ನಾನು ಎಲಾನ್ ಮಸ್ಕ್ 13ನೇ ಮಗುವಿಗೆ ತಾಯಿ; ಮಹಿಳೆಯ ಹೇಳಿಕೆಗೆ ಟೆಸ್ಲಾ ಮಾಲಿಕನ ಉತ್ತರ ಹೀಗಿದೆ...
ಐದು ತಿಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲೋನ್ ಮಸ್ಕ್ ಆ ಮಗುವಿನ ತಂದೆ" ಎಂದು ಲ್ಯಾಟಿನ್ ನುಡಿಗಟ್ಟಿನೊಂದಿಗೆ ಅಲಿಯಾ ಐಕ್ಟಾ ಎಸ್ಟ್ (ದಿ ಡೈ ಈಸ್ ಕಾಸ್ಟ್) ಹೇಳಿದರು.
ಈಗ ಡಿಲೀಟ್ ಮಾಡಲಾದ ಪೋಸ್ಟ್‌ಗಳಲ್ಲಿ, ಆಶ್ಲೇ ಸೇಂಟ್ ಕ್ಲೇರ್ ಎಲೋನ್ ಮಸ್ಕ್ ತನ್ನ ಬಳಿ ಇತ್ತೀಚೆಗೆ ಹೆಚ್ಚಿನ ಮಕ್ಕಳಿಗಾಗಿ ಕೇಳಿಕೊಂಡಿದ್ದರು, ತನ್ನ 5 ತಿಂಗಳ ಮಗುವಿಗೆ ಎಲಾನ್ ಮಸ್ಕ್ ಅವರೇ ತಂದೆ ಎಂದು ಆರೋಪಿಸಿದ್ದಾರೆ.
ಸಂಪ್ರದಾಯವಾದಿ ಪ್ರಭಾವಿ ಆಶ್ಲೇ ಸೇಂಟ್ ಕ್ಲೇರ್ ಅವರ ಐದು ತಿಂಗಳ ಮಗುವಿನ ತಂದೆ ತಾನೇ ಎಂದು ಹೇಳಿಕೊಂಡ ನಂತರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಈ ಆರೋಪಗಳ ಬಗ್ಗೆ ಮೌನ ಮುರಿದಿದ್ದಾರೆ.
ಈ ಪೋಸ್ಟ್ ಗೆ ವಾವ್ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಐದು ತಿಂಗಳ ಹಿಂದೆ, ನಾನು ಹೊಸ ಮಗುವನ್ನು ಜಗತ್ತಿಗೆ ಸ್ವಾಗತಿಸಿದೆ. ಎಲೋನ್ ಮಸ್ಕ್ ಆ ಮಗುವಿನ ತಂದೆ" ಎಂದು ಲ್ಯಾಟಿನ್ ನುಡಿಗಟ್ಟಿನೊಂದಿಗೆ ಅಲಿಯಾ ಐಕ್ಟಾ ಎಸ್ಟ್ (ದಿ ಡೈ ಈಸ್ ಕಾಸ್ಟ್) ಹೇಳಿದರು.
ಮಗುವಿನ ಸುರಕ್ಷತೆಗಾಗಿ ಮಾಹಿತಿಯನ್ನು ಖಾಸಗಿಯಾಗಿಟ್ಟಿದ್ದೆ ಆದರೆ ಟ್ಯಾಬ್ಲಾಯ್ಡ್‌ಗಳು ಸುದ್ದಿಯನ್ನು ಪ್ರಕಟಿಸಲು ತಯಾರಿ ನಡೆಸುತ್ತಿವೆ ಎಂದು ತಿಳಿದ ನಂತರ ಸಾರ್ವಜನಿಕವಾಗಿ ಪ್ರಕಟಿಸಲು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ. "ನಮ್ಮ ಮಗುವಿನ ಗೌಪ್ಯತೆ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಾನು ಇದನ್ನು ಈ ಹಿಂದೆ ಬಹಿರಂಗಪಡಿಸಿಲ್ಲ, ಆದರೆ ಇತ್ತೀಚಿನ ದಿನಗಳಲ್ಲಿ, ಟ್ಯಾಬ್ಲಾಯ್ಡ್ ಮಾಧ್ಯಮ ಹಾನಿಯನ್ನು ಲೆಕ್ಕಿಸದೆ ಹಾಗೆ ಸುದ್ದಿ ಪ್ರಕಟಿಸಲು ಉದ್ದೇಶಿಸಿದೆ ಎಂಬುದು ಸ್ಪಷ್ಟವಾಗಿದೆ" ಎಂದು ಆಶ್ಲೇ ಸೇಂಟ್ ಬರೆದಿದ್ದಾರೆ.
ಮಸ್ಕ್ ಅವರ ಸಂಕ್ಷಿಪ್ತ ಪ್ರತಿಕ್ರಿಯೆಯ ನಂತರ, ಸೇಂಟ್ ಕ್ಲೇರ್ ನೇರವಾಗಿ ಪ್ರತಿಕ್ರಿಯಿಸುವ ಬದಲು ಆನ್‌ಲೈನ್ ಊಹಾಪೋಹಗಳಲ್ಲಿ ತೊಡಗಿದ್ದಕ್ಕಾಗಿ ಮಸ್ಕ್ ನ ಟೀಕಿಸಿದ್ದಾರೆ. "ಎಲೋನ್, ನಾನು ಕಳೆದ ಹಲವಾರು ದಿನಗಳಿಂದ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದೇನೆ ಮತ್ತು ನೀವು ಪ್ರತಿಕ್ರಿಯಿಸಿಲ್ಲ. 15 ವರ್ಷ ವಯಸ್ಸಿನಲ್ಲಿ ನನ್ನ ಒಳ ಉಡುಪುಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದ ವ್ಯಕ್ತಿಯ ನಿಂದನೆಗಳಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸುವ ಬದಲು ನೀವು ಯಾವಾಗ ನಮಗೆ ಉತ್ತರಿಸುತ್ತೀರಿ?" ಅವರು ಈಗ ಡಿಲೀಟ್ ಆದ ಕಾಮೆಂಟ್‌ನಲ್ಲಿ ಬರೆದಿದ್ದಾರೆ.
ನಂತರ ಸೇಂಟ್ ಕ್ಲೇರ್ ಅವರ ಪ್ರತಿನಿಧಿ ಬ್ರಿಯಾನ್ ಗ್ಲಿಕ್ಲಿಚ್, ಆಕೆ ಮತ್ತು ಮಸ್ಕ್ ಖಾಸಗಿಯಾಗಿ ಸಹ-ಪೋಷಕತ್ವದ ಕುರಿತು ಒಪ್ಪಂದದಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ದೃಢಪಡಿಸಿದ್ದಾರೆ. "ಅನಗತ್ಯ ಊಹಾಪೋಹಗಳನ್ನು ಕೊನೆಗೊಳಿಸಲು, ಆಶ್ಲೇ ಜೊತೆಗಿನ ಅವರ ಪೋಷಕರ ಪಾತ್ರವನ್ನು ಎಲಾನ್ ಸಾರ್ವಜನಿಕವಾಗಿ ಒಪ್ಪಿಕೊಳ್ಳುವವರೆಗೆ ನಾವು ಕಾಯುತ್ತಿದ್ದೇವೆ ಮತ್ತು ಅವರು ಹಂಚಿಕೊಳ್ಳುವ ಮಗುವಿನ ಯೋಗಕ್ಷೇಮ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಎಲಾನ್ ತಮ್ಮ ಒಪ್ಪಂದವನ್ನು ತ್ವರಿತವಾಗಿ ಮುಗಿಸಲು ಉದ್ದೇಶಿಸಿದ್ದಾರೆ ಎಂದು ಆಶ್ಲೇ ನಂಬುತ್ತಾರೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
52 ವರ್ಷದ ಎಲಾನ್ ಮಸ್ಕ್, ಮೂವರು ಮಹಿಳೆಯರಿಂದ 12 ಇತರ ಮಕ್ಕಳನ್ನು ಹೊಂದಿದ್ದಾರೆ. ಅವರು ತಮ್ಮ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಐದು ಮಕ್ಕಳನ್ನು ಹೊಂದಿದ್ದಾರೆ. ಸಂಗೀತಗಾರರಾಗಿರುವ ಗ್ರಿಮ್ಸ್ ಅವರೊಂದಿಗೆ, ಮಸ್ಕ್ ಮೂವರು ಮಕ್ಕಳನ್ನು ಹೊಂದಿದ್ದಾರೆ.