ಸಾಂದರ್ಭಿಕ ಚಿತ್ರ  
ವಿದೇಶ

'zero-click' ಸ್ಪೈವೇರ್‌ ದಾಳಿಗೆ ಪತ್ರಕರ್ತರು-ಕಾರ್ಯಕರ್ತರು ಗುರಿ: ವಾಟ್ಸಾಪ್ ಹ್ಯಾಕ್ ಭೀತಿ

ಹ್ಯಾಕಿಂಗ್ ಗೆ ಗುರಿಯಾಗಿಸಿಕೊಂಡ ವ್ಯಕ್ತಿಗಳಲ್ಲಿ ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಿದ್ದಾರೆ, ಅವರ ವೈಯಕ್ತಿಕ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆದರಿಕೆ ಒಡ್ಡಲಾಗುತ್ತಿದೆ.

ಇಸ್ರೇಲ್ ಸ್ಪೈವೇರ್ ಕಂಪನಿ ಪ್ಯಾರಗನ್ ಸೊಲ್ಯೂಷನ್ಸ್ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಹ್ಯಾಕಿಂಗ್ ಉಪಕರಣಕ್ಕೆ ಎರಡು ಡಜನ್‌ಗಿಂತಲೂ ಹೆಚ್ಚು ದೇಶಗಳಲ್ಲಿ ಸುಮಾರು 100 ವ್ಯಕ್ತಿಗಳು ಬಲಿಯಾಗಿದ್ದಾರೆ ಎಂದು ವಾಟ್ಸಾಪ್ ಬಹಿರಂಗಪಡಿಸಿದೆ.

ಹ್ಯಾಕಿಂಗ್ ಗೆ ಗುರಿಯಾಗಿಸಿಕೊಂಡ ವ್ಯಕ್ತಿಗಳಲ್ಲಿ ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಿದ್ದಾರೆ, ಅವರ ವೈಯಕ್ತಿಕ ಗೌಪ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆದರಿಕೆ ಒಡ್ಡಲಾಗುತ್ತಿದೆ. ಸರ್ಕಾರಿ ಕ್ಲೈಂಟ್‌ಗಳಿಗೆ ಮಾರಾಟ ಮಾಡಲಾಗುವ ಸ್ಪೈವೇರ್ ನ್ನು ಅಪರಾಧವನ್ನು ನಿಭಾಯಿಸುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸುವ ನೆಪದಲ್ಲಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಝೀರೋ-ಕ್ಲಿಕ್ ಹ್ಯಾಕ್: ರಹಸ್ಯ ಮತ್ತು ಅಪಾಯಕಾರಿ ದಾಳಿ

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಈ ಹ್ಯಾಕ್‌ನ ಅತ್ಯಂತ ಅಪಾಯಕಾರಿ ಅಂಶ "ಝೀರೋ-ಕ್ಲಿಕ್". ಅಂದರೆ ಯಾವುದೇ ದುರುದ್ದೇಶಪೂರಿತ ಲಿಂಕ್‌ಗಳು ಅಥವಾ ಲಗತ್ತುಗಳ ಮೇಲೆ ಕ್ಲಿಕ್ ಮಾಡುವ ಅಗತ್ಯವಿರುವುದಿಲ್ಲ. ಪ್ಯಾರಗನ್‌ನ ಸ್ಪೈವೇರ್ ಗೆ ತುತ್ತಾದವರು ಯಾವುದೇ ಸಂವಹನವಿಲ್ಲದೆ ಬಳಕೆದಾರರ ಸಾಧನದೊಳಗೆ ನುಸುಳಿ ರಹಸ್ಯ ಮತ್ತು ಅಪಾಯಕಾರಿ ರೀತಿಯಲ್ಲಿ ದಾಳಿ ನಡೆಸುತ್ತಾರೆ. ಸ್ಪೈವೇರ್ ಹ್ಯಾಕರ್‌ಗಳಿಗೆ ಎನ್‌ಕ್ರಿಪ್ಟ್ ಮಾಡಿದ ಸಂದೇಶಗಳನ್ನು ಒಳಗೊಂಡಂತೆ ಸಾಧನಕ್ಕೆ ಸಂಪೂರ್ಣ ಪ್ರವೇಶವನ್ನು ನೀಡುತ್ತದೆ, ಇದು ವೈಯಕ್ತಿಕ ಮತ್ತು ವೃತ್ತಿಪರ ಭದ್ರತೆಗೆ ಬೆದರಿಕೆಯನ್ನುಂಟುಮಾಡುತ್ತದೆ.

ವಾಟ್ಸಾಪ್ ಸಂಸ್ಥೆಯ ಅಧಿಕಾರಿಗಳು ಉಲ್ಲಂಘನೆಯನ್ನು ದೃಢಪಡಿಸಿದ್ದಾರೆ, ಈ ರೀತಿಯಾಗುತ್ತಿರುವುದನ್ನು ಆರಂಭದಲ್ಲಿ ಡಿಸೆಂಬರ್‌ನಲ್ಲಿ ಪತ್ತೆಹಚ್ಚಲಾಯಿತು. ಯುರೋಪ್‌ನಲ್ಲಿ ನೆಲೆಸಿರುವ ಹಲವಾರು ಉನ್ನತ ವ್ಯಕ್ತಿಗಳು ಸೇರಿದಂತೆ ಸುಮಾರು 90 ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿ ಹೇಳುತ್ತದೆ. ಬಾಧಿತರಾದವರ ನಿರ್ದಿಷ್ಟ ಗುರುತುಗಳನ್ನು WhatsApp ಬಹಿರಂಗಪಡಿಸದಿದ್ದರೂ, ಹ್ಯಾಕಿಂಗ್ ಗೆ ತುತ್ತಾದವರಲ್ಲಿ ಹೆಚ್ಚಿನವರು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ.

WhatsApp ನ ಪ್ರತಿಕ್ರಿಯೆ ಮತ್ತು ತನಿಖೆ

ಈ ರೀತಿ ಹ್ಯಾಕಿಂಗ್ ಆಗುತ್ತಿರುವುದನ್ನು ತಡೆಯಲು ವಾಟ್ಸಾಪ್ ಮಧ್ಯಪ್ರವೇಶಿಸಿ, ಬಳಕೆದಾರರನ್ನು ರಕ್ಷಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದೆ. ಸ್ಪೈವೇರ್ ದಾಳಿಗಳನ್ನು ಪತ್ತೆಹಚ್ಚುವಲ್ಲಿ ಪರಿಣತಿ ಹೊಂದಿರುವ ಕೆನಡಾ ಮೂಲದ ಇಂಟರ್ನೆಟ್ ಕಾವಲು ಗುಂಪು ಸಿಟಿಜನ್ ಲ್ಯಾಬ್‌ಗೆ ಕಂಪನಿಯು ಈ ವಿಷಯವನ್ನು ಉಲ್ಲೇಖಿಸಿದೆ. ಪ್ಯಾರಾಗಾನ್ ಸೊಲ್ಯೂಷನ್ಸ್ ನ್ನು ದಾಳಿಯ ಮೂಲವೆಂದು ಅದು ಹೇಗೆ ಗುರುತಿಸಿದೆ ಎಂಬುದರ ನಿಖರವಾದ ವಿವರಗಳನ್ನು ವಾಟ್ಸಾಪ್ ಬಹಿರಂಗಪಡಿಸದಿದ್ದರೂ, ಕಾನೂನು ಜಾರಿ ಸಂಸ್ಥೆಗಳು ಮತ್ತು ಉದ್ಯಮ ಪಾಲುದಾರರು ತನಿಖೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಅದು ದೃಢಪಡಿಸಿದೆ.

ಪ್ಯಾರಾಗಾನ್ ಸೊಲ್ಯೂಷನ್ಸ್‌ಗೆ ಇಂತಹ ಚಟುವಟಿಕೆ ನಿಲ್ಲಿಸುವಂತೆ ಉಲ್ಲಂಘನೆಯ ತೀವ್ರತೆಯನ್ನು ಎತ್ತಿ ತೋರಿಸುವಂತೆ ಹಾನಿಕಾರಕ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದೆ. ನಾವು ಖಾಸಗಿಯಾಗಿ ಸಂವಹನ ನಡೆಸುವ ಜನರ ಸಾಮರ್ಥ್ಯವನ್ನು ರಕ್ಷಿಸುವುದನ್ನು ಮುಂದುವರಿಸುತ್ತಿದ್ದೇವೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ. ಬಳಕೆದಾರರ ಸುರಕ್ಷತೆಗೆ ಕಂಪನಿ ಬದ್ಧತೆಯನ್ನು ಒತ್ತಿ ಹೇಳಿದ್ದಾರೆ.

ವಾಣಿಜ್ಯ ಸ್ಪೈವೇರ್ ಉದ್ಯಮದ ಬಗ್ಗೆ ಆತಂಕ

ಸಿಟಿಜನ್ ಲ್ಯಾಬ್‌ನ ಸಂಶೋಧಕ ಜಾನ್ ಸ್ಕಾಟ್-ರೈಲ್ಟನ್ ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪೈವೇರ್ ದಾಳಿಗಳು ದುರುಪಯೋಗದ ಪರಿಚಿತ ಮಾದರಿಗಳನ್ನು ಅನುಸರಿಸುತ್ತವೆ, ಸರ್ಕಾರಗಳು ಮತ್ತು ಇತರ ಪ್ರಬಲ ಸಂಸ್ಥೆಗಳು ಪತ್ರಕರ್ತರು, ಕಾರ್ಯಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರನ್ನು ಗುರಿಯಾಗಿಸಲು ಇಂತಹ ಸಾಧನಗಳನ್ನು ಬಳಸುತ್ತವೆ ಎಂದು ಹೇಳಿದರು.

ತಾಂತ್ರಿಕ ಕಾನೂನು ತಜ್ಞರು ಇಂತಹ ದಾಳಿಗಳ ನೈತಿಕ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಟೆಕ್ ವಕಾಲತ್ತು ಗುಂಪಿನ ಹಿರಿಯ ಕಾನೂನು ಸಲಹೆಗಾರರಾದ ನಟಾಲಿಯಾ ಕ್ರಾಪಿವಾ, ಈ ರೀತಿಯ ದುರುಪಯೋಗಗಳು ವಾಣಿಜ್ಯ ಸ್ಪೈವೇರ್ ಉದ್ಯಮದ ಲಕ್ಷಣವಾಗಿದೆ ಎಂದು ಹೇಳಿದ್ದಾರೆ. ಈ ಘಟನೆಯು ಅನಿಯಂತ್ರಿತ ವಾಣಿಜ್ಯ ಮಾರುಕಟ್ಟೆಯಲ್ಲಿ ಕಣ್ಗಾವಲು ತಂತ್ರಜ್ಞಾನಗಳ ಹೆಚ್ಚುತ್ತಿರುವ ಬಳಕೆಯಿಂದ ಉಂಟಾಗುವ ಅಪಾಯಗಳ ಸ್ಪಷ್ಟ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ಯಾರಾಗಾನ್ ಸೊಲ್ಯೂಷನ್ಸ್ ಪ್ರತಿಕ್ರಿಯೆಗೆ ನಕಾರ

ಸ್ಪೈವೇರ್‌ನ ಹಿಂದಿರುವ ಕಂಪನಿಯಾದ ಪ್ಯಾರಾಗಾನ್ ಸೊಲ್ಯೂಷನ್ಸ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ. ಇತ್ತೀಚೆಗೆ ಎಇ ಇಂಡಸ್ಟ್ರಿಯಲ್ ಪಾರ್ಟ್‌ನರ್ಸ್ ಸ್ವಾಧೀನಪಡಿಸಿಕೊಂಡ ಕಂಪನಿಯು ಗಂಭೀರ ಬೆದರಿಕೆಗಳನ್ನು ಎದುರಿಸಲು ನೈತಿಕ ಸಾಧನಗಳನ್ನು ಒದಗಿಸುತ್ತಿದೆ ಎಂದು ಹೇಳಲಾಗುತ್ತಿದೆ. ಉತ್ಪನ್ನಗಳನ್ನು ಹೆಚ್ಚು ವಿವಾದಾತ್ಮಕ ಮತ್ತು ಹಾನಿಕಾರಕ ಉದ್ದೇಶಗಳಿಗಾಗಿ ಬಳಸಬಹುದು ಎಂದು ಸೂಚಿಸುತ್ತದೆ.

ವಾಟ್ಸಾಪ್ ಬಳಕೆದಾರರಿಗೆ ತಮ್ಮ ಗೌಪ್ಯತೆಯನ್ನು ಭದ್ರಪಡಿಸಿಕೊಳ್ಳಲು ಮತ್ತು ಮತ್ತಷ್ಟು ಉಲ್ಲಂಘನೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಭರವಸೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT