ಈ ಫೋಟೋ ಬೀಜಿಂಗ್‌ನಲ್ಲಿರುವ ಚೀನೀ 100 ಯುವಾನ್ ನೋಟುಗಳು ಮತ್ತು US 100 ಡಾಲರ್ ಬಿಲ್‌ಗಳನ್ನು ತೋರಿಸುತ್ತದೆ. Photo | AFP
ವಿದೇಶ

ಪ್ರತೀಕಾರದ ಸುಂಕ ಶೇ. 84ಕ್ಕೆ ಹೆಚ್ಚಿಸಿದ ಚೀನಾ; ಅಮೆರಿಕಕ್ಕೆ ಸ್ಥಳಾಂತರಗೊಳ್ಳುವಂತೆ ಕಂಪನಿಗಳಿಗೆ ಟ್ರಂಪ್ ಕರೆ

ಚೀನಾ ಈ ಮುಂಚೆ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು. ಇದೀಗ ಅದನ್ನು ಶೇ.84ಕ್ಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದೆ.

ಬೀಜಿಂಗ್/ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾದ ರಫ್ತುಗಳ ಮೇಲೆ ಶೇ.104 ರಷ್ಟು ಸುಂಕ ವಿಧಿಸುತ್ತಿದ್ದು, ಇದಕ್ಕೆ ಪ್ರತಿಯಾಗಿ ಚೀನಾ, ಅಮೆರಿಕದಿಂದ ಬರುವ ಎಲ್ಲಾ ಸರಕುಗಳ ಮೇಲಿನ ಸುಂಕವನ್ನು ಶೇ.84ಕ್ಕೆ ಹೆಚ್ಚಿಸಿದೆ.

ಚೀನಾ ಈ ಮುಂಚೆ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು. ಇದೀಗ ಅದನ್ನು ಶೇ.84ಕ್ಕೆ ಹೆಚ್ಚಿಸುವ ಮೂಲಕ ಅಮೆರಿಕಕ್ಕೆ ತಿರುಗೇಟು ನೀಡಿದೆ. ಈ ಹೊಸ ಸುಂಕ ಗುರುವಾರ ಮಧ್ಯಾಹ್ನ 12:01 ರಿಂದ ಜಾರಿಗೆ ಬರಲಿದೆ ಎಂದು ಚೀನಾ ಹಣಕಾಸು ಸಚಿವಾಲಯ ಪ್ರಕಟಣೆಲ್ಲಿ ತಿಳಿಸಿದೆ.

ಕಳೆದ ವಾರ, ಚೀನಾ ಎಲ್ಲಾ ಅಮೆರಿಕದ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸುವುದಾಗಿ ಹೇಳಿತ್ತು.

"ಯುನೈಟೆಡ್ ಸ್ಟೇಟ್ಸ್ ಚೀನಾ ವಿರುದ್ಧ ಸುಂಕ ಏರಿಕೆ ಮಾಡುವ ಮೂಲಕ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಿದೆ ಮತ್ತು ಚೀನಾದ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ತೀವ್ರವಾಗಿ ಉಲ್ಲಂಘಿಸುತ್ತಿದೆ" ಎಂದು ಸಚಿವಾಲಯ ಹೇಳಿದೆ.

ವಾಷಿಂಗ್ಟನ್‌ನ ಕ್ರಮಗಳು "ಬಹುಪಕ್ಷೀಯ ನಿಯಮ ಆಧಾರಿತ ವ್ಯಾಪಾರ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತವೆ" ಎಂದು ಚೀನಾ ಹೇಳಿದೆ.

ಚೀನಾದ ಪ್ರತೀಕಾರದ ಸುಂಕಕ್ಕೆ ಟ್ರಂಪ್ ತಕ್ಷಣ ಪ್ರತಿಕ್ರಿಯಿಸಿಲ್ಲ. ಆದರೆ ಸುಂಕಗಳನ್ನು ತಪ್ಪಿಸಿಕೊಳ್ಳಲು ಕಂಪನಿಗಳು ಅಮೆರಿಕಕ್ಕೆ ಸ್ಥಳಾಂತರಗೊಳ್ಳಲು ಪ್ರಾರಂಭಿಸಬೇಕು ಎಂದು ಕರೆ ನೀಡಿದ್ದಾರೆ.

"ನಿಮ್ಮ ಕಂಪನಿಯನ್ನು ಆಪಲ್‌ನಂತೆ ಅಮೆರಿಕಕ್ಕೆ ಸ್ಥಳಾಂತರಿಸಲು ಇದು ಉತ್ತಮ ಸಮಯ ಮತ್ತು ಇತರ ಹಲವು ಕಂಪನಿಗಳು ದಾಖಲೆ ಸಂಖ್ಯೆಯಲ್ಲಿ ಹೀಗೆ ಮಾಡುತ್ತಿವೆ" ಎಂದು ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಪ್ರತಿಸುಂಕ ನೀತಿಯಿಂದ ಭಾರತ ಸೇರಿದಂತೆ ವಿಶ್ವದ 50 ರಾಷ್ಟ್ರಗಳಿಗೆ ಈಗಾಗಲೇ ಬಿಸಿ ತಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Parliament Monsoon Session: ರಾಹುಲ್ ವಿರುದ್ಧ ಆಕ್ರೋಶ; ಸಂಸತ್ ಆವರಣದಲ್ಲಿ NDA ಸಂಸದರ ಬೃಹತ್ ಪ್ರತಿಭಟನಾ ಮೆರವಣಿಗೆ, ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ..!

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 111ಕ್ಕೆ ಏರಿಕೆ, ಹಲವರಿಗೆ ಗಾಯ

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!

ಬರ ಪರಿಹಾರಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ; ಅಗತ್ಯವಿದ್ದರೆ ನ್ಯಾಯಾಲಯದ ಮೊರೆ: DCM ಡಾ. ಪರಮೇಶ್ವರ್‌