ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ 
ವಿದೇಶ

ಇರಾನ್ ಹೀಗೆ ಮುಂದುವರಿದರೇ.. ''ಟೆಹ್ರಾನ್ ಸುಟ್ಟು ಭಸ್ಮವಾಗಲಿದೆ: ಇಸ್ರೇಲ್ ರಕ್ಷಣಾ ಸಚಿವ ಖಡಕ್ ಎಚ್ಚರಿಕೆ!

"(ಅಲಿ) ಖಮೇನಿ ಇಸ್ರೇಲಿ ಮೇಲೆ ಕ್ಷಿಪಣಿ ದಾಳಿ ಮುಂದುವರೆಸಿದರೆ, ಟೆಹ್ರಾನ್ ಸುಟ್ಟು ಭಸ್ಮವಾಗಲಿದೆ ಎಂದು ಇಸ್ರೇಲಿ ರಕ್ಷಣಾ ಸಚಿವರು ಪ್ರತಿಪಾದಿಸಿದರು.

ಜೆರುಸೆಲೆಂ: ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದರೆ "ಟೆಹ್ರಾನ್ ಸುಟ್ಟುಹೋಗುತ್ತದೆ" ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನ ಪರಮಾಣು, ಕ್ಷಿಪಣಿ ಮತ್ತು ಮಿಲಿಟರಿ ಸಂಕೀರ್ಣದ ಮೇಲೆ ಇಸ್ರೇಲ್ ದಾಳಿ ನಂತರ ಇರಾನ್ ಪ್ರತೀಕಾರದ ದಾಳಿ ಆರಂಭಿಸುತ್ತಿದ್ದಂತೆಯೇ ಕಾಟ್ಜ್ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಮುಖ್ಯಸ್ಥ ಇಯಾಲ್ ಜಮೀರ್, ಮೊಸಾದ್ ನಿರ್ದೇಶಕ ಡೇವಿಡ್ ಬರ್ನಿಯಾ ಮತ್ತಿತರ ಉನ್ನತ ಮಿಲಿಟರಿ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಮೌಲ್ಯಮಾಪನದ ಸಂದರ್ಭದಲ್ಲಿ ಮಾತನಾಡಿದ ಕಾಟ್ಜ್, ಇರಾನ್‌ನ ಸರ್ವಾಧಿಕಾರಿಯು ಅಲ್ಲಿನ ನಾಗರಿಕರನ್ನು ಒತ್ತೆಯಾಳುಗಳಾಗಿ ಪರಿವರ್ತಿಸುತ್ತಿದ್ದಾರೆ. ಇಸ್ರೇಲಿ ನಾಗರಿಕರ ಮೇಲಿನ ಕ್ರಿಮಿನಲ್ ದಾಳಿಗೆ ವಿಶೇಷವಾಗಿ ಟೆಹ್ರಾನ್‌ನ ನಿವಾಸಿಗಳು ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ ಎಂದರು.

"(ಅಲಿ) ಖಮೇನಿ ಇಸ್ರೇಲಿ ಮೇಲೆ ಕ್ಷಿಪಣಿ ದಾಳಿ ಮುಂದುವರೆಸಿದರೆ, ಟೆಹ್ರಾನ್ ಸುಟ್ಟು ಭಸ್ಮವಾಗಲಿದೆ ಎಂದು ಇಸ್ರೇಲಿ ರಕ್ಷಣಾ ಸಚಿವರು ಪ್ರತಿಪಾದಿಸಿದರು.

ಇಸ್ರೇಲ್ ಇಲ್ಲಿಯವರೆಗೆ ತನ್ನ ದಾಳಿಗಳನ್ನು ಇರಾನ್ ಪರಮಾಣು ಮತ್ತು ಮಿಲಿಟರಿ ಕಟ್ಟಡಗಳಿಗೆ ಸೀಮಿತಗೊಳಿಸಿದ್ದು, ಪ್ರಮುಖ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದೆ. ಕಳೆದ ರಾತ್ರಿಯಿಂದ ಇರಾನ್ ಹಲವಾರು ಬ್ಯಾರೇಜ್‌ಗಳಲ್ಲಿ ಇಸ್ರೇಲ್‌ನ ಮೇಲೆ ಸುಮಾರು 200 ಖಂಡಾಂತರ ಕ್ಷಿಪಣಿ ದಾಳಿ ನಡೆಸಿದ್ದು, ವಾಯು ರಕ್ಷಣೆಯಿಂದ ಹೆಚ್ಚಿನ ಕ್ಷಿಪಣಿ ದಾಳಿ ತಡೆಹಿಡಿಯಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF)ಹೇಳಿದೆ.

ಇರಾನ್ ನಡೆಸಿದ ಸಣ್ಣ ಪ್ರಮಾಣದ ಕ್ಷಿಪಣಿ ದಾಳಿಯಿಂದ ಮಧ್ಯ ಇಸ್ರೇಲ್‌ನ ಟೆಲ್ ಅವಿವ್, ರಮತ್ ಗನ್ ಮತ್ತು ರಿಶನ್ ಲೆಜಿಯಾನ್‌ನ ವಸತಿ ಪ್ರದೇಶಗಳಲ್ಲಿ ಸಾವುನೋವುಗಳು ಮತ್ತು ಹಾನಿಯನ್ನುಂಟುಮಾಡಿದೆ . ಇರಾನಿನ ಕ್ಷಿಪಣಿ ದಾಳಿಯಲ್ಲಿ ಮೂವರು ಇಸ್ರೇಲಿಗಳು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 70 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ತನ್ನ ಎಲ್ಲಾ ವಾಯು ನೆಲೆಗಳು ಸೇರಿದಂತೆ, ತಮ್ಮ ಕಾರ್ಯಚಟುವಟಿಕೆಗೆ ಯಾವುದೇ ಹಾನಿಯಾಗದಂತೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT