ಕಾಲ್ ಆಫ್ ಡ್ಯೂಟಿ ತಯಾರಕಾ ಜಾಂಪೆಲ್ಲಾ ಸಾವು 
ವಿದೇಶ

ಫೆರಾರಿ ಕಾರು ಅಪಘಾತ, ಬೆಂಕಿ: Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಸಾವು!

Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಅವರ ದುಬಾರಿ ಫೆರಾರಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತು ಅದರೊಳಗಿದ್ದ ವಿನ್ಸ್ ಜಾಂಪೆಲ್ಲಾ ಕಾರಿನೊಳಗೇ ಸಾವನ್ನಪ್ಪಿದ್ದಾರೆ.

ಕ್ಯಾಲಿಫೋರ್ನಿಯಾ: ಅಮೆರಿಕದ ಲಾಸ್ ಎಂಜಲೀಸ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಗೇಮ್ ತಯಾರಿಕಾ ವಿನ್ಸ್ ಜಾಂಪೆಲ್ಲಾ ನಿಧನರಾಗಿದ್ದಾರೆ.

Call Of Duty ತಯಾರಕ ವಿನ್ಸ್ ಜಾಂಪೆಲ್ಲಾ ಅವರ ದುಬಾರಿ ಫೆರಾರಿ ಕಾರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತು ಅದರೊಳಗಿದ್ದ ವಿನ್ಸ್ ಜಾಂಪೆಲ್ಲಾ ಕಾರಿನೊಳಗೇ ಸಾವನ್ನಪ್ಪಿದ್ದಾರೆ.

ಲಾಸ್ ಏಂಜಲೀಸ್‌ನ ಉತ್ತರಕ್ಕೆ ಸ್ಯಾನ್ ಗೇಬ್ರಿಯಲ್ ಪರ್ವತಗಳಲ್ಲಿನ ಅತೀ ಹೆಚ್ಚು ತಿರುವುಗಳನ್ನು ಹೊಂದಿರುವ ರಸ್ತೆಯಾದ ಏಂಜಲೀಸ್ ಕ್ರೆಸ್ಟ್ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.

2026 ಫೆರಾರಿ 296 ಜಿಟಿಎಸ್ ಕಾರು ಸ್ಥಳೀಯ ಸಮಯ ಸುಮಾರು ಮಧ್ಯಾಹ್ನ 12:45 ಕ್ಕೆ ಟ್ರ್ಯಾಕ್‌ನಿಂದ ಹೊರಟು ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು.

ಈ ವೇಳೆ ಎಲೆಕ್ಟ್ರಾನಿಕ್ ಆರ್ಟ್ಸ್ (EA) ಕಾರ್ಯನಿರ್ವಾಹಕ ಮತ್ತು ರೆಸ್ಪಾನ್ ಎಂಟರ್‌ಟೈನ್‌ಮೆಂಟ್ ಮುಖ್ಯಸ್ಥ 55 ವರ್ಷದ ವಿನ್ಸ್ ಜಾಂಪೆಲ್ಲಾ ನಿಧನರಾಗಿದ್ದಾರೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಕಾರಿನೊಳಗಿದ್ದ ಮತ್ತೋರ್ವ ಪ್ರಯಾಣಿಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರೂ ಕೂಡ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಹೇಳಲಾಗಿದೆ.

ಪ್ರಸ್ತುತ ಕ್ಯಾಲಿಫೋರ್ನಿಯಾ ಹೆದ್ದಾರಿ ಗಸ್ತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅಪಘಾತದ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಿಪರೀತ ತಿರುವುಗಳಿದ್ದ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರು ತಡೆಗೋಡೆಗೆ ಢಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT