ಟೆಹ್ರಾನ್: ಇರಾನ್‌ನ ಕ್ಷಿಪಣಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಟೆಹ್ರಾನ್‌ನಲ್ಲಿ ನಾಗರಿಕ ಗುರಿಗಳ ಮೇಲೆ ದಾಳಿ ಮಾಡುವುದಾಗಿ ಇಸ್ರೇಲ್ ಎಚ್ಚರಿಸಿದೆ. ಸುಪ್ರೀಂ ನಾಯಕ ಅಲಿ ಖಮೇನಿ ಅವರನ್ನು "ದುರಹಂಕಾರಿ ಸರ್ವಾಧಿಕಾರಿ" ಎಂದು ಇಸ್ರೇಲ್ ಟೀಕಿಸಿದೆ,
ಮಧ್ಯಪ್ರಾಚ್ಯದಲ್ಲಿ ಇತ್ತೀಚಿನ ಭುಗಿಲೆದ್ದ ಈ ದಾಳಿಯಲ್ಲಿ ನಾಗರಿಕ ಗುರಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಎರಡೂ ದೇಶಗಳು ಪರಸ್ಪರ ಆರೋಪಿಸಿಕೊಂಡ ಬಳಿಕ ಈ ಹೇಳಿಕೆ ಬಂದಿದೆ.
"ಟೆಹ್ರಾನ್‌ನ ದುರಹಂಕಾರಿ ಸರ್ವಾಧಿಕಾರಿ ಒಬ್ಬ ಹೇಡಿ ಕೊಲೆಗಾರನಾಗಿದ್ದಾನೆ, ಇಸ್ರೇಲ್‌ನಲ್ಲಿ ನಾಗರಿಕರ ಮನೆಯ ಮುಂಭಾಗದ ಮೇಲೆ ಗುರಿಯಿಟ್ಟು ಗುಂಡು ಹಾರಿಸುತ್ತಾನೆ. ಟೆಹ್ರಾನ್ ನಿವಾಸಿಗಳು ಶೀಘ್ರದಲ್ಲೇ ಬೆಲೆ ತೆರಬೇಕಾಗುತ್ತದೆ" ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ.
ಇಸ್ರೇಲ್ ನ್ನು "ದುಷ್ಟ ಝಿಯೋನಿಸ್ಟ್ ಶತ್ರು" ಎಂದು ಉಲ್ಲೇಖಿಸುವ ಮೂಲಕ ಇರಾನ್ ಇಸ್ರೇಲ್ ಗೆ ಭಾರೀ ಹೊಡೆತಗಳನ್ನು ನೀಡುತ್ತದೆ ಎಂದು ಖಮೇನಿ ಈ ಹಿಂದೆ ಪ್ರತಿಜ್ಞೆ ಮಾಡಿದ್ದರು.
ದಶಕಗಳ ನೆರಳು ಯುದ್ಧಗಳು ಮತ್ತು ರಹಸ್ಯ ಕಾರ್ಯಾಚರಣೆಗಳ ನಂತರ ವರ್ಷಗಳ ಕಾಲ ನಡೆಯುತ್ತಿರುವ ಮಧ್ಯಪ್ರಾಚ್ಯ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುವ ಅಪಾಯವಿದೆ. ಇತ್ತೀಚಿನ ದಾಳಿಗಳು ಮಾನವೀಯ ಕಳವಳಗಳನ್ನು ಮಾತ್ರವಲ್ಲದೆ ವ್ಯಾಪಾರದ ಪರಿಣಾಮಗಳನ್ನು ಸಹ ಉಂಟುಮಾಡಿವೆ, ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಇಲ್ಲಿಯವರೆಗೆ, ಇರಾನ್ ನಲ್ಲಿ 230 ಮಂದಿ ಮೃತಪಟ್ಟಿದ್ದಾರೆ. ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.
ಇರಾನ್ ನಿನ್ನೆ ರಾತ್ರಿ ವಿವಿಧ ಇಸ್ರೇಲಿ ನಗರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿತು. ಇದನ್ನು ಖಮೇನಿ "ಜಿಯೋನಿಸ್ಟ್‌ಗಳಿಗೆ ಭಾರೀ ಹೊಡೆತಗಳು" ಎಂದು ಹೇಳಿದ್ದಾರೆ. "ಜಿಯೋನಿಸ್ಟ್‌ಗಳಿಗೆ ಜೀವನವು ಖಂಡಿತವಾಗಿಯೂ ಕಹಿಯಾಗುತ್ತದೆ" ಎಂದು ಅವರು ಇಸ್ರೇಲ್ ಮೇಲೆ ಕ್ಷಿಪಣಿಗಳ ಮಳೆಯನ್ನು ಬೀಳಿಸುವುದನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡರು.
ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನ ದೃಶ್ಯಗಳು ನಾಗರಿಕರಿಗೆ ಆಶ್ರಯ ಪಡೆಯುವಂತೆ ಇಸ್ರೇಲ್ ಪಡೆಗಳು ನೀಡಿದ ಎಚ್ಚರಿಕೆಯ ನಂತರ ಕಟ್ಟಡಗಳು ನಾಶವಾಗುವುದನ್ನು ತೋರಿಸಿವೆ. ಜೆರುಸಲೆಮ್‌ನಿಂದ ಜೋರಾಗಿ ಸ್ಫೋಟಗಳು ವರದಿಯಾಗಿವೆ.