ಅರ್ಜುನ ರಣತುಂಗ 
ವಿದೇಶ

ಶ್ರೀಲಂಕಾ ತೈಲ ಹಗರಣ: 1996ರ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಬಂಧನ ಸಾಧ್ಯತೆ

ಧೀರ್ಘಕಾಲಿಕ ಗುತ್ತಿಗೆ ನೀಡುವ ಕಾನೂನಾತ್ಮಕ ಪ್ರಕ್ರಿಯೆಯನ್ನು ತಿರುಚಿ ಅಧಿಕ ಬೆಲೆಗೆ ಸ್ಥಳದಲ್ಲೇ ಖರೀದಿಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ರಣತುಂಗ ಹಾಗೂ ಅವರ ಸಹೋದರ ಪ್ರಮುಖ ಆರೋಪಿಗಳಾಗಿದ್ದಾರೆ.

ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದೇಶಕ್ಕೆ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಅರ್ಜುನ ರಣತುಂಗ ಅವರು ದೇಶದ ಪೆಟ್ರೋಲಿಯಂ ಸಚಿವರಾಗಿದ್ದ ವೇಳೆ ಅವರ ವಿರುದ್ಧ ಕೇಳಿಬಂದಿದ್ದ ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲು ಉದ್ದೇಶಿಸಿರುವುದಾಗಿ ಅಧಿಕಾರಿಗಳು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಧೀರ್ಘಕಾಲಿಕ ಗುತ್ತಿಗೆ ನೀಡುವ ಕಾನೂನಾತ್ಮಕ ಪ್ರಕ್ರಿಯೆಯನ್ನು ತಿರುಚಿ ಅಧಿಕ ಬೆಲೆಗೆ ಸ್ಥಳದಲ್ಲೇ ಖರೀದಿಸಿದ್ದಾರೆ ಎನ್ನಲಾದ ಪ್ರಕರಣದಲ್ಲಿ ರಣತುಂಗ ಹಾಗೂ ಅವರ ಸಹೋದರ ಪ್ರಮುಖ ಆರೋಪಿಗಳಾಗಿದ್ದಾರೆ.

"ಒಟ್ಟು ಇಂಥ 27 ಖರೀದಿಗಳಿಂದ ಸರ್ಕಾರಿ ಬೊಕ್ಕಸಕ್ಕೆ 800 ದಶಲಕ್ಷ ರೂಪಾಯಿ ನಷ್ಟವಾಗಿದೆ" ಎಂದು ಲಂಚ ಅಥವಾ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಆಯೋಗ ನ್ಯಾಯಾಲಯಕ್ಕೆ ತಿಳಿಸಿದೆ. 2017ರಲ್ಲಿ ಈ ಒಪ್ಪಂದ ಮಾಡಿಕೊಳ್ಳುವ ವೇಳೆ ಈ ಮೊತ್ತ 50 ಲಕ್ಷ ಡಾಲರ್ ಆಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅರ್ಜುನ ರಣತುಂಗಾ ಪ್ರಸ್ತುತ ಹೊರದೇಶದಲ್ಲಿದ್ದು, ದೇಶಕ್ಕೆ ಮರಳಿದ ತಕ್ಷಣ ಅವರನ್ನು ಬಂಧಿಸಲಾಗುವುದು ಎಂದು ಆಯೋಗ ಕೊಲಂಬೊ ಮ್ಯಾಜಿಸ್ಟ್ರೇಟ್ ಅಸಂಗ ಬೊದರಗಾಮ ಅವರಿಗೆ ತಿಳಿಸಿದೆ.

ರಣತುಂಗ ಅವರ ಅಣ್ಣ ಧಮ್ಮಿಕಾ ರಣತುಂಗ, ಈ ಗುತ್ತಿಗೆ ನೀಡಿದ ಸಮಯದಲ್ಲಿ ಸರ್ಕಾರಿ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್‍ನ ಅಧ್ಯಕ್ಷರಾಗಿದ್ದರು. ಅವರನ್ನು ಸೋಮವಾರ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಮೆರಿಕ ಹಾಗೂ ಶ್ರೀಲಂಕಾ ಪೌರತ್ವ ಹೊಂದಿರುವ ಧಮ್ಮಿಕಾ ವಿರುದ್ಧ ಪ್ರಯಾಣ ನಿಷೇಧ ಹೇರಲಾಗಿದೆ.

ಈ ಪ್ರಕರಣವನ್ನು ಮಾರ್ಚ್ 13 ರಂದು ಮತ್ತೆ ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. 62 ವರ್ಷದ ಅರ್ಜುನ ರಣತುಂಗ, ಶ್ರೀಲಂಕಾ ಕ್ರೀಡೆಯಲ್ಲಿ ಅತ್ಯಂತ ಪ್ರತಿಭಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅವರು, ಆಸ್ಟ್ರೇಲಿಯಾ ವಿರುದ್ಧದ ಅದ್ಭುತ ಅಂತಿಮ ಗೆಲುವಿನ ನಂತರ 1996 ರಲ್ಲಿ ವಿಶ್ವಕಪ್‌ಗ ಕ್ರಿಕೆಟ್ ನಲ್ಲಿ ಮುನ್ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!