ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ ಓವಲ್ ಕಚೇರಿಯಲ್ಲಿ ಎಲೋನ್ ಮಸ್ಕ್ ಮಾತನಾಡುತ್ತಿರುವಾಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಲಿಸುತ್ತಿರುವುದು 
ವಿದೇಶ

ಭಾರತಕ್ಕೆ ಟೆಸ್ಲಾ ಪ್ರವೇಶ: ಅದರಿಂದ ಅಮೆರಿಕಕ್ಕೆ ಅನ್ಯಾಯವಾಗುತ್ತದೆ; ಡೊನಾಲ್ಡ್ ಟ್ರಂಪ್ ಅಪಸ್ವರ

ಜಗತ್ತಿನ ಪ್ರತಿಯೊಂದು ದೇಶವು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿವೆ. ಸುಂಕದ ಮೂಲಕ ಮಾಡುತ್ತಿದ್ದಾರೆ.

ವಾಷಿಂಗ್ಟನ್: ಎಲೋನ್ ಮಸ್ಕ್ ಅವರ ಟೆಸ್ಲಾ ಕಂಪನಿಯು ಭಾರತದಲ್ಲಿ ಸುಂಕಗಳನ್ನು ತಪ್ಪಿಸಲು ಕಾರ್ಖಾನೆಯನ್ನು ನಿರ್ಮಿಸಿದರೆ, ಅದು ಅಮೆರಿಕಕ್ಕೆ ಅನ್ಯಾಯವಾಗುತ್ತದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸುಂಕ ಹೆಚ್ಚಳ ಬಗ್ಗೆ ಡೊನಾಲ್ಡ್ ಟ್ರಂಪ್ ಕ್ರಮದ ಮಧ್ಯೆ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 13 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತ ನಡೆಸುವ ಮೊದಲು, ಅಮೆರಿಕ ಅಧ್ಯಕ್ಷರು ಪರಸ್ಪರ ಸುಂಕಗಳನ್ನು ಘೋಷಿಸಿದ್ದರು.

ಫಾಕ್ಸ್ ನ್ಯೂಸ್‌ನ ಸೀನ್ ಹ್ಯಾನಿಟಿ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಡೊನಾಲ್ಡ್ ಟ್ರಂಪ್, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸುಂಕಗಳನ್ನು ವಿಧಿಸುತ್ತದೆ ಎಂದು ಹೇಳಿದ್ದರು. ಭಾರತದಲ್ಲಿ ಕಾರನ್ನು ಮಾರಾಟ ಮಾಡುವುದು ಮಸ್ಕ್ ಅವರಿಗೆ ಅಸಾಧ್ಯ ಎಂದಿದ್ದರು.

ಜಗತ್ತಿನ ಪ್ರತಿಯೊಂದು ದೇಶವು ನಮ್ಮಿಂದ ಲಾಭ ಮಾಡಿಕೊಳ್ಳುತ್ತಿವೆ. ಸುಂಕದ ಮೂಲಕ ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಹೇಳುವುದಾದರೆ ಭಾರತದಲ್ಲಿ ಕಾರು ಮಾರಾಟ ಮಾಡಲು ಸಾಧ್ಯವಿಲ್ಲ ಎಂದರು. ಮಸ್ಕ್ ಭಾರತದಲ್ಲಿ ಕಾರ್ಖಾನೆಯನ್ನು ನಿರ್ಮಿಸಿದರೆ, ಅದು ಸರಿ, ಆದರೆ ಅದು ನಮಗೆ ಅನ್ಯಾಯವಾಗಿದೆ. ಇದು ತುಂಬಾ ಅನ್ಯಾಯವಾಗಿದೆ" ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿದರು.ನಮಗೆ ಅನ್ಯಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ದಕ್ಷತೆಯ ಇಲಾಖೆಯ ಮುಖ್ಯಸ್ಥರಾಗಿರುವ ಮಸ್ಕ್ ಕೂಡ ಸಂದರ್ಶನದ ಸಮಯದಲ್ಲಿ ಹಾಜರಿದ್ದರು. ಕೆಲವು ದಿನಗಳ ಹಿಂದೆ, ಎಲೆಕ್ಟ್ರಿಕ್ ಕಾರು ತಯಾರಕ ಟೆಸ್ಲಾ ಭಾರತದಲ್ಲಿ ವ್ಯಾಪಾರ ಕಾರ್ಯಾಚರಣೆ ವಿಶ್ಲೇಷಕ ಮತ್ತು ಗ್ರಾಹಕ ಬೆಂಬಲ ತಜ್ಞ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ತೆರೆಯಿತು. ಈ ಕ್ರಮವನ್ನು ಕಂಪನಿಯು ದೇಶಕ್ಕೆ ಪ್ರವೇಶವೆಂದು ನೋಡುತ್ತದೆ.

ಕಂಪನಿಯ ವೆಬ್‌ಸೈಟ್‌ನಲ್ಲಿರುವ ಉದ್ಯೋಗ ಪೋಸ್ಟಿಂಗ್‌ಗಳ ಪ್ರಕಾರ, ಹುದ್ದೆಗಳು 'ಮುಂಬೈ ಸಬರ್ಬನ್' ಪ್ರದೇಶಕ್ಕೆ ಆಗಿದೆ. ನಾನು ಮೋದಿಯವರ ಜೊತೆ ಇತ್ತೀಚೆಗೆ ಮಾತನಾಡುವ ವೇಳೆ ನೀವು ಶೇಕಡಾ 100ರಷ್ಟು ಸುಂಕ ವಿಧಿಸಿದರೆ ನಾವು ಕೂಡ ಅಷ್ಟೇ ವಿಧಿಸುತ್ತೇವೆ ಎಂದು ಹೇಳಿದ್ದೆ. ಅದಕ್ಕೆ ಮಸ್ಕ್ ಅವರು ಆಟೋ ಆಮದು ಸುಂಕ ಶೇಕಡಾ 100ರಷ್ಟು, ಅದು ಸರಿಯಾದದ್ದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT