ಪಂಜಾಬ್ ಮತ್ತು ಇತರ ರಾಜ್ಯಗಳ ಅಕ್ರಮ ವಲಸಿಗರು  
ವಿದೇಶ

205 ಮಂದಿ ಅಕ್ರಮ ವಲಸಿಗರು: ಯುಎಸ್ ಮಿಲಿಟರಿ ವಿಮಾನ ಮೂಲಕ ಇಂದು ಅಮೃತಸರಕ್ಕೆ ಬಂದಿಳಿಯುವ ನಿರೀಕ್ಷೆ

ಇಂದು ಬೆಳಗ್ಗೆ ವಿಮಾನವು ಬಂದಿಳಿಯುವ ನಿರೀಕ್ಷೆಯಿತ್ತು. ಇಲ್ಲಿಯವರೆಗೆ, ವಿಮಾನದಲ್ಲಿರುವವರ ವಿವರಗಳು ಲಭ್ಯವಿಲ್ಲ.

ಅಮೃತಸರ: ಸುಮಾರು 200 ಮಂದಿ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನವು ಇಂದು ಬುಧವಾರ ಮಧ್ಯಾಹ್ನ ಅಮೃತಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಾಧ್ಯತೆಯಿದೆ.

ಇಂದು ಬೆಳಗ್ಗೆ ವಿಮಾನವು ಬಂದಿಳಿಯುವ ನಿರೀಕ್ಷೆಯಿತ್ತು. ಇಲ್ಲಿಯವರೆಗೆ, ವಿಮಾನದಲ್ಲಿರುವವರ ವಿವರಗಳು ಲಭ್ಯವಿಲ್ಲ. ವರದಿಗಳ ಪ್ರಕಾರ, ಅಮೆರಿಕ ಮಿಲಿಟರಿ ವಿಮಾನ ಸಿ-17 ಪಂಜಾಬ್ ಮತ್ತು ನೆರೆಯ ರಾಜ್ಯಗಳ 205 ಅಕ್ರಮ ವಲಸಿಗರನ್ನು ಹೊತ್ತೊಯ್ಯುತ್ತಿದೆ.

ಪಂಜಾಬ್ ಪೊಲೀಸ್ ಮಹಾನಿರ್ದೇಶಕ (DGP) ಗೌರವ್ ಯಾದವ್, ರಾಜ್ಯ ಸರ್ಕಾರವು ವಲಸಿಗರನ್ನು ಬರಮಾಡಿಕೊಳ್ಳುತ್ತದೆ, ವಿಮಾನ ನಿಲ್ದಾಣದಲ್ಲಿ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದಿದ್ದಾರೆ.

ಪಂಜಾಬ್ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವ ಕುಲದೀಪ್ ಸಿಂಗ್ ಧಲಿವಾಲ್ ಅಮೆರಿಕ ಸರ್ಕಾರದ ನಿರ್ಧಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದು, ಆ ದೇಶದ ಆರ್ಥಿಕತೆಗೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗಡೀಪಾರು ಮಾಡುವ ಬದಲು ಶಾಶ್ವತ ನಿವಾಸವನ್ನು ನೀಡಬೇಕಾಗಿತ್ತು ಎಂದು ಹೇಳಿದ್ದಾರೆ. ಅನೇಕ ಭಾರತೀಯರು ಕೆಲಸದ ಪರವಾನಗಿಗಳ ಮೇಲೆ ಅಮೆರಿಕಕ್ಕೆ ಹೋಗಿದ್ದರು. ನಂತರ ವೀಸಾ ಅವಧಿ ಮುಕ್ತಾಯವಾಗಿತ್ತು. ಇದರಿಂದಾಗಿ ಅವರು ಅಕ್ರಮ ವಲಸಿಗರೆನಿಸಿದ್ದಾರೆ ಎಂದರು.

ಅಮೆರಿಕದಲ್ಲಿ ವಾಸಿಸುವ ಪಂಜಾಬಿಗಳ ಕಾಳಜಿ ಮತ್ತು ಹಿತಾಸಕ್ತಿಗಳ ಕುರಿತು ಚರ್ಚಿಸಲು ಮುಂದಿನ ವಾರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿ ಮಾಡುವುದಾಗಿ ಸಚಿವರು ಹೇಳಿದರು.

ಪಂಜಾಬಿಯರು ಅಕ್ರಮ ಮಾರ್ಗಗಳ ಮೂಲಕ ವಿದೇಶ ಪ್ರವಾಸ ಮಾಡದಂತೆ ಮನವಿ ಮಾಡಿದ್ದರು, ವಿಶ್ವಾದ್ಯಂತ ಅವಕಾಶಗಳನ್ನು ಪಡೆಯಲು ಕೌಶಲ್ಯ ಮತ್ತು ಶಿಕ್ಷಣವನ್ನು ಪಡೆಯುವ ಮಹತ್ವವನ್ನು ಒತ್ತಿ ಹೇಳಿದರು.

ವಿದೇಶ ಪ್ರವಾಸ ಮಾಡುವ ಮೊದಲು ಕಾನೂನು ಮಾರ್ಗಗಳನ್ನು ಸಂಶೋಧಿಸಲು, ಶಿಕ್ಷಣ ಮತ್ತು ಭಾಷಾ ಕೌಶಲ್ಯಗಳನ್ನು ಪಡೆಯಲು ಜನರನ್ನು ಪ್ರೋತ್ಸಾಹಿಸಿದರು.

ಕಳೆದ ತಿಂಗಳು ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಾಮಮಾರ್ಗ ಮೂಲಕ ಅಮೆರಿಕ ಪ್ರವೇಶಿಸಿದ್ದ ಪಂಜಾಬ್‌ನ ಅನೇಕ ಜನರು ಈಗ ಗಡೀಪಾರು ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT