ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಾರ್ಕೊ ರುಬಿಯೊ 
ವಿದೇಶ

ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾವೇ: ಅಮೆರಿಕಾ ಪುನರುಚ್ಛಾರ

EWTN ಮಾಧ್ಯಮದ ಸಂದರ್ಶನದ ವೇಳೆ ಮಾತನಾಡಿರುವ ಮಾರ್ಕೊ ರುಬಿಯೊ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕುರಿತು ಮಾತನಾಡಿದರು.

ನ್ಯೂಯಾರ್ಕ್: ಭಾರತ-ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾವೇ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಪರಮಾಣು ಸಶಸ್ತ್ರ ದೇಶಗಳ ನಡುವೆ ಕದನ ವಿರಾಮ ಏರ್ಪಟ್ಟಿತು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಹೇಳಿದ್ದಾರೆ.

EWTN ಮಾಧ್ಯಮದ ಸಂದರ್ಶನದ ವೇಳೆ ಮಾತನಾಡಿರುವ ಮಾರ್ಕೊ ರುಬಿಯೊ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಕುರಿತು ಮಾತನಾಡಿದರು.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಶಾಂತಿಗೆ ಬದ್ಧರಾಗಿದ್ದು, ಶಾಂತಿಯ ಅಧ್ಯಕ್ಷರೂ ಆಗಿದ್ದಾರೆ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಪರಿಸ್ಥಿತಿ ಎದುರಾದಾಗ ಮಧ್ಯಸ್ಥಿಕೆ ವಹಿಸಿ ಎರಡು ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಡುವಂತೆ ಮಾಡಿದರು ಎಂದು ತಿಳಿಸಿದ್ದಾರೆ.

ಇದೇ ವೇಳೆ ಮಧ್ಯಸ್ಥಿಕೆ ವಹಿಸಿದ ರಾಷ್ಟ್ರಗಳ ಕುರಿತಂತೆಯೂ ಮಾತನಾಡಿರುವ ಅವರು, ಇತ್ತೀಚೆಗೆ ಕಾಂಬೋಡಿಯಾ –ಥಾಯ್ಲೆಂಡ್, ಅಜರ್‌ಬೈಜಾನ್– ಅರ್ಮೇನಿಯಾ ಸೇರಿದಂತೆ, 30 ವರ್ಷಗಳಿಂದ ನಡೆಯುತ್ತಿರುವ ಡಿಆರ್‌ಸಿ (ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ)-ರುವಾಂಡಾ ನಡುವೆ ಶಾಂತಿ ಸ್ಥಾಪಿಸಿ ಕದನ ವಿರಾಮಕ್ಕೆ ಸಹಿ ಹಾಕಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಈ ರೀತಿಯ ಸಂದಾನ ಉಪಕ್ರಮಗಳನ್ನು ನಡೆಸಿರುವುದಕ್ಕೆ ಅಮೆರಿಕ ಹೆಮ್ಮೆಪಡುತ್ತದೆ. ಜಾಗತಿಕವಾಗಿ ಯುದ್ಧಗಳನ್ನು ನಿಲ್ಲಿಸಲು ಮತ್ತು ಕೊನೆಗೊಳಿಸಲು ಸಮಯವನ್ನು ಮೀಸಲಿಡುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಗ್ಗಿಲ್ಲದ AI ಕಂಟೆಂಟ್, ಡೀಪ್‌ಫೇಕ್‌ಗಳಿಗೆ ಬ್ರೇಕ್: ಸಾಮಾಜಿಕ ಜಾಲತಾಣಗಳಿಗೆ ಕೇಂದ್ರದ ಹೊಸ ನಿಯಮ!

ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ದೂರವಾಣಿ ಕರೆ; ಪಶ್ಚಿಮ ಏಷ್ಯಾ ಬಿಕ್ಕಟ್ಟು, ಕಾರ್ಯತಂತ್ರದ ಸಂಬಂಧಗಳ ಬಗ್ಗೆ ಚರ್ಚೆ

ರಾಜ್ಯಸಭೆಯಲ್ಲಿ ಖರ್ಗೆ ರಣಕಹಳೆ: ಪ್ರತಿಪಕ್ಷಗಳ ಭಾವನೆಗಳನ್ನು ಅಮಿತ್ ಶಾಗೆ ತಿಳಿಸಿ – ರಿಜಿಜುಗೆ ಸಭಾಪತಿ ರಾಧಾಕೃಷ್ಣನ್ ಸೂಚನೆ

ಕ್ಯಾಲಿಫೋರ್ನಿಯಾದಲ್ಲಿ ಏಕಾಂಗಿ ಪಾದಯಾತ್ರೆ: ಪೆಟ್ರೋಲಿಯಂಗೆ ಪರ್ಯಾಯ ಶೋಧದಲ್ಲಿ ತೊಡಗಿದ್ದ ಭಾರತೀಯ ಮೂಲದ ಪಿಎಚ್‌ಡಿ ವಿದ್ಯಾರ್ಥಿ ನಿಗೂಢ ಸಾವು!

ಪ್ರತಿಭಟನೆ ನಡೆಸಿದಾಕ್ಷಣ ಜೆನ್ ಝೀ ಗಳು ರಾಷ್ಟ್ರವಿರೋಧಿಯಾಗುವುದಿಲ್ಲ: RSS ಮುಖ್ಯಸ್ಥ ಮೋಹನ್ ಭಾಗವತ್