ಮುರಿದು ಬಿದ್ದ 360 ಡಿಗ್ರಿ ರೈಡ್ 
ವಿದೇಶ

Saudi Arabia: ಮುರಿದು ಬಿದ್ದ '360 Degree Ride'; 23 ಮಂದಿಗೆ ಗಾಯ, Video

ಸೌದಿ ಅರೇಬಿಯಾದ ತೈಫ್ ಬಳಿಯ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪಾರ್ಕ್ ನಲ್ಲಿದ್ದ '360 ಡಿಗ್ರಿ ರೈಡ್' ಚಾಲ್ತಿಯಲ್ಲಿರುವಾಗಲೇ ತುಂಡಾಗಿ ನೆಲಕ್ಕೆ ಕುಸಿದಿದೆ.

ತೈಫ್: ಸೌದಿ ಅರೇಬಿಯಾದ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ '360 ಡಿಗ್ರಿ ರೈಡ್' ದಿಢೀರ್ ಮುರಿದು ಬಿದ್ದಿದ್ದು, ಈ ವೇಳೆ ರೈಡ್ ನಲ್ಲಿದ್ದ ಕನಿಷ್ಠ 23 ಮಂದಿ ಗಾಯಗೊಂಡಿದ್ದಾರೆ.

ಸೌದಿ ಅರೇಬಿಯಾದ ತೈಫ್ ಬಳಿಯ ಹಡಾ ಪ್ರದೇಶದ ಗ್ರೀನ್ ಮೌಂಟೇನ್ ಪಾರ್ಕ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಪಾರ್ಕ್ ನಲ್ಲಿದ್ದ '360 ಡಿಗ್ರಿ ರೈಡ್' ಚಾಲ್ತಿಯಲ್ಲಿರುವಾಗಲೇ ತುಂಡಾಗಿ ನೆಲಕ್ಕೆ ಕುಸಿದಿದೆ. ಈ ವೇಳೆ ಅದರಲ್ಲಿದ್ದವರ ಪೈಕಿ 23 ಮಂದಿ ಗಾಯಗೊಂಡಿದ್ದಾರೆ.

ಅರ್ಧಕ್ಕೆ ತುಂಡಾದ '360 ಡಿಗ್ರಿ ರೈಡ್'

ಸುಮಾರು 40 ಮಂದಿ ಕುಳಿತಿದ್ದ 360 ಡಿಗ್ರಿ ರೈಡ್ ಚಾಲನೆಯಲ್ಲಿರುವಾಗ ದಿಢೀರನೆ ಅದರ ವೇಗ ಹೆಚ್ಚಾಗಿದೆ. ಈ ವೇಳೆ ಅದರಲ್ಲಿ ಕುಳಿತಿದ್ದ ಜನ ಕೂಗಿದ್ದು, ನೋಡ ನೋಡುತ್ತಲೇ 360 ಡಿಗ್ರಿಯ ಮಧ್ಯದ ಕಂಬ ಅರ್ಧಕ್ಕೆ ಮುರಿದಿದೆ.

ಈ ವೇಳೆ ಅದರ ಕೆಳಭಾಗದಲ್ಲಿ ಜನರಿದ್ದ ವೇದಿಕೆ ದೊಡ್ಡ ಶಬ್ದದೊಂದಿಗೆ ನೆಲಕ್ಕೆ ಕುಸಿದಿದೆ. ಈ ವೇಳೆ ಅದರಲ್ಲಿ ಸವಾರರು ಇನ್ನೂ ಅದರ ಮೇಲೆ ಕುಳಿತಿದ್ದರು.

23 ಮಂದಿಗೆ ಗಾಯ

ಇನ್ನು ಈ ದುರಂತದಲ್ಲಿ 23 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತ ಸಂಭವಿಸುತ್ತಲೇ ಭದ್ರತಾ ಪಡೆಗಳು ಮತ್ತು ತುರ್ತು ಪ್ರತಿಕ್ರಿಯೆ ಸಿಬ್ಬಂದಿ ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.

ಏತನ್ಮಧ್ಯೆ, ಸಂಬಂಧಿತ ಅಧಿಕಾರಿಗಳು ರೈಡ್‌ನ ಅಸಮರ್ಪಕ ಕಾರ್ಯದ ಕಾರಣದ ಬಗ್ಗೆ ತುರ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ, ಏನು ತಪ್ಪಾಗಿದೆ ಎಂಬುದನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಯುವ ಗುರಿಯನ್ನು ಹೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಅತಿಯಾಗಿ ಭಯ ಹುಟ್ಟಿಸಬೇಡಿ, ನಿಮ್ಮ ಹೆದರಿಕೆಗೆ ಬಗ್ಗಲ್ಲ: ಗಾಯದ Video ಶೇರ್​ ಮಾಡಿ ಪೊಲೀಸರಿಗೆ ಆಮೀರ್ ಖಾನ್ ಸೊಸೆ ತಿರುಗೇಟು!

CJP ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಇಮ್ರಾನ್ ಖಾನ್​ಗೆ ಬಿಗ್ ಶಾಕ್; ಗಡಿಪಾರು ಸಾಧ್ಯತೆ

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ