ಅಪಘಾತಕ್ಕೀಡಾದ ಸ್ಥಳಕ್ಕೆ ಧಾವಿಸಿದ ತುರ್ತು ನಿರ್ವಹಣಾ ತಂಡ 
ವಿದೇಶ

ಟೆಕ್ಸಾಸ್: ಮೆಕ್ಸಿಕನ್ ನೌಕಾಪಡೆಯ ವಿಮಾನ ಪತನ, ಐವರು ಸಾವು!

ನಾಲ್ವರು ನೌಕಪಡೆಯ ಅಧಿಕಾರಿಗಳು, ನಾಲ್ವರು ನಾಗರಿಕರು ಮತ್ತು ಒಂದು ಮಗು ವಿಮಾನದಲ್ಲಿದ್ದರು ಎನ್ನಲಾಗಿದೆ. ಆದರೆ ಅವರಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ

ಟೆಕ್ಸಾಸ್: ಯುವ ವೈದ್ಯಕೀಯ ರೋಗಿ ಮತ್ತಿತರ ಏಳು ಜನರನ್ನು ಹೊತ್ತೊಯ್ಯುತ್ತಿದ್ದ ಮೆಕ್ಸಿಕನ್ ನೌಕಾಪಡೆಯ ಚಿಕ್ಕ ವಿಮಾನವೊಂದು ಗಾಲ್ವೆಸ್ಟನ್ ಬಳಿ ಅಪಘಾತಕ್ಕೀಡಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಸಮುದ್ರದಲ್ಲಿ ಹುಡುಕಾಟ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾಲ್ವರು ನೌಕಪಡೆಯ ಅಧಿಕಾರಿಗಳು, ನಾಲ್ವರು ನಾಗರಿಕರು ಮತ್ತು ಒಂದು ಮಗು ವಿಮಾನದಲ್ಲಿದ್ದರು ಎನ್ನಲಾಗಿದೆ. ಆದರೆ ಅವರಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ ಎಂದು ಮೆಕ್ಸಿಕೊದ ನೌಕಾಪಡೆಯು ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್‌ಗೆ ಹೇಳಿಕೆಯಲ್ಲಿ ತಿಳಿಸಿದೆ.

ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಪೆಟಿ ಆಫೀಸರ್ (U.S. Coast Guard Petty) ಲ್ಯೂಕ್ ಬೇಕರ್ ಖಚಿತಪಡಿಸಿದ್ದಾರೆ. ಅಪಘಾತಕ್ಕೆ ಕಾರಣ ತನಿಖೆ ನಡೆಯುತ್ತಿದೆ.

ಸೋಮವಾರ ಮಧ್ಯಾಹ್ನ ಹೂಸ್ಟನ್‌ನ ಆಗ್ನೇಯಕ್ಕೆ 50 ಮೈಲಿಗಳು (80.5 ಕಿಲೋಮೀಟರ್) ದೂರದಲ್ಲಿರುವ ಟೆಕ್ಸಾಸ್ ಕರಾವಳಿ ಬಳಿ ಈ ದುರ್ಘಟನೆ ಸಂಭವಿಸಿದೆ.

ವೈದ್ಯಕೀಯ ಕಾರ್ಯಾಚರಣೆಗೆ ನೆರವಾಗುತ್ತಿದ್ದ ವಿಮಾನ ಅಪಘಾತಕ್ಕೀಡಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೆಕ್ಸಿಕೊದ ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣ: ಏರ್ ಪೋರ್ಟ್ ನಲ್ಲಿ ಬಿಜೆಪಿ MLA ಬೈರತಿ ಬಸವರಾಜ್ ಬಂಧನ!

OP Sindoor ಎಫೆಕ್ಟ್: ಮೆಗಾ Rafale ಜೆಟ್ ಯೋಜನೆಗೆ 'ಕೇಂದ್ರ' ಅನುಮೋದನೆ, 114 ಜೆಟ್‌ ಖರೀದಿ, ಬಹುತೇಕ ಭಾರತದಲ್ಲೇ ನಿರ್ಮಾಣ!

News wrap 12-02-2026| ನಾನು ರಾಜಕಾರಣ ಮಾಡೋಕೇ ದಿಲ್ಲಿಗೆ ಬಂದಿರೋದು- ಡಿಕೆ ಶಿವಕುಮಾರ್; ಹೆಬ್ಬಾಳ–ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ ಬ್ರೇಕ್; ರಾಹುಲ್ ಗಾಂಧಿ ಫೋಟೋ ಎಡಿಟ್: ಶಾಸಕ ಆರಗ ಜ್ಞಾನೇಂದ್ರ PA ಬಂಧನ

ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಳ: ಮಧ್ಯಮ ವರ್ಗ ತುಳಿಯುವ ಪ್ರಯತ್ನವೇ? ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಮಾರಾಟವಾಗದೇ ಉಳಿದದ್ದಾ? or ಕುಡಿದು ಉಳಿದದ್ದಾ?: ದೆಹಲಿ ಸ್ಟೇಡಿಯಂ ಸಿಬ್ಬಂದಿ ಪಾನೀಯ ತುಂಬುತ್ತಿರುವ Video Viral

SCROLL FOR NEXT