ಬಿಲಾವಲ್ ಭುಟ್ಟೊ 
ವಿದೇಶ

ಉಗ್ರ ಹಫೀಜ್ ಸಯೀದ್ ಪುತ್ರನ ಕೆಂಗಣ್ಣಿಗೆ ಗುರಿಯಾದ ಬಿಲಾವಲ್ ಭುಟ್ಟೊ! ಕಾರಣವೇನು?

ಭಾರತ ಸೂಕ್ತ ದಾಖಲೆ ತೋರಿಸಿದರೆ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ಬಿಲಾವಲ್ ಭುಟ್ಟೊ ಶುಕ್ರವಾರ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಝರ್ದಾರಿ, ಜಾಗತಿಕ ಉಗ್ರ ಹಫೀಜ್ ಸಯೀದ್ ಪುತ್ರನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅವರಂತಹ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸಲು ತಮ್ಮ ದೇಶಕ್ಕೆ ಯಾವುದೇ ಅಭ್ಯಂತರವಿಲ್ಲ ಎಂಬ ಅವರ ಹೇಳಿಕೆಗೆ ಹಫೀಜ್ ಸಯೀದ್ ಪುತ್ರನನ್ನು ಕೆರಳಿಸಿದೆ. ಭುಟ್ಟೊ ಹೇಳಿಕೆ ಜಾಗತಿಕವಾಗಿ ಪಾಕಿಸ್ತಾನಕ್ಕೆ ಕಳಂಕ ತಂದಿದೆ ಎಂದು ಹಫೀಜ್ ಸಯೀದ್‌ ಪುತ್ರ ತಲ್ಹಾ ಸಯೀದ್ ಕಿಡಿಕಾರಿದ್ದಾನೆ.

ಭಾರತ ಸೂಕ್ತ ದಾಖಲೆ ತೋರಿಸಿದರೆ ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ಬಿಲಾವಲ್ ಭುಟ್ಟೊ ಶುಕ್ರವಾರ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಅಜರ್, 2001 ರ ಸಂಸತ್ ದಾಳಿ, 26/11 ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ವಾಯುನೆಲೆ ದಾಳಿ ಮತ್ತು 2019 ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಪ್ರಮುಖ ದಾಳಿಗಳೊಂದಿಗೆ ಸಂಬಂಧ ಹೊಂದಿದ್ದಾನೆ.

ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JEM)ಮುಖ್ಯಸ್ಥ ಮಸೂದ್ ಅಜರ್ ಎಲ್ಲಿದ್ದಾನೆ ಎಂಬುದು ಪಾಕಿಸ್ತಾನಕ್ಕೆ ಗೊತ್ತಿಲ್ಲ. ಆತ ಪಾಕ್ ನೆಲದಲ್ಲಿಯೇ ಇದ್ದಾನೆ ಎಂಬುದಕ್ಕೆ ಭಾರತ ವಿಶ್ವಾಸಾರ್ಹ ಪುರಾವೆ ನೀಡಿದರೆ ಆತನನ್ನು ದೇಶ ಬಂಧಿಸುತ್ತದೆ ಎಂಬ ಬಿಲಾವಲ್ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿರುವ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್, ಪಿಪಿಪಿ ನಾಯಕ ಇಂತಹ ಹೇಳಿಕೆ ನೀಡಬಾರದಿತ್ತು ಎಂದಿದ್ದಾರೆ.

ಹಫೀಜ್ ಸಯೀದ್ ನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಅವರ ಹೇಳಿಕೆಯು ವಿಶ್ವ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಕಳಂಕ ತಂದಿದೆ ಎಂದು ಅವರು ಹೇಳಿದ್ದಾರೆ. ಹಫೀಜ್ ಸಯೀದ್‌ನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಆತನ ಕುಟುಂಬ ಮತ್ತು ಇತರರು ತೀವ್ರವಾಗಿ ವಿರೋಧಿಸುವುದಾಗಿ ಜಾಗತಿಕ ಭಯೋತ್ಪಾದಕನೂ ಆಗಿರುವ ತಲ್ಹಾ ಸಯೀದ್ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಸಂಸ್ಥೆ ಸುಧಾರಣೆ ವಿರೋಧಿಸುವವರಿಗೆ ಜಾಗತಿಕ ವೇದಿಕೆ ಬಗ್ಗೆ ಕಾಳಜಿಯಿಲ್ಲ, ಕೇವಲ ಸ್ವಾರ್ಥಕ್ಕೆ ಬಳಕೆ: ಎಸ್. ಜೈಶಂಕರ್ ವಾಗ್ದಾಳಿ

ಸಿಕ್ಕಿಂನಲ್ಲಿ ವರುಣನ ಆರ್ಭಟ: Rimbi ಗ್ರಾಮದಲ್ಲಿ ಭೀಕರ ಭೂಕುಸಿತ; ಹಲವು ಮನೆಗಳು, ಸರ್ಕಾರಿ ವಸತಿ ಗೃಹಗಳು ಧ್ವಂಸ..!

Delhi SIR: ಕ್ಷೇತ್ರ ಪರಿಶೀಲನೆ ಬಳಿಕ ಎಲ್.ಕೆ. ಅಡ್ವಾಣಿ, ಜಗದೀಪ್ ಧನಕರ್, ಜೈಶಂಕರ್ ಸೇರಿ ಹಲವು ಗಣ್ಯರ Voter ID ಗೊಂದಲಕ್ಕೆ ತೆರೆ!

ಮಧ್ಯಪ್ರದೇಶ: ಕಿರಿಯ ವಿದ್ಯಾರ್ಥಿಗೆ ಬೆಲ್ಟ್‌ನಿಂದ ಹೊಡೆತ; ಕೈ ಸುಟ್ಟು ದೌರ್ಜನ್ಯ!

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ