ವಿದೇಶ

ಕೀನ್ಯಾದಲ್ಲಿ ಘೋರ ಘಟನೆ: ಭೀಕರ ಅಪಘಾತದಲ್ಲಿ 18 ತಿಂಗಳ ಮಗು ಸೇರಿ ಕೇರಳ ಮೂಲದ ಐವರು ದುರ್ಮರಣ!

ಮೃತರೆಲ್ಲರೂ ಕತಾರ್ ನಲ್ಲಿ ನೆಲೆಸಿದ್ದ ಭಾರತೀಯ ಮೂಲದವರು ಎಂದು ಗುರುತಿಸಲಾಗಿದ್ದು ಐವರು ಕೇರಳಿಗರು ಎಂದು ತಿಳಿದುಬಂದಿದೆ.

ಕೀನ್ಯಾದಲ್ಲಿ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಆರು ಭಾರತೀಯರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಕತಾರ್ ನಲ್ಲಿ ನೆಲೆಸಿದ್ದ ಭಾರತೀಯ ಮೂಲದವರು ಎಂದು ಗುರುತಿಸಲಾಗಿದ್ದು ಐವರು ಕೇರಳಿಗರು ಎಂದು ತಿಳಿದುಬಂದಿದೆ. ಮೃತರಾದ ಮಲಯಾಳಿಗಳಾದ ಮಾವೆಲಿಕ್ಕರ ಮೂಲದ ಗೀತಾ ಶೋಜಿ ಐಸಾಕ್ (58), ಜಸ್ನಾ ಕುಟ್ಟಿಕ್ಕಟ್ಟುಚಲಿಲ್ (29), ರುಹಿ ಮೆಹ್ರಿ ಮೊಹಮ್ಮದ್ (18 ತಿಂಗಳ), ಒಟ್ಟಪಾಲಂ ಮೂಲದ ರಿಯಾ ಎನ್ (41) ಮತ್ತು ಟೈರಾ ರೊಡ್ರಿಗಸ್ (8) ಎಂದು ಗುರುತಿಸಲಾಗಿದೆ. ಆದರೆ ಮತೋರ್ವನ ಗುರುತು ಪತ್ತೆಯಾಗಿಲ್ಲ.

ನ್ಯಾಂಡರುವಾ ಕೌಂಟಿಯ ಓಲ್ ಜೊರೊರೊಕ್-ನಕುರು ರಸ್ತೆಯಲ್ಲಿರುವ ಗಿಚಾಕಾದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 27 ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರು ನ್ಯಾಹುರುರುವಿನ ಪನಾರಿ ರೆಸಾರ್ಟ್‌ಗೆ ತೆರಳುತ್ತಿದ್ದಾಗ ಅವರ ಬಸ್ ಕಂದಕಕ್ಕೆ ಬಿದ್ದಿತು. ಕಡಿದಾದ ಇಳಿಜಾರಿನ ಪ್ರದೇಶದಲ್ಲಿ ತಿರುವು ಪಡೆಯಲು ಯತ್ನಿಸಿದಾಗ ಚಾಲಕ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಉರುಳಿ ಬಿದ್ದಿದೆ. ಬಸ್ ನಲ್ಲಿ 28 ಪ್ರವಾಸಿಗರು, ಮೂವರು ಸ್ಥಳೀಯ ಮಾರ್ಗದರ್ಶಕರು ಮತ್ತು ಚಾಲಕನನ್ನು ಹೊತ್ತೊಯ್ಯುತ್ತಿತ್ತು.

ನೈರೋಬಿಯಲ್ಲಿರುವ ಭಾರತೀಯ ಹೈಕಮಿಷನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು. ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಹೈಕಮಿಷನ್‌ನ ಅಧಿಕಾರಿಗಳ ತಂಡವು ಸ್ಥಳದಲ್ಲಿದ್ದು, ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ. ನಮ್ಮನ್ನು +254 734916532 ನಲ್ಲಿ ಸಂಪರ್ಕಿಸಬಹುದು ಎಂದು ಹೈಕಮಿಷನ್ ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT