ್ದು, 3,900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 270 ಮಂದಿ ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವೈದ್ಯಕೀಯ ತಂಡವು ರಕ್ಷಣಾ ಮತ್ತು ಅಗತ್ಯ ತುರ್ತು ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Asia CUP2025: 'ಸೂಪರ್ ಓವರ್' ಪಂದ್ಯದಲ್ಲಿ ಲಂಕಾ ಮಣಿಸಿದ ಭಾರತ! ಫೈನಲ್ ಗೆ ಲಗ್ಗೆ

ಮಂಡ್ಯ: ಕೆಆರ್ ಎಸ್ ಬಳಿ 'ಕಾವೇರಿ ಆರತಿ' ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ!

Israel 'must finish the job: ವಿಶ್ವಸಂಸ್ಥೆಯಲ್ಲಿ ನೆತನ್ಯಾಹು 'ಉದ್ಧಟತನದ ಭಾಷಣ'; ಅನೇಕ ರಾಷ್ಟ್ರಗಳ ಪ್ರತಿನಿಧಿಗಳು walk out!

Rahul-Priyanka Bond: ರಾಹುಲ್- ಪ್ರಿಯಾಂಕಾ ಬಾಂಧವ್ಯದ ಬಗ್ಗೆ ಬಿಜೆಪಿಯ ಕೈಲಾಶ್ ವರ್ಗಿಯಾ ವಿವಾದಾತ್ಮಕ ಹೇಳಿಕೆ!

ಸಿನಿಮಾ ಟಿಕೆಟ್, ಟಿವಿ ಚಾನಲ್ ಗಳ ಮೇಲೆ ಶೇ.2 ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ಮುಂದು: ಇದರ ಪರಿಣಾಮ ಏನು...?

SCROLL FOR NEXT