ಯೂಷ್ ಗೋಯಲ್ ಅವರು ಅಮೆರಿಕ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಸ್ಪರ ಪ್ರಯೋಜನಕಾರಿ ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದಕ್ಕಾಗಿ ಅಮೆರಿಕ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರನ್ನು ಕಳೆದ ಮೇ ತಿಂಗಳಲ್ಲಿ ಭೇಟಿಯಾಗಿದ್ದರು.  
ವಿದೇಶ

ಭಾರತ-ಅಮೆರಿಕ ಮಧ್ಯೆ ವ್ಯಾಪಾರ ಒಪ್ಪಂದ ಸದ್ಯದಲ್ಲೇ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್

ಭಾರತ ಹೊಂದಿರುವ ಹೆಚ್ಚಿನ ಸುಂಕಗಳನ್ನು ಗಮನಿಸಿದ ಲುಟ್ನಿಕ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ತಕ್ಷಣವೇ ಧ್ವನಿಗೂಡಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವೆ ಸದ್ಯದಲ್ಲಿಯೇ ವ್ಯಾಪಾರ ಒಪ್ಪಂದವನ್ನು ನಿರೀಕ್ಷಿಸಬೇಕು ಎಂದು ಅಮೆರಿಕ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ,

ನಿನ್ನೆ ಸೋಮವಾರ ನಡೆದ ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ (USISPF) ನಾಯಕತ್ವ ಶೃಂಗಸಭೆಯ ಎಂಟನೇ ಆವೃತ್ತಿಯಲ್ಲಿ ಅವರು ಮಾತನಾಡುತ್ತಿದ್ದರು.

ಸದ್ಯದಲ್ಲಿಯೇ ಅಮೆರಿಕ ಮತ್ತು ಭಾರತದ ನಡುವೆ ಒಪ್ಪಂದವನ್ನು ನೀವು ನಿರೀಕ್ಷಿಸಬೇಕು ಎಂದು ಲುಟ್ನಿಕ್ ತಮ್ಮ ಮುಖ್ಯ ಭಾಷಣದಲ್ಲಿ ಹೇಳಿದ್ದಾರೆ. ಎರಡೂ ದೇಶಗಳಿಗೆ ಸೂಕ್ತ ಸ್ಥಳವನ್ನು ಕಂಡುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಆಶಾವಾದದಲ್ಲಿದ್ದೇವೆ ಎಂದರು.

ಭಾರತ ಮತ್ತು ಅಮೆರಿಕ ಒಟ್ಟಿಗೆ ಕೆಲಸ ಮಾಡಬಹುದಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿವೆ. ಈ ವಾರ ದೆಹಲಿಯಲ್ಲಿ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಹತ್ವದ ಮಾತುಕತೆ ನಡೆಯಲಿದ್ದು, ಇದಾದ ಬಳಿಕ ಉಭಯ ದೇಶಗಳು ಅಂತಿಮ ತೀರ್ಮಾನಕ್ಕೆ ಬರಲಿವೆ. ಅತಿ ಶೀಘ್ರದಲ್ಲೇ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಘೋಷಣೆಯಾಗಲಿದೆ ಎಂದು ಹೊವಾರ್ಡ್ ಲುಟ್ನಿಕ್ ಭರವಸೆ ವ್ಯಕ್ತಪಡಿಸಿದ್ದಾರೆ.

ಎರಡೂ ದೇಶಗಳು ಸರಿಯಾದ ಸಮಾಲೋಚಕರನ್ನು ನೇಮಿಸಿದಾಗ, ಚರ್ಚೆಗಳು ಗಮನಾರ್ಹವಾಗಿ ಹೆಚ್ಚು ಉತ್ಪಾದಕವಾಗುತ್ತವೆ, ಈ ನಿಟ್ಟಿನಲ್ಲಿ ಉತ್ತಮ ಮಟ್ಟಕ್ಕೆ ಹೋಗಲು ಸಿದ್ಧರಾಗಿದ್ದೇವೆ. ಎರಡೂ ದೇಶಗಳ ನಡುವಿನ ಹಿಂದಿನ ವ್ಯಾಪಾರ ಮಾತುಕತೆಗಳು ಸಾಮಾನ್ಯವಾಗಿ ಎರಡರಿಂದ ಮೂರು ವರ್ಷಗಳ ಕಾಲ ನಡೆಯುತ್ತಿದ್ದವು, ಆದರೆ ಪ್ರಸ್ತುತ ಪ್ರಯತ್ನವು ಕೇವಲ ಕೆಲವು ತಿಂಗಳುಗಳಲ್ಲಿ ಒಪ್ಪಂದವನ್ನು ತಲುಪುವ ಗುರಿಯನ್ನು ಹೊಂದಿದೆ. ಭಾರತವನ್ನು ಬಹುವಾಗಿ ಪ್ರೀತಿಸುವ ಡೊನಾಲ್ಡ್‌ ಟ್ರಂಪ್‌, ಎರಡೂ ದೇಶಗಳಿಗೆ ಅನುಕೂಲವಾಗುವಂತಹ ವ್ಯಾಪಾರ ಒಪ್ಪಂದನ್ನು ಜಾರಿಗ ತರಲಿದ್ದಾರೆ ಎಂದರು.

ಭಾರತ ಹೊಂದಿರುವ ಹೆಚ್ಚಿನ ಸುಂಕಗಳನ್ನು ಗಮನಿಸಿದ ಲುಟ್ನಿಕ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದನ್ನು ತಕ್ಷಣವೇ ಧ್ವನಿಗೂಡಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.

ಅಮೆರಿಕವು ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ, ಅದಕ್ಕೆ ಭಾರತವು ಪ್ರತಿಯಾಗಿ ಅಮೆರಿಕಾ ಮಾರುಕಟ್ಟೆಗೆ ಆದ್ಯತೆಯ ಪ್ರವೇಶವನ್ನು ಹುಡುಕುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT