ಸಲಿಂಗಕಾಮಿ ಇಮಾಮ್ ಮುಹ್ಸಿನ್ ಹೆಂಡ್ರಿಕ್ಸ್ ಗುಂಡಿಕ್ಕಿ ಹತ್ಯೆ 
ವಿದೇಶ

ವಿಶ್ವದ ಮೊದಲ 'ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್' ಗುಂಡಿಕ್ಕಿ ಹತ್ಯೆ! ಯಾರು ಈ Muhsin Hendricks?

LGBTQ+ ಮುಸ್ಲಿಮರಿಗೆ ಸುರಕ್ಷಿತ ಸ್ಥಳಾವಕಾಶ ನೀಡುವ ಮಸೀದಿಯ ನೇತೃತ್ವ ವಹಿಸಿದ್ದ ಹೆಂಡ್ರಿಕ್ಸ್ ಶನಿವಾರ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪರಿಚಿತ ವಾಹನವೊಂದು ಅವರ ಕಾರು ತಡೆದು ಗುಂಡಿಕ್ಕಿ ಹತ್ಯೆ ಗೈದಿದೆ.

ಕೇಪ್ಟೌನ್: ವಿಶ್ವದ ಮೊದಲ ಬಹಿರಂಗ ಸಲಿಂಗಕಾಮಿ ಇಮಾಮ್ Muhsin Hendricks ರನ್ನು ದುಷ್ಕರ್ಮಿಗಲು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಮುಹ್ಸಿನ್ ಹೆಂಡ್ರಿಕ್ಸ್ ಅವರನ್ನು ದಕ್ಷಿಣ ಆಫ್ರಿಕಾದ ಗ್ಕೆಬೆರಾ ಬಳಿ ಗುಂಡಿಕ್ಕಿ ಕೊಲ್ಲಲಾಗಿದೆ. LGBTQ+ ಮುಸ್ಲಿಮರಿಗೆ ಸುರಕ್ಷಿತ ಸ್ಥಳಾವಕಾಶ ನೀಡುವ ಮಸೀದಿಯ ನೇತೃತ್ವ ವಹಿಸಿದ್ದ ಹೆಂಡ್ರಿಕ್ಸ್ ಶನಿವಾರ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪರಿಚಿತ ವಾಹನವೊಂದು ಅವರ ಕಾರು ತಡೆದು ಗುಂಡಿಕ್ಕಿ ಹತ್ಯೆ ಗೈದಿದೆ.

"ಮುಖ ಮುಚ್ಚಿಕೊಂಡಿದ್ದ ಇಬ್ಬರು ಅಪರಿಚಿತ ಶಂಕಿತರು ವಾಹನದಿಂದ ಹೊರಬಂದು ಕಾರಿನ ಮೇಲೆ ಹಲವಾರು ಸುತ್ತು ಗುಂಡು ಹಾರಿಸಿದರು. ನಂತರ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಹೆಂಡ್ರಿಕ್ಸ್‌ಗೆ ಮಾರಣಾಂತಿಕ ಗಾಯಗಳಾಗಿ ಅವರು ಸಾವನ್ನಪ್ಪಿದ್ದಾರೆ " ಎಂದು ಪೂರ್ವ ಕೇಪ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಈ ಘಟನೆಯನ್ನು ಅಂತರರಾಷ್ಟ್ರೀಯ ಲೆಸ್ಬಿಯನ್, ಗೇ, ಬೈಸೆಕ್ಸುವಲ್, ಟ್ರಾನ್ಸ್ ಮತ್ತು ಇಂಟರ್‌ಸೆಕ್ಸ್ ಅಸೋಸಿಯೇಷನ್ ​​(ILGA) ಹತ್ಯೆಯನ್ನು ಬಲವಾಗಿ ಖಂಡಿಸಿದೆ. "ಮುಹ್ಸಿನ್ ಹೆಂಡ್ರಿಕ್ಸ್ ಹತ್ಯೆಯ ಸುದ್ದಿಯಿಂದ ಐಎಲ್‌ಜಿಎ ವರ್ಲ್ಡ್ ಕುಟುಂಬವು ತೀವ್ರ ಆಘಾತಕ್ಕೊಳಗಾಗಿದೆ ಮತ್ತು ಇದು ದ್ವೇಷ ಅಪರಾಧವಾಗಿರಬಹುದು ಎಂದು ನಾವು ಭಾವಿಸಿದ್ದೇವೆ. ಈ ಭಯಪಡುವ ದಾಳಿಯನ್ನು ಸಂಪೂರ್ಣವಾಗಿ ತನಿಖೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ಅದರ ಕಾರ್ಯನಿರ್ವಾಹಕ ನಿರ್ದೇಶಕಿ ಜೂಲಿಯಾ ಎರ್ಟ್ ಹೇಳಿದ್ದಾರೆ.

ಯಾರು ಈ ಮುಹ್ಸಿನ್ ಹೆಂಡ್ರಿಕ್ಸ್?

1996 ರಿಂದ LGBTQ+ ವಕಾಲತ್ತು ವಹಿಸುತ್ತಿದ್ದ ಹೆಂಡ್ರಿಕ್ಸ್, ಎರಡು ವರ್ಷಗಳ ನಂತರ ತನ್ನ ತವರು ನಗರದಲ್ಲಿ LGBTQ+ ಮುಸ್ಲಿಮರಿಗಾಗಿ ಸಭೆಗಳನ್ನು ಆಯೋಜಿಸಲು ಪ್ರಾರಂಭಿಸಿದರು. "ನಾನು ನನ್ನ ಗ್ಯಾರೇಜ್ ಅನ್ನು ತೆರೆದೆ, ಕಾರ್ಪೆಟ್ ಅನ್ನು ಕೆಳಗೆ ಹಾಕಿ ಜನರನ್ನು ಚಹಾ ಸೇವಿಸಲು ಮತ್ತು ಮಾತನಾಡಲು ಆಹ್ವಾನಿಸಿದೆ. ಆ ಮೂಲಕ ತಮ್ಮ ಸಮುದಾಯದ LGBTQ+ ಮುಸ್ಲಿಮರಿಗಾಗಿ ವೇದಿಕೆ ಕಲ್ಪಿಸಿದೆ" ಎಂದು ಅವರು 2022 ರಲ್ಲಿ ದಿ ಗಾರ್ಡಿಯನ್‌ಗೆ ತಿಳಿಸಿದ್ದರು.

2011 ರಲ್ಲಿ, ಇದೇ ಹೆಂಡ್ರಿಕ್ಸ್ ತನ್ನ ಸಮುದಾಯಕ್ಕಾಗಿ ಹೆಚ್ಚು ಸ್ವಾಗತಾರ್ಹ ಸ್ಥಳವನ್ನು ರಚಿಸಲು ನಿರ್ಧರಿಸಿದರು. ಬಹುಶಃ ನಾವು ನಮ್ಮದೇ (ಸಲಿಂಗಕಾಮಿಗಳು) ಆದ ಸ್ಥಳವನ್ನು ಪ್ರಾರಂಭಿಸುವ ಸಮಯ, ಆದ್ದರಿಂದ ಜನರು ನಿರ್ಣಯಿಸಲ್ಪಡದೆ ಪ್ರಾರ್ಥಿಸಬಹುದು ಎಂದು ಹೇಳಿದ್ದರು. ಇದಕ್ಕಾಗಿ ಅವರು ದಕ್ಷಿಣ ಆಫ್ರಿಕಾದ

ಕೇಪ್ ಟೌನ್ ಬಳಿಯ ವೈನ್‌ಬರ್ಗ್‌ನಲ್ಲಿ ಅವರು ಅಲ್-ಘುರ್ಬಾ ಮಸೀದಿಯನ್ನು ಸ್ಥಾಪಿಸಿದರು, ಇಲ್ಲಿ "ವಿಲಕ್ಷಣ ಮುಸ್ಲಿಮರು ಮತ್ತು LGBTQ+ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದರು.

ಸಿನಿಮಾ

2022 ರ ಸಾಕ್ಷ್ಯಚಿತ್ರ 'ದಿ ರಾಡಿಕಲ್' ನಲ್ಲಿ ಕಾಣಿಸಿಕೊಂಡ ಹೆಂಡ್ರಿಕ್ಸ್, ಈ ಹಿಂದೆ ಬೆದರಿಕೆಗಳನ್ನು ಸ್ವೀಕರಿಸಿದ್ದಾಗಿ ಒಪ್ಪಿಕೊಂಡಿದ್ದರು. ಅಂಗರಕ್ಷಕರನ್ನು ನೇಮಿಸಿಕೊಳ್ಳಲು ಸಲಹೆ ನೀಡಿದ್ದರೂ, ಅವರು ತಾನು ಹೆದರುವುದಿಲ್ಲ ಎಂದು ಹೇಳುತ್ತಾ, "ಸಾವಿನ ಭಯಕ್ಕಿಂತ ಪ್ರಾಮಾಣಿಕವಾಗಿರುವುದು ದೊಡ್ಡದು" ಎಂದು ಹೇಳಿದ್ದರು. ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಹೆಂಡ್ರಿಕ್ಸ್ ಒಬ್ಬ ಮಹಿಳೆಯನ್ನು ಮದುವೆಯಾದರು, ಮಕ್ಕಳನ್ನು ಹೊಂದಿದ್ದರು ಮತ್ತು ನಂತರ 29 ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT