ಜನರೇಷನ್ ಆಲ್ಫಾ- ಪೋಷಕರು (ಸಾಂಕೇತಿಕ ಚಿತ್ರ) online desk
ವಿದೇಶ

Skibidi, sigma, gyat ಹಾಗಂದರೇನು?: Generation Alpha ಮಕ್ಕಳ ಭಾಷೆ ಅರ್ಥವಾಗದೇ Millennial ಪೋಷಕರ ಪರದಾಟ!

ಇದಕ್ಕೂ ಹಿಂದಿನ ಜನರೇಷನ್ ಗೆ ಜನರೇಷನ್ ಆಲ್ಫಾ ಎಂಬ ಹೆಸರಿದೆ. ಇವರು 14 ವರ್ಷದ ಆಸುಪಾಸಿನ ವಯಸ್ಸಿನವರಾಗಿದ್ದು, ಇವರು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯದ್ದೇ ವಿಶೇಷ ಬುದ್ಧಿಶಕ್ತಿ ಬೇಕು ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

2025ರಿಂದ ಮತ್ತೊಂದು ಪೀಳಿಗೆ 'ಜನರೇಶನ್ ಬೀಟಾ' ಅಥವಾ 'ಜೆನ್ ಬೀಟಾ' (Gen Beta) ಅಸ್ತಿತ್ವಕ್ಕೆ ಬಂದಿದೆ.

ಇದಕ್ಕೂ ಹಿಂದಿನ ಜನರೇಷನ್ ಗೆ ಜನರೇಷನ್ ಆಲ್ಫಾ ಎಂಬ ಹೆಸರಿದೆ. ಇವರು 14 ವರ್ಷದ ಆಸುಪಾಸಿನ ವಯಸ್ಸಿನವರಾಗಿದ್ದು, ಇವರು ಹೇಳುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬೇರೆಯದ್ದೇ ವಿಶೇಷ ಬುದ್ಧಿಶಕ್ತಿ ಬೇಕು ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

ಪರಿಣಾಮವಾಗಿ ಈ ಜನರೇಷನ್ ನವರು (Generation Alpha) ಆಡುವ ಮಾತುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸ್ವತಃ ಅವರ ಪೋಷಕರಿಗೆ ಹಾಗೂ ಹಿರಿಯರಿಗೆ ಸಾಧ್ಯವಾಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖವಾಗಿ ಜನರೇಷನ್ ಆಲ್ಫಾ ಮಕ್ಕಳ ಸ್ಲ್ಯಾಂಗ್ (ಆಡು ಭಾಷೆಯ ಶಬ್ದಗಳು) ಆಫ್ರಿಕನ್-ಅಮೇರಿಕನ್ ಮತ್ತು LGBTQ+ ಸಮುದಾಯಗಳ ಮೂಲದ್ದಾಗಿವೆ. ಜೆನ್ ಆಲ್ಫಾ ಮಕ್ಕಳು ಹೇಳುವ ಈ ವರ್ಗಕ್ಕೆ ಸೇರಿದ ಶಬ್ದಗಳ ಅರ್ಥ ಹುಡುಕಲು ಪೋಷಕರು ವಿಕಿಹೌ ಮೊರೆ ಹೋಗಬೇಕಾಗುತ್ತಿದೆ.

ಈಗ ಉದಾಹರಣೆಗೆ ಈ ಈ ಜನರೇಷನ್ ನವರು ಹೇಳುವ ಸ್ಕಿಬಿಡಿ (Skibidi) ಅರ್ಥ ಗೊತ್ತಾ? ಹಲವರಿಗೆ ಗೊತ್ತಿರುವುದಿಲ್ಲ. ಆದರೆ ಈ ಶಬ್ದ ಯೂಟ್ಯೂಬ್ ನಲ್ಲಿ ವೈರಲ್ ಆಗತೊಡಗಿದೆ. ಹಾಗೂ ಆನ್ ಲೈನ್ ನಲ್ಲಿ ಭಾರಿ ಪರಿಚಿತ ಶಬ್ದ

ನ್ಯೂಯಾರ್ಕ್ ಪೋಸ್ಟ್ ಪ್ರಕಾರ ಸ್ಕಿಬಿಡಿ ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ಅರ್ಥಗಳನ್ನು ಹೊಂದಿದೆ. ಅಂದರೆ ಪ್ರಯೋಗಿಸುವ ಸಂದರ್ಭಕ್ಕೆ ಅನುಸಾರವಾಗಿ ಈ ಶಬ್ದ ಅರ್ಥ ಪಡೆದುಕೊಳ್ಳುತ್ತದೆ.

ಇದೇ ರೀತಿ ಸಿಗ್ಮಾ ಸಹ ವೈರಲ್ ಆಗುತ್ತಿರುವ ಜನರೇಶನ್ Alpha ಮಕ್ಕಳ ಶಬ್ದವಾಗಿದೆ. ಇದರ ಅರ್ಥ ಅಂದರೆ "ಕೂಲ್" ರಷ್ಯನ್ ಬ್ಲಾಗರ್ ಗಳ ಸಿಗ್ಮಾ ಬಾಯ್ ಹಾಡು ಟಿಕ್ ಟಾಕ್ ನಲ್ಲಿ ವೈರಲ್ ಆಗತೊಡಗಿದ್ದು,ಅಲ್ಲಿಂದ ಇದು ಆಡು ಭಾಷೆಯ ಪದವಾಗಿ ಹೊರಹೊಮ್ಮಿದೆ.

ತಮ್ಮ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಒಂದು ವಾರದೊಳಗೆ ಎರಡು ಡಜನ್‌ಗಿಂತಲೂ ಹೆಚ್ಚು ಇಂತಹ, ಈಗಿನ ಜನರೇಷನ್ ಗಳಿಗೆ ಅರ್ಥವಾಗದ ಸ್ಲ್ಯಾಂಗ್ ಪದಗಳನ್ನು ಬಳಸುತ್ತಾರೆ ಎನ್ನುತ್ತಾರೆ ಶಿಕ್ಷಕ ಫಿಲಿಪ್ ಲಿಂಡ್ಸೆ.

ಈ ಜನರೇಷನ್ ಆಲ್ಫಾ ಮಕ್ಕಳ ಭಾಷೆಯ ಪ್ರಕಾರ "ಗ್ಯಾತ್" (gyat) ಎಂದರೆ ಆಕರ್ಷಕ ವ್ಯಕ್ತಿ ಎಂದರ್ಥ "ಗಿಗಾಚಡ್" (gigachad) ಎಂದರೆ ಅಸಾಧಾರಣವಾಗಿ ಪೌರುಷ ಹೊಂದಿರುವ, ದೈಹಿಕವಾಗಿ ಆಕರ್ಷಕ ಮತ್ತು ಸ್ನಾಯುಗಳನ್ನು ಹೊಂದಿರುವ ವ್ಯಕ್ತಿ ಎಂಬ ಅರ್ಥವನ್ನು ಸೂಚಿಸುತ್ತದೆ ಮತ್ತು "ರಿಜ್" (rizz) ಎಂದರೆ ವರ್ಚಸ್ಸನ್ನು ಸೂಚಿಸುತ್ತದೆ. "ಮ್ಯೂಯಿಂಗ್" (mewing) ಎಂಬ ಪದವು ಉತ್ತಮ ಜಾ ಲೈನ್ (jawline) ನ್ನು ಪಡೆಯಲು ವ್ಯಾಯಾಮ ಎಂಬ ಅರ್ಥವನ್ನು ಹೊಂದಿದೆ. ಮತ್ತು "ಸಸ್" (sus) ಎಂದರೆ ಅನುಮಾನಾಸ್ಪದ ಎಂದರ್ಥ.

ಮಕ್ಕಳು ತಾವು ಮಾತನಾಡುವ ವೇಳೆ ಮಧ್ಯದಲ್ಲಿ ಇಂತಹ ಸ್ಲ್ಯಾಂಗ್ ಗಳನ್ನು ಬಳಕೆ ಮಾಡಿದರೆ, ಎದುರು ಇರುವ ಪೋಷಕರು ಹಾಗೂ ಹಿರಿಯ ವಯಸ್ಸಿನವರು ಏನೂ ಅರ್ಥವಾಗದೇ ಶಬ್ದಗಳನ್ನು ಡಿಕೋಡ್ ಮಾಡಲು ಹೆಣಗಾಡುತ್ತಿದ್ದಾರೆ.

ಹೊಸ ಪರಿಭಾಷೆಯಿಂದ ಗೊಂದಲಕ್ಕೊಳಗಾದ ಅನೇಕ ಪೋಷಕರು ತಮ್ಮ ಅನುಭವವನ್ನು ದಿ ವಾಲ್ ಸ್ಟ್ರೀಟ್ ಜರ್ನಲ್ ಜೊತೆ ಹಂಚಿಕೊಂಡಿದ್ದಾರೆ. ಸ್ಲ್ಯಾಂಗ್ ಗಳ ಬಳಕೆ ಬಗ್ಗೆ ಮಾತನಾಡಿರುವ ಸ್ಟೇ-ಅಟ್ ಹೋಮ್ ಜೆನ್ ಕಿಮ್ ಹೀಗೆ ಹೇಳುತ್ತಾರೆ, "ನಮಗೆ ಸ್ಲ್ಯಾಂಗ್ ಇದ್ದಾಗ ನಾವು ಅನುಸರಿಸಬೇಕಾದ ಕೆಲವೇ ನುಡಿಗಟ್ಟುಗಳು ಇದ್ದವು, ಮತ್ತು ಅವು ಏನನ್ನು ಅರ್ಥೈಸಿದವು ಎಂಬುದನ್ನು ನೀವು ಊಹಿಸಬಹುದಾಗಿತ್ತು" ಆದರೆ ಈಗ ಶಬ್ದಕೋಶ ಬದಲಾವಣೆಯು ಪೋಷಕರಿಗೆ ಅರ್ಥ ಮಾಡಿಕೊಳ್ಳಲು ಮಾಡುವುದು ಕಷ್ಟಕರವಾಗಿದೆ ಎಂದು ಹೇಳಿದರು.

ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾ, ಕಿಮ್‌ನ 10 ವರ್ಷದ ಸೋದರ ಸೊಸೆ ಆವೆರಿ ತನ್ನ ಚಿಕ್ಕಪ್ಪನನ್ನು "ಒಮೆಗಾ" ಎಂದು ಕರೆಯುತ್ತಾಳೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಯುವ ಪ್ರಕಾರ ಒಮೆಗಾ ಎಂದರೆ ಹಿಂದಿನ ಜನರೇಷನ್ ಎಂಬುದಾಗಿದೆ. ಮತ್ತೊಂದು ಘಟನೆಯಲ್ಲಿ 10 ವರ್ಷದ ಮಗು ಬಣ್ಣದ ಪೆನ್ಸಿಲ್‌ಗಳ ಉಡುಗೊರೆಯನ್ನು ಸ್ಲೇ ಎಂದು ಕರೆದಳು, ಇದ ಅರ್ಥ ಒಳ್ಳೆಯದು ಎಂಬುದಾಗಿದೆ.

"ಆಧುನಿಕ ಕಾಲದ ಸ್ಲ್ಯಾಂಗ್ ಭಾಷೆಗಳು ವಿದೇಶಿ ಭಾಷೆ"ಯಾಗಿ ಮಾರ್ಪಟ್ಟಿವೆ" ಎಂದು ರೆಡ್ಡಿಟ್‌ನಲ್ಲಿ ಮ್ಯಾಟ್ ಮುರ್ರೆ ಎಂಬ ಪೋಷಕರೊಬ್ಬರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT