ಗೌತಮ್ ಅದಾನಿ 
ವಿದೇಶ

ಬಾಂಡ್ ವಂಚನೆ ಪ್ರಕರಣ: ಗೌತಮ್ ಅದಾನಿಗೆ ನೋಟಿಸ್ ನೀಡಲು ಭಾರತದ ಸಹಾಯ ಕೋರಿದ ಅಮೆರಿಕದ SEC!

ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ, ಅಮೆರಿಕದಲ್ಲಿ ಲಂಚ ಪ್ರಕರಣವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ, ಅಮೆರಿಕದಲ್ಲಿ ಲಂಚ ಪ್ರಕರಣವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಮೆರಿಕದ ಮಾರುಕಟ್ಟೆ ನಿಯಂತ್ರಕ ಅದಾನಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದೆ. ಈಗ ಇದಕ್ಕಾಗಿ ಅದು ಭಾರತ ಸರ್ಕಾರದಿಂದ ಸಹಾಯ ಕೋರಿದೆ. ಅದಾನಿ ಗ್ರೂಪ್‌ನ ಮುಖ್ಯಸ್ಥರಾದ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿಗೆ ಕಾನೂನು ನೋಟಿಸ್ ಕಳುಹಿಸುವಲ್ಲಿ ಸಹಾಯಕ್ಕಾಗಿ US ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ (ಯುಎಸ್ ಎಸ್‌ಇಸಿ) ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸಿದೆ. ಈ ಪ್ರಕರಣವು ಯುಎಸ್ ನ್ಯಾಯಾಲಯದಲ್ಲಿ ದಾಖಲಾಗಿರುವ 750 ಮಿಲಿಯನ್ ಡಾಲರ್ ಬಾಂಡ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದೆ.

ನ್ಯೂಯಾರ್ಕ್‌ನ ಪೂರ್ವ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಜೇಮ್ಸ್ ಆರ್ ಅವರು ಆಗಸ್ಟ್ 11ರಂದು ಆದೇಶ ನೀಡಿದ್ದರು. ಹೀಗಾಗಿ ಹೇಗ್ ಸರ್ವಿಸ್ ಕನ್ವೆನ್ಷನ್ ಅಡಿಯಲ್ಲಿ ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯವನ್ನು ಸಂಪರ್ಕಿಸಿರುವುದಾಗಿ ಎಸ್‌ಇಸಿ ತಿಳಿಸಿದೆ. ಹೇಗ್ ಸರ್ವಿಸ್ ಕನ್ವೆನ್ಷನ್ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕಾನೂನು ದಾಖಲೆಗಳ ವಿತರಣೆಯನ್ನು ನಿಯಂತ್ರಿಸುತ್ತದೆ. ಯಾವುದೇ ಪ್ರಗತಿಯ ಬಗ್ಗೆ ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸುವುದನ್ನು ಮತ್ತು ನ್ಯಾಯಾಲಯಕ್ಕೆ ತಿಳಿಸುವುದನ್ನು ಎಸ್‌ಇಸಿ ಮುಂದುವರಿಸುವುದಾಗಿ ತಿಳಿಸಿದೆ.

ಅದಾನಿ ವಿರುದ್ಧದ ಬಾಂಡ್ ವಂಚನೆ ಪ್ರಕರಣವೇನು?

ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ 2024ರ ನವೆಂಬರ್ ನಲ್ಲಿ ತನ್ನ ದೂರಿನಲ್ಲಿ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಸಂಸ್ಥಾಪಕ ಗೌತಮ್ ಅದಾನಿ ಮತ್ತು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅದಾನಿಯ ಸೋದರಳಿಯ ಸಾಗರ್ ಅದಾನಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಭಾರತದಲ್ಲಿ ಇಂಧನ ಒಪ್ಪಂದಗಳನ್ನು ಪಡೆಯಲು ಇಬ್ಬರೂ ಕೋಟ್ಯಂತರ ರೂಪಾಯಿಗಳ ಲಂಚವನ್ನು ನೀಡಿದ್ದಾರೆ ಅಥವಾ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯಂತ್ರಕ ಆರೋಪಿಸಿದೆ. ಯುಎಸ್ ನಿಯಂತ್ರಕದ ಪ್ರಕಾರ, ಈ ಒಪ್ಪಂದಗಳನ್ನು 2021ರಲ್ಲಿ ಗ್ರೀನ್ ಬಾಂಡ್‌ಗಳನ್ನು ನೀಡುವ ಮೂಲಕ 750 ಮಿಲಿಯನ್ ಡಾಲರ್ ಸಂಗ್ರಹಿಸಲು ಬಳಸಲಾಯಿತು. ಇದರಲ್ಲಿ 175 ಮಿಲಿಯನ್ ಡಾಲರ್ (17.5 ಕೋಟಿ) ಮೌಲ್ಯದ ಬಾಂಡ್‌ಗಳನ್ನು ಅಮೇರಿಕನ್ ಹೂಡಿಕೆದಾರರಿಗೆ ಮಾರಾಟ ಮಾಡಲಾಗಿದೆ ಎಂದು SEC ಆರೋಪಿಸಿದೆ.

ಗೌತಮ್ ಮತ್ತು ಸಾಗರ್ ಅದಾನಿಗೆ ಇನ್ನೂ ಬಂದಿಲ್ಲ ಸಮನ್ಸ್

ಯುಎಸ್ ಮಾರುಕಟ್ಟೆ ನಿಯಂತ್ರಕದ ಸ್ಥಿತಿ ವರದಿಯ ಪ್ರಕಾರ, ನವೆಂಬರ್ 2024ರಲ್ಲಿ ದೂರು ಸಲ್ಲಿಸಿದಾಗಿನಿಂದ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ಅಥವಾ ಅವರ ವಕೀಲರಿಗೆ ಇನ್ನೂ ಔಪಚಾರಿಕವಾಗಿ ಸಮನ್ಸ್ ಬಂದಿಲ್ಲ. 2025ರ ಆರಂಭದಿಂದಲೂ ಹಲವಾರು ಪ್ರಯತ್ನಗಳ ಹೊರತಾಗಿಯೂ, ಸಮನ್ಸ್ ಮತ್ತು ದೂರನ್ನು ಇನ್ನೂ ಔಪಚಾರಿಕವಾಗಿ ತಲುಪಿಸಲಾಗಿಲ್ಲ ಎಂದು ಯುಎಸ್ ಎಸ್‌ಇಸಿ ತಿಳಿಸಿದೆ. ಈ ಪ್ರಯತ್ನಗಳಲ್ಲಿ ಅದಾನಿ ಮತ್ತು ಅದಾನಿ ಗ್ರೂಪ್ ಅಧಿಕಾರಿಗಳು ಅಥವಾ ಅವರ ವಕೀಲರಿಗೆ ನೇರವಾಗಿ ನೋಟಿಸ್ ಕಳುಹಿಸುವುದು ಮತ್ತು ಭಾರತೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು ಸೇರಿವೆ. ಗೌತಮ್ ಮತ್ತು ಸಾಗರ್ ಅದಾನಿ ಸಾರ್ವಜನಿಕ ಕಂಪನಿಗಳ ನಿರ್ದೇಶಕರಾಗಿ ಸೇವೆ ಸಲ್ಲಿಸದಂತೆ ದಂಡ, ತಡೆಯಾಜ್ಞೆ ಅಥವಾ ನಿಷೇಧವನ್ನು ಯುಎಸ್ ನಿಯಂತ್ರಕ ಕೋರುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Cash for query: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಸಂಕಷ್ಟ; ಆರೋಪ ಪಟ್ಟಿ ಸಲ್ಲಿಸಲು ಸಿಬಿಐಗೆ ಲೋಕಪಾಲ ಅನುಮತಿ!

9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಶಾಲಾ ಶಿಕ್ಷಕ, BJP ನಾಯಕ ಪದ್ಮರಾಜನ್ ಗೆ ಸಾಯೋವರೆಗೂ ಜೈಲು!

ಬಿಹಾರದಲ್ಲಿ ಟೈಗರ್‌ ಅಬಿ ಜಿಂದಾ ಹೈ (ನೇರ ನೋಟ)

ನೌಗಮ್ ಠಾಣಾ ಸ್ಫೋಟ: ರಸಾಯನಶಾಸ್ತ್ರ ಮತ್ತು ನಿರ್ಲಕ್ಷ್ಯಗಳ ದುರಂತ ಸಂಗಮ

ಬಿಜೆಪಿಗೆ ಬಿಸಿ ತುಪ್ಪವಾದ ಚಿರಾಗ್ ಪಾಸ್ವಾನ್: ನಿತೀಶ್ ಅವರೇ ನಮ್ಮ ಸಿಎಂ; ನೂತನ ಸರ್ಕಾರ ಸೇರುತ್ತೇವೆ ಎಂದ ಕೇಂದ್ರ ಸಚಿವ! Video

SCROLL FOR NEXT