ಪ್ಯಾರಿಸ್‌ನಲ್ಲಿ ಅಮೆರಿಕ ಅಧ್ಯಕ್ಷರ ಆಡಳಿತ ಮತ್ತು ಅವರ ಸಲಹೆಗಾರ ಟೆಸ್ಲಾ ಸಿಇಒ ವಿರುದ್ಧ ಡೆಮೋಕ್ರಾಟ್ಸ್ ಅಬ್ರಾಡ್ ಸಂಘಟನೆ ಕರೆ ನೀಡಿದ್ದ "ಹ್ಯಾಂಡ್ಸ್ ಆಫ್!" ಪ್ರದರ್ಶನದಲ್ಲಿ ಪ್ರತಿಭಟನಾಕಾರರು ಫಲಕಗಳನ್ನು ಹಿಡಿದಿರುವುದು  
ವಿದೇಶ

'ಇದು ಆರ್ಥಿಕ ಹುಚ್ಚುತನ, ಅಮೆರಿಕ ವಿನಾಶದ ನೀತಿ': Donald Trump ಆಡಳಿತ ವಿರುದ್ಧ ತಿರುಗಿಬಿದ್ದ ಜನ, ಬೀದಿಗಿಳಿದು ಹೋರಾಟ

ಮೂವ್‌ಆನ್ ಮತ್ತು ವುಮೆನ್ಸ್ ಮಾರ್ಚ್‌ನಂತಹ ಎಡಪಂಥೀಯ ಗುಂಪುಗಳ ಒಕ್ಕೂಟವು 1,000 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಪ್ರತಿ ಕಾಂಗ್ರೆಸ್ ಜಿಲ್ಲೆಯಲ್ಲಿ "ಹ್ಯಾಂಡ್ಸ್ ಆಫ್" ಕಾರ್ಯಕ್ರಮಗಳನ್ನು ಆಯೋಜಿಸಿದೆ.

ವಾಷಿಂಗ್ಟನ್: ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ಅವರು ದೇಶದೊಳಗೆ ವಿರೋಧ ಎದುರಿಸಿದ್ದು, ಅವರು ಒಡೆದು ಆಳುವ ನೀತಿ ಹೊಂದಿದ್ದಾರೆ ಎಂದು ಆರೋಪಿಸಿ ಅಮೆರಿಕದ ಪ್ರಮುಖ ನಗರಗಳ ಬೀದಿಗಳಲ್ಲಿ ಹತ್ತಾರು ಸಾವಿರ ಜನರು ಪ್ರತಿಭಟನೆ ನಡೆಸಿದರು.

ಸರ್ಕಾರದ ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕಡಿತದಿಂದ ಹಿಡಿದು ವ್ಯಾಪಾರ ಸುಂಕಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನಾಶಪಡಿಸುವವರೆಗೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳ ವಿರೋಧಿಗಳು ವಾಷಿಂಗ್ಟನ್, ನ್ಯೂಯಾರ್ಕ್, ಹೂಸ್ಟನ್, ಫ್ಲೋರಿಡಾ, ಕೊಲೊರಾಡೋ ಮತ್ತು ಲಾಸ್ ಏಂಜಲೀಸ್, ಇತರ ಸ್ಥಳಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳು ನಮಗೆ ಸಿಟ್ಟು ತರಿಸುತ್ತಿವೆ. ಸರ್ಕಾರದ ಸವಲತ್ತುಗಳನ್ನು ಪಡೆದು ಬಿಳಿಯ ಅತ್ಯಾಚಾರಿಗಳ ಗುಂಪೊಂದು ನಮ್ಮ ದೇಶವನ್ನು ನಿಯಂತ್ರಿಸುತ್ತಿದೆ. ಇದು ಸರಿಯಲ್ಲ ಎಂದು ನ್ಯೂಯಾರ್ಕ್ ವರ್ಣಚಿತ್ರಕಾರ ಶೈನಾ ಕೆಸ್ನರ್ ಮ್ಯಾನ್‌ಹ್ಯಾಟನ್‌ನ ಹೃದಯಭಾಗದಲ್ಲಿ ಮೆರವಣಿಗೆ ನಡೆಸುತ್ತಿದ್ದ ಜನಸಮೂಹವನ್ನು ಉದ್ದೇಶಿಸಿ ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿ, ಸಾವಿರಾರು ಪ್ರತಿಭಟನಾಕಾರರು ನ್ಯಾಷನಲ್ ಮಾಲ್‌ನಲ್ಲಿ ಜಮಾಯಿಸಿದರು, ಅಲ್ಲಿ ಡಜನ್ ಗಟ್ಟಲೆ ಭಾಷಣಕಾರರು ಟ್ರಂಪ್‌ಗೆ ವಿರೋಧ ವ್ಯಕ್ತಪಡಿಸಿದರು. ನ್ಯೂ ಹ್ಯಾಂಪ್‌ಶೈರ್‌ನಿಂದ ಬಸ್ ಮತ್ತು ವ್ಯಾನ್‌ನಲ್ಲಿ ಸುಮಾರು 100 ಜನರು ಬಂದಿದ್ದರು, ಡೊನಾಲ್ಡ್ ಟ್ರಂಪ್ ಅವರ ಅತಿರೇಕದ ಆಡಳಿತ ಜನರನ್ನು ವಿನಾಶಕ್ಕೆ ತರುತ್ತಿದೆ ಎಂದು ಬೈಕ್ ಪ್ರವಾಸ ಮಾರ್ಗದರ್ಶಿ 64 ವರ್ಷದ ಡಯೇನ್ ಕೋಲಿಫ್ರಾತ್ ಹೇಳಿದರು.

ಸರ್ಕಾರವನ್ನು ನಾಶಮಾಡುತ್ತಿದ್ದಾರೆ

ಲಾಸ್ ಏಂಜಲೀಸ್‌ನಲ್ಲಿ, ಡಿಸ್ಟೋಪಿಯನ್ ಕಾದಂಬರಿ "ದಿ ಹ್ಯಾಂಡ್‌ಮೇಡ್ಸ್ ಟೇಲ್" ನ ಪಾತ್ರಧಾರಿಯ ವೇಷ ಧರಿಸಿಕೊಂಡು ಪ್ರತಿಭಟನಾ ರ‍್ಯಾಲಿಗೆ ಬಂದ ಮಹಿಳೆಯೊಬ್ಬರು, "ನನ್ನ ಗರ್ಭಾಶಯದಿಂದ ಹೊರಬನ್ನಿ" ಎಂಬ ಸಂದೇಶದೊಂದಿಗೆ ದೊಡ್ಡ ಧ್ವಜವನ್ನು ಬೀಸಿದರು, ಇದು ಟ್ರಂಪ್ ಅವರ ಗರ್ಭಪಾತ ವಿರೋಧಿ ನೀತಿಗಳನ್ನು ಉಲ್ಲೇಖಿಸುತ್ತದೆ.

ಕೊಲೊರಾಡೋದ ಡೆನ್ವರ್‌ನಲ್ಲಿ, ಪ್ರತಿಭಟನಾಕಾರರ ದೊಡ್ಡ ಗುಂಪಿನಲ್ಲಿ ಒಬ್ಬ ವ್ಯಕ್ತಿ "ಯುಎಸ್‌ಎಗೆ ರಾಜ ಇಲ್ಲ" ಎಂದು ಓದುವ ಫಲಕವನ್ನು ಹಿಡಿದಿದ್ದರು. ರ‍್ಯಾಲಿಗಳು ಕೆಲವು ಯುರೋಪಿಯನ್ ರಾಜಧಾನಿಗಳಿಗೂ ವಿಸ್ತರಿಸಿದವು, ಅಲ್ಲಿ ಪ್ರತಿಭಟನಾಕಾರರು ಟ್ರಂಪ್ ಮತ್ತು ಅವರ ಆಕ್ರಮಣಕಾರಿ ವ್ಯಾಪಾರ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿದರು.

"ಅಮೆರಿಕದಲ್ಲಿ ಏನಾಗುತ್ತಿದೆ ಎಂಬುದು ಎಲ್ಲರ ಸಮಸ್ಯೆ" ಎಂದು ಉಭಯ ಯುಎಸ್-ಬ್ರಿಟಿಷ್ ನಾಗರಿಕ ಲಿಜ್ ಚೇಂಬರ್ಲಿನ್ ಲಂಡನ್ ರ‍್ಯಾಲಿಯಲ್ಲಿ ಎಎಫ್‌ಪಿಗೆ ತಿಳಿಸಿದರು. ಇದು ಆರ್ಥಿಕ ಹುಚ್ಚುತನ, ಅಮೆರಿಕಾವನ್ನು ಜಾಗತಿಕ ಹಿಂಜರಿತಕ್ಕೆ ತಳ್ಳಲಿದ್ದಾರೆ ಎಂದು ಕೂಗುತ್ತಿದ್ದರು.

ಬರ್ಲಿನ್‌ನಲ್ಲಿ, 70 ವರ್ಷದ ನಿವೃತ್ತ ಸುಸೇನ್ ಫೆಸ್ಟ್ ಎಂಬುವವರು ಟ್ರಂಪ್ "ಸಾಂವಿಧಾನಿಕ ಬಿಕ್ಕಟ್ಟನ್ನು" ಸೃಷ್ಟಿಸಿದ್ದಾರೆ "ಆ ವ್ಯಕ್ತಿ ಒಬ್ಬ ಹುಚ್ಚ" ಎಂದು ಆಕ್ರೋಶ ಹೊರಹಾಕಿದರು.

ಅಮೆರಿಕದಲ್ಲಿ, ಮೂವ್‌ಆನ್ ಮತ್ತು ವುಮೆನ್ಸ್ ಮಾರ್ಚ್‌ನಂತಹ ಎಡಪಂಥೀಯ ಗುಂಪುಗಳ ಒಕ್ಕೂಟವು 1,000 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಪ್ರತಿ ಕಾಂಗ್ರೆಸ್ ಜಿಲ್ಲೆಯಲ್ಲಿ "ಹ್ಯಾಂಡ್ಸ್ ಆಫ್" ಕಾರ್ಯಕ್ರಮಗಳನ್ನು ಆಯೋಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT