ರೋಮ್‌ನಲ್ಲಿರುವ ಸೇಂಟ್ ಮೇರಿ ಮೇಜರ್ ಬೆಸಿಲಿಕಾದೊಳಗೆ ಏಪ್ರಿಲ್ 26, 2025 ರಂದು ಶನಿವಾರ ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ಅವರ ಸಮಾಧಿ ಸಮಾರಂಭಕ್ಕಾಗಿ ಒಯ್ಯಲಾದ ದೃಶ್ಯ. Photo | AP
ವಿದೇಶ

Vatican: ಪೋಪ್ ಫ್ರಾನ್ಸಿಸ್ ಗೆ ಭಾವಪೂರ್ಣ ವಿದಾಯ; ಅಂತ್ಯಕ್ರಿಯೆಲ್ಲಿ ಲಕ್ಷಾಂತರ ಜನ ಭಾಗಿ

ಕಳೆದ ಸೋಮವಾರ ನಿಧನರಾಗಿದ್ದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯನ್ನು ಅವರ ನೆಚ್ಚಿನ ರೋಮ್ ಚರ್ಚ್‌ನಲ್ಲಿ ನಡೆಸಲಾಯಿತು ಎಂದು ವ್ಯಾಟಿಕನ್ ತಿಳಿಸಿದೆ.

ವ್ಯಾಟಿಕನ್ ಸಿಟಿ: ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು, ಜನರ ಪೋಪ್ ಎಂದೇ ಕರೆಸಿಕೊಳ್ಳುತ್ತಿದ್ದ ಪೋಪ್ ಫ್ರಾನ್ಸಿಸ್ ಅವರಿಗೆ ಶನಿವಾರ ಭಾವಪೂರ್ಣ ವಿದಾಯ ಹೇಳಲಾಯಿತು.

ಕಳೆದ ಸೋಮವಾರ ನಿಧನರಾಗಿದ್ದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯನ್ನು ಅವರ ನೆಚ್ಚಿನ ರೋಮ್ ಚರ್ಚ್‌ನಲ್ಲಿ ನಡೆಸಲಾಯಿತು ಎಂದು ವ್ಯಾಟಿಕನ್ ತಿಳಿಸಿದೆ.

88ನೇ ವಯಸ್ಸಿನಲ್ಲಿ ನಿಧನರಾದ ಅರ್ಜೆಂಟೀನಾದ ಪೋಪ್ ಅವರನ್ನು ಇಟಾಲಿಯನ್ ರಾಜಧಾನಿಯಲ್ಲಿರುವ ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾದಲ್ಲಿ ಇಂದು ಮಧ್ಯಾಹ್ನ 1:00 ಗಂಟೆಗೆ ಪ್ರಾರಂಭವಾದ 30 ನಿಮಿಷಗಳ ಅಂತ್ಯಕ್ರಿಯೆಲ್ಲಿ ಭಾರತ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಿಂದ ಸುಮಾರು 4 ಲಕ್ಷ ಜನ ಭಾಗವಹಿಸಿದ್ದರು.

ಅಂತ್ಯಕ್ರಿಯೆಗೂ ಮುನ್ನ ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್ ಸಿಟಿಯಲ್ಲಿ (Vatican City) ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಟ್ರಂಪ್ ಸೇರಿ ಸುಮಾರು 160 ದೇಶಗಳ ಗಣ್ಯರು ಅಂತಿಮ ದರ್ಶನ ಪಡೆದರು.

ಭಾರತದ ಪರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು, ಪೋಪ್ ಗೆ ಗೌರವ ಸಲ್ಲಿಸಿದರು.

ಫ್ರಾನ್ಸಿಸ್ ಅವರು ತಮ್ಮ ಜೀವಿತಾವಧಿಯಲ್ಲಿ ಧರಿಸಿದ್ದ ಪೆಕ್ಟೋರಲ್ ಶಿಲುಬೆಯ ಪ್ರತಿಕೃತಿಯನ್ನು ಶವಪೆಟ್ಟಿಗೆಯ ಮೇಲೆ ಹಾಕಲಾಗಿತ್ತು. ಕಾರ್ಡಿನಲ್​ ಕೆವಿನ್​ ಫರ್ರೆಲ್​ ಅವರು ಸಂಪ್ರದಾಯ ನೆರವೇರಿಸಿದರು.

ಪೋಪ್​ ಫ್ರಾನ್ಸಿಸ್​ ಲ್ಯಾಟಿನ್​ ಅಮೆರಿಕದ ಮೊದಲ ಧರ್ಮಗುರುವಾಗಿದ್ದು, ಜೆಸೂಟ್​ ಆದೇಶದ ಮೊದಲಿಗರಾಗಿದ್ದು, ಅವರು ಸರಳ ಶವಸಂಸ್ಕಾರ ಸಂಪ್ರದಾಯಕ್ಕೆ ಮನವಿ ಮಾಡಿದ್ದರು. ಅವರ ಇಚ್ಛೆಯನ್ನು ಗಮನದಲ್ಲಿರಿಸಿಕೊಂಡು, ಹಿಂದಿನ ಪಾಪಲ್ ಅಂತ್ಯಕ್ರಿಯೆಗಳಲ್ಲಿ ಬಳಸಲಾಗುತ್ತಿದ್ದ ಸೈಪ್ರೆಸ್, ಸೀಸ ಮತ್ತು ಓಕ್‌ನ ಸಾಂಪ್ರದಾಯಿಕ ಮೂರು ಪದರದ ಶವಪೆಟ್ಟಿಗೆಯ ಬದಲಾಗಿ ಸಾಧಾರಣವಾದ ಮರದ ಶವದ ಪೆಟ್ಟಿಗೆಯನ್ನು ಬಳಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT