ವಿದೇಶ

United Nation: ಮಾಧ್ಯಮ ಸಂವಾದದಲ್ಲಿ ಭುಟ್ಟೋ ತಬ್ಬಿಬ್ಬು; ಕರ್ನಲ್ ಸೋಫಿಯಾ ಖುರೇಷಿ ಹೆಸರು ಉಲ್ಲೇಖಿಸಿ ಬಾಯಿ ಮುಚ್ಚಿಸಿದ ಪತ್ರಕರ್ತ!

ಸೇನಾ ಸಂಘರ್ಷದ ಸಮಯದಲ್ಲಿ ಭಾರತ ಸರ್ಕಾರದ ಪರ ಇಡೀ ಜಗತ್ತಿಗೆ ವಿವರ ನೀಡುತ್ತಿದ್ದ "ಮುಸ್ಲಿಂ ಭಾರತೀಯ ಮಿಲಿಟರಿ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ನವದೆಹಲಿ: ಪಾಕಿಸ್ತಾನದ ಮಾಜಿ ಸಚಿವ ಬಿಲಾವಲ್ ಭುಟ್ಟೋ ಅವರು ಯುಎನ್ ಮಾಧ್ಯಮ ಸಂವಾದದಲ್ಲಿ ಪತ್ರಕರ್ತರ ಪ್ರಶ್ನೆಯಿಂದ ತಬ್ಬಿಬ್ಬಾದ ಪ್ರಸಂಗ ನಡೆದಿದೆ. ಹಿರಿಯ ಪತ್ರಕರ್ತರೊಬ್ಬರು ಕರ್ನಲ್ ಸೋಫಿಯಾ ಖುರೇಷಿ ಉಲ್ಲೇಖಿಸಿ, ಭುಟ್ಟೋ ಅವರನ್ನು ಬಾಯಿ ಮುಚ್ಚಿಸಿದ್ದಾರೆ.

ಹೌದು, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಭಾರತದಲ್ಲಿನ ಮುಸ್ಲಿಮರನ್ನು ಬೆದರಿಸಲು ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದ ನಂತರ ಹಿರಿಯ ಪತ್ರಕರ್ತರಾದ ಅಹ್ಮದ್ ಫಾತಿ ಅವರು, ಸೇನಾ ಸಂಘರ್ಷದ ಸಮಯದಲ್ಲಿ ಭಾರತ ಸರ್ಕಾರದ ಪರ ಇಡೀ ಜಗತ್ತಿಗೆ ವಿವರ ನೀಡುತ್ತಿದ್ದ "ಮುಸ್ಲಿಂ ಭಾರತೀಯ ಮಿಲಿಟರಿ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಇದಕ್ಕೆ ಉತ್ತರಿಸದ ಭುಟ್ಟೋ, ಭಾರತದ ವಿರುದ್ಧ ಆಧಾರರಹಿತ ಆರೋಪ ಮಾಡುವುದನ್ನು ಮುಂದುವರೆಸಿದ್ದಾರೆ.

ಭಾರತದಲ್ಲಿನ ಮುಸ್ಲಿಂರನ್ನು ಬೆದರಿಸಲಾಗುತ್ತಿದೆ ಎಂಬ ಬೊಟ್ಟೋ ಆರೋಪ ಮಾಡುತ್ತಿದ್ದಂತೆ ಮಾತನಾಡಿದ ಅಹ್ಮದ್ ಫಾತಿ, "ಸರ್, ನಾನು ಎರಡೂ ಕಡೆಯ ಬ್ರೀಫಿಂಗ್‌ಗಳನ್ನು ನೋಡಿದ್ದೇನೆ. ನನಗೆ ನೆನಪಿರುವಂತೆ, ಭಾರತದ ಕಡೆ ಬ್ರೀಫಿಂಗ್ ಮಾಡಿದ್ದವರಲ್ಲಿ ಮುಸ್ಲಿಂ ಭಾರತೀಯ ಮಿಲಿಟರಿ ಅಧಿಕಾರಿಗಳು ಇದ್ದರು. ಕರ್ನಲ್ ಸೋಫಿಯಾ ಖುರೇಷಿ, ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸ್ಥಾನವನ್ನು ಸ್ಪಷ್ಟಪಡಿಸುವ ಮೂಲಕ ದೇಶಕ್ಕೆ ಸ್ಫೂರ್ತಿಯಾಗಿ ಹೊರಹೊಮ್ಮಿದ್ದರು ಎಂದು ಹೇಳಿದರು.

ಇದರಿಂದ ತಡವರಿಸಿಕೊಂಡು ಮಾತನಾಡಿದ ಭುಟ್ಟೋ, ಸರಿ, ಕಾರ್ಯಾಚರಣೆಗೆ ಸಂಬಂಧಿಸಿದಂತೆ, ನೀವು ಹೇಳುತ್ತಿರುವುದು ಖಂಡಿತವಾಗಿಯೂ ನಿಜ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಹ್ಮದ್ ಫಾತಿ, "Okay ಎಂದರು. ಅವರು ಮುಂದಿನ ಪ್ರಶ್ನೆಯನ್ನು ಕೇಳುವ ಮುನ್ನಾವೇ ಬಾಯಿ ಅಡ್ಡಹಾಕಿದ ಭುಟ್ಟೋ, ಭಾರತದ ವಿರುದ್ಧ ಇಲ್ಲಸಲ್ಲದ ಆರೋಪ ಮುಂದುವರೆಸಿದರು. ಆದರೆ ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿ ಸದಸ್ಯ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಅಧ್ಯಕ್ಷರಾಗಿರುವ ಭುಟ್ಟೋ, ಈ ಹಿಂದೆ ದೇಶದ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವ ಇಸ್ಲಾಮಾಬಾದ್‌ನ ಪ್ರಯತ್ನಗಳಿಗೆ ಎದುರಾದ ಅಡ್ಡಿಗಳನ್ನು ವಿಶ್ವಸಂಸ್ಥೆಯ ಮಾಧ್ಯಮ ಗೋಷ್ಠಿಯಲ್ಲಿ ಬಿಲಾವಲ್ ಭುಟ್ಟೋ ಒಪ್ಪಿಕೊಂಡರು. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲೂ ಈ ಕುರಿತು ಅಡ್ಡಿಯುಂಟಾಗಿತ್ತು. ಅದು ಇನ್ನೂ ಅಸ್ತಿತ್ವದಲ್ಲಿದೆ ಎಂದು ಹೇಳಿದರು.

ಇತ್ತೀಚಿನ ಸೇನಾ ಸಂಘರ್ಷದ ನಂತರ ಪಾಕ್ ಪ್ರಚೋದಿತ ಭಯೋತ್ಪಾದನೆ ಕುರಿತು ಜಗತ್ತಿಗೆ ವಿವರಿಸಲು ಭಾರತದ ಸರ್ವಪಕ್ಷದ ನಿಯೋಗಗಳು ವಿವಿಧೆಡೆಗೆ ತೆರಳಿತ್ತು. ಅದನ್ನೇ ನಕಲು ಮಾಡಿರುವ ಪಾಕಿಸ್ತಾನವೂ ವಿದೇಶಗಳಿಗೆ ತನ್ನ ನಿಯೋಗ ಕಳುಹಿಸಿದೆ. ಇದರಲ್ಲಿ ಭುಟ್ಟೋ ನಿಯೋಗವೂ ಒಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

'Vishwaguru' exposed: ಮುನೀರ್ ಹಾಡಿ ಹೊಗಳಿದ ಟ್ರಂಪ್! ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ!

Madhya Pradesh: 15 ದಿನದಲ್ಲಿ 6 ಮಕ್ಕಳ ಕಿಡ್ನಿ ಫೇಲ್, ಸಾವು..! 2 Cough Syrup ನಿಷೇಧ! ICMR ತಂಡ ದೌಡು

Video: 'ಕರ್ನಾಟಕದಲ್ಲಿ ಹಿಂದಿ ಮಾತಾಡು..' ಬುರ್ಖಾಧಾರಿ ಮಹಿಳೆ ಉದ್ಧಟತನ, ಸರಿಯಾಗಿ ಜಾಡಿಸಿದ 'ಕನ್ನಡತಿ'

Asia Cup 2025 ಸೋಲಿನ ಬೆನ್ನಲ್ಲೇ ಬರೆ, ಬಾಲ ಬಿಚ್ಚಿದ್ದ ಆಟಗಾರರ ಪುಡಿಗಾಸಿಗೂ PCB ಕೊಕ್ಕೆ!, NOC 'Suspension'

SCROLL FOR NEXT