ನಿಕರಗುವಾ ಆಸ್ಪತ್ರೆ 
ವಿದೇಶ

Nicaragua: 'ಡಂಕಿ' ಮಾರ್ಗದಲ್ಲಿ ಅಮೆರಿಕ ತೆರಳಿದ್ದ ಭಾರತೀಯ ವ್ಯಕ್ತಿ ಸಾವು!

ಮಧುಮೇಹದಿಂದ ಬಳಲುತ್ತಿದ್ದ ಯುವಕನಿಗೆ ಅಗತ್ಯ ಔಷಧೋಪಚಾರ ಸಿಗದೆ ಕೋಮಾ ಸ್ಥಿತಿಗೆ ತಲುಪಿದ್ದ. ಆತನನ್ನು ಪತ್ನಿ ನಿಕರಾಗುವಾದಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು.

ನವದೆಹಲಿ: ತನ್ನ ಕುಟುಂಬ ಸಮೇತ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದ ಭಾರತ ಮೂಲದ ವ್ಯಕ್ತಿ ಅಮೆರಿಕದ ನಿಕರಾಗುವಾದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್ ರಾಜ್ಯದ ಸಬರಕಾಂತ ಜಿಲ್ಲೆಯ ಪ್ರಂತಿಜ್‌ನ ಮೊಯಾದ್ ಗ್ರಾಮದ ನಿವಾಸಿಯಾಗಿರುವ ಆ ವ್ಯಕ್ತಿ ಏಜೆಂಟರೊಬ್ಬರ ಸಹಾಯದಿಂದ ಅಕ್ರಮ ಮಾರ್ಗದ ಮೂಲಕ ಅಮೆರಿಕ ಪ್ರವೇಶಿಸಲು ಯತ್ನಿಸುತ್ತಿದ್ದರು. ಒಂದೂವರೆ ತಿಂಗಳ ಸುದೀರ್ಘ ಪ್ರಯಾಣದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.

ಮೂಲಗಳ ಪ್ರಕಾರ ಮಧುಮೇಹದಿಂದ ಬಳಲುತ್ತಿದ್ದ ಯುವಕನಿಗೆ ಅಗತ್ಯ ಔಷಧೋಪಚಾರ ಸಿಗದೆ ಕೋಮಾ ಸ್ಥಿತಿಗೆ ತಲುಪಿದ್ದ. ಆತನನ್ನು ಪತ್ನಿ ನಿಕರಾಗುವಾದಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದೀಗ ಸಂತ್ರಸ್ಥನ ಪತ್ನಿ ಮತ್ತು ಮಗು ನಿಕರಾಗುವಾದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಏತನ್ಮಧ್ಯೆ, ಅಧಿಕಾರಿಗಳು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದು, ಅಕ್ರಮ ವಲಸೆಗೆ ಸಹಾಯ ಮಾಡಿದ ಏಜೆಂಟರನ್ನು ತನಿಖೆ ಮಾಡುವ ಸಾಧ್ಯತೆಯಿದೆ.

ಸಬರಕಾಂತ ಎಸ್ಪಿ ವಿಜಯ್ ಪಟೇಲ್ ಅವರು ಮಾತನಾಡಿ, 'ನಮಗೆ ಯಾವುದೇ ಸಂವಹನ ಅಥವಾ ದೂರು ಬಂದಿಲ್ಲ. ಮಾಧ್ಯಮಗಳ ಮೂಲಕವೇ ನಮಗೆ ಈ ವಿಷಯ ತಿಳಿಯಿತು. ಇಂತಹ ಘಟನೆ ಇದೇ ಮೊದಲಲ್ಲ. 2022 ರಲ್ಲಿ, ಗಾಂಧಿನಗರ ಜಿಲ್ಲೆಯ ದಿಂಗುಚಾ ಗ್ರಾಮದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಕೆನಡಾ-ಯುಎಸ್ ಗಡಿಯಲ್ಲಿ ಅಕ್ರಮವಾಗಿ ಅಮೆರಿಕ ತಲುಪಲು ಪ್ರಯತ್ನಿಸುತ್ತಿರುವಾಗ ತೀವ್ರ ಚಳಿಯಿಂದ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದರು. ಅದೇ ವರ್ಷದಲ್ಲಿ, ಬ್ರಿಜ್‌ಕುಮಾರ್ ಯಾದವ್, 36, ಟ್ರಂಪ್ ವಾಲ್ ಎಂದೂ ಕರೆಯಲ್ಪಡುವ ಮೆಕ್ಸಿಕೊ-ಯುಎಸ್ ಗಡಿಯಲ್ಲಿರುವ 30-ಮೀ ಲೋಹದ ಗೋಡೆಯನ್ನು ಹತ್ತುವಾಗ ಕೆಳಗೆ ಬಿದ್ದು ಸಾವನ್ನಪ್ಪಿದ್ದರು' ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT