ಟ್ರಂಪ್ ಪುಟಿನ್ ಭೇಟಿ ವೇಳೆ ಹಾರಿದ ಬಿ2 ಬಾಂಬರ್ 
ವಿದೇಶ

Alaska summit: Trump-Putin ಮಾತುಕತೆ ವೇಳೆ ತಲೆ ಮೇಲೆ ಅಮೆರಿಕದ B-2 bomber ಫೈಟರ್ ಜೆಟ್ ಹಾರಾಟ!

ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಅಲಸ್ಕಾ: ಅಲಸ್ಕಾದಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ದ್ವಿಪಕ್ಷೀಯ ಮಾತುಕತೆ ಹಲವು ನಾಟಕೀಯ ಘಟನೆಗಳಿಗೆ ಸಾಕ್ಷಿಯಾಗಿದ್ದು, ಪ್ರಮುಖವಾಗಿ B-2 bomber ಪ್ರಹಸನ ಇದೀಗ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಅಂತ್ಯ ಹಾಡಿ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡುವೆ ಅಮೆರಿಕದ ಅಲಾಸ್ಕಾದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು.

ಮಾತುಕತೆ ಸಂಬಂಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ನಿಯೋಗದೊಂದಿಗೆ ಅಲಸ್ಕಾದ ವಿಶೇಷ ವಾಯುನೆಲೆಯಲ್ಲಿ ಬಂದಿಳಿದರು.

ಈ ವೇಳೆ ಸ್ವತಃ ಡೊನಾಲ್ಡ್ ಟ್ರಂಪ್ ವ್ಲಾಡಿಮಿರ್ ಪುಟಿನ್ ರನ್ನು ಸ್ವಾಗತಿಸಿ ವೇದಿಕೆಯತ್ತ ಕರೆತಂದರು. ಇದೇ ಸಂದರ್ಭದಲ್ಲಿ ಉಭಯ ನಾಯಕರ ತಲೆ ಮೇಲೆ ಅಮೆರಿಕ ಸೇನೆಯ ವಿಧ್ವಂಸಕ ಬಾಂಬರ್ ಫೈಟರ್ ಜೆಟ್ B-2 bomber ಹಾರಾಡಿದ್ದು, ಅದಕ್ಕೆಅಮೆರಿಕದ F-22 ರಾಪ್ಟರ್ ಫೈಟರ್‌ ಜೆಟ್ ಗಳು ಸಾಥ್ ನೀಡಿದವು. ಇದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸೇನಾ ಗೌರವ ಎಂದ ಅಮೆರಿಕ

ಇನ್ನು ರಷ್ಯಾ ಅಧ್ಯಕ್ಷರ ಆಗಮನದ ವೇಳೆ ಯುದ್ಧ ವಿಮಾನಗಳು ಹಾರಾಡಿರುವ ಕುರಿತು ಮಾಹಿತಿ ನೀಡಿರುವ ಅಮೆರಿಕ ಇದು ಅತಿಥಿಗಳಿಗೆ ಅಮೆರಿಕದ ಸೇನಾ ಗೌರವ ಎಂದು ಹೇಳಿಕೊಂಡಿದೆ.

ಅದಾಗ್ಯೂ ಅಮೆರಿಕದ ಈ ನಡೆ ಜಗತ್ತಿನಾದ್ಯಂತ ವ್ಯಾಪಕ ಪರ-ವಿರೋಧ ಟೀಕೆಗಳಿಗೆ ಕಾರಣವಾಗಿದೆ. ಅಮೆರಿಕದ ಈ ನಡೆಯನ್ನು ಟೀಕಿಸಿರುವ ನೆಟ್ಟಿಗರು ಸದಾಕಾಲ ಆತಂಕದಲ್ಲೇ ಸಮಯ ಕಳೆಯುವ ಅಮೆರಿಕ ಪುಟಿನ್ ಭೇಟಿ ಸಂದರ್ಭದಲ್ಲೂ ತನ್ನ ಭಯವನ್ನು ಜಗಜ್ಜಾಹಿರು ಮಾಡಿದೆ.

ಬಿ2 ಬಾಂಬರ್ ಹಾರಿಸುವ ಮೂಲಕ ತಾನೆಷ್ಟು ಅಸುರಕ್ಷತೆ ಅನುಭವಿಸುತ್ತಿದೆ ತೋರಿಸಿದೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದ B-2 bomber

ಜೂನ್ ಅಂತ್ಯದಲ್ಲಿ ಅಮೆರಿಕದ ಬಿ-2 ವಿಮಾನಗಳು ಪ್ರಧಾನವಾಗಿ ಪ್ರದರ್ಶನಗೊಂಡಿದ್ದವು, ರಾಡಾರ್ ತಪ್ಪಿಸಿಕೊಂಡ ಏಳು ಬಾಂಬರ್‌ಗಳು ಅಮೆರಿಕದ ಮಿತ್ರ ರಾಷ್ಟ್ರವಾದ ಇಸ್ರೇಲ್‌ಗೆ ಬೆಂಬಲವಾಗಿ ಇರಾನಿನ ಮೂರು ಪರಮಾಣು ತಾಣಗಳ ಮೇಲೆ "ಬಂಕರ್-ಬಸ್ಟರ್" ಬಾಂಬ್‌ಗಳನ್ನು ಸುರಿಸಿತ್ತು.

ಆ ಕಾರ್ಯಾಚರಣೆಯಲ್ಲಿ ಈ ಬಿ2 ಬಾಂಬರ್ ಗಳು ಬರೊಬ್ಬರಿ 36 ಗಂಟೆಗಳ ಕಾಲ ಸತತವಾಗಿ ಹಾರಾಟ ನಡೆಸಿದ್ದವು. ವಿಮಾನಗಳು ಅಂತಿಮವಾಗಿ ಎಷ್ಟು ಹಾನಿಯನ್ನುಂಟುಮಾಡಿದವು ಎಂಬುದರ ಕುರಿತು ಕೆಲವು ಚರ್ಚೆಗಳು ನಡೆದಿದ್ದರೂ, ಬಿ-2 ವಿಮಾನಗಳು ತಮ್ಮ ರಹಸ್ಯ ಹೆಸರನ್ನು ಸಮರ್ಥಿಸಿಕೊಂಡಿವೆ ಎಂಬುದರಲ್ಲಿ ಯಾವುದೇ ಸಂದೇಹವಿರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಡೊನಾಲ್ಡ್ ಟ್ರಂಪ್ ಕರೆಗೂ ನಿಲ್ಲದ ಘರ್ಷಣೆ: ಇಸ್ರೇಲ್ ದಾಳಿಗೆ ಗಾಜಾದಲ್ಲಿ ಕನಿಷ್ಠ 60 ಮಂದಿ ಸಾವು

ಬಿಹಾರ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ: ಶೇ.50ರಷ್ಟು ಸಚಿವರಿಗೆ ಕೊಕ್..?

ಕಫ್ ಸಿರಪ್ ನ ಬಗ್ಗೆ ಕೇಂದ್ರ ಸರ್ಕಾರ ಯೂ-ಟರ್ನ್: ಮಧ್ಯ ಪ್ರದೇಶ, ರಾಜಸ್ತಾನ, ತಮಿಳು ನಾಡು ಬ್ಯಾನ್

KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್: ಮತ್ತೆ ವಿವಾದದ ಕಿಡಿಹೊತ್ತಿಸಿದ ಮಾಜಿ ಸಚಿವ ರಾಜಣ್ಣ

2013-18ರ ಸಿದ್ದರಾಮಯ್ಯ ಬೇರೆ, ಈಗಿನ ಸಿದ್ದುನೇ ಬೇರೆ; ನಾಯಕನಾದವನಿಗೆ ಹೇಳಲಾಗದ ಒತ್ತಡ ಇರುತ್ತದೆ: ರಾಜಣ್ಣ ಹೊಸ ಬಾಂಬ್

SCROLL FOR NEXT