ಕೇಪ್ ಕೆನವೆರಲ್(ಫ್ಲೋರಿಡಾ): ನಾಸಾದಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕಳುಹಿಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಬೇಕಿದ್ದ ಸ್ಪೇಸ್ ಎಕ್ಸ್ ಉಡಾವಣಾ ಪ್ಯಾಡ್ ಸಮಸ್ಯೆಯಿಂದಾಗಿ ಹಾರಾಟ ವಿಳಂಬವಾಗಿದೆ.
ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಬೇಕಾದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಗಗನಯಾತ್ರಿಗಳು ಹೋಗಬೇಕಾಗಿದೆ.
ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ ರಾಕೆಟ್‌ನ ಯೋಜಿತ ಉಡಾವಣೆ ನಿನ್ನೆ ಸಂಜೆ ನಿಗದಿಯಾಗಿತ್ತು. ಆದರೆ ಅದಕ್ಕೆ ನಾಲ್ಕು ಗಂಟೆ ಮೊದಲು ನಿರ್ಣಾಯಕ ಹೈಡ್ರಾಲಿಕ್ ವ್ಯವಸ್ಥೆಯ ಸಮಸ್ಯೆ ಉಂಟಾಯಿತು. ಉಡಾವಣೆಗೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ, ಎಂಜಿನಿಯರ್‌ಗಳು ರಾಕೆಟ್ ನ್ನು ಅದರ ಬೆಂಬಲ ರಚನೆಗೆ ಜೋಡಿಸುವ ಎರಡು ಕೈಗಳಲ್ಲಿ ಒಂದನ್ನು ಬಿಡುಗಡೆ ಮಾಡಲು ಬಳಸುವ ಹೈಡ್ರಾಲಿಕ್‌ಗಳನ್ನು ಮೌಲ್ಯಮಾಪನ ಮಾಡಿದರು. ಈ ರಚನೆಯು ಉಡಾವಣೆಗೆ ಮೊದಲು ಬಲಕ್ಕೆ ಓರೆಯಾಗಬೇಕಾಗುತ್ತದೆ.
ಅದಾಗಲೇ ತಮ್ಮ ಕೋಶಕಕ್ಕೆ ನಿಗದಿಯಾಗಿದ್ದ ನಾಲ್ವರು ಗಗನಯಾತ್ರಿಗಳು ಎಂಜಿನಿಯರ್ ಗಳ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದರು, ಹಾರಾಟ ಕೌಂಟ್ ಡೌನ್ ಗೆ ಒಂದು ಗಂಟೆಗಿಂತ ಕಡಿಮೆ ಸಮಯ ಉಳಿದಿದ್ದಾಗ ಕೆಳಗೆ ಬಂದಿತು. ಸ್ಪೇಸ್‌ಎಕ್ಸ್ ದಿನದ ಮಟ್ಟಿಗೆ ರದ್ದುಗೊಂಡಿತು. ಹೊಸ ಉಡಾವಣಾ ದಿನಾಂಕವನ್ನು ತಕ್ಷಣ ಘೋಷಿಸಲಿಲ್ಲ, ಆದರೆ ಮುಂದಿನ ಪ್ರಯತ್ನ ಇಂದು ಗುರುವಾರ ರಾತ್ರಿಯ ಮೊದಲು ಆಗಬಹುದು ಎಂದಿದ್ದಾರೆ.
ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ನಂತರ, ಜೂನ್‌ನಿಂದ ಅಲ್ಲೇ ಇರುವ ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಅಮೆರಿಕ, ಜಪಾನ್ ಮತ್ತು ರಷ್ಯಾದ ಸಿಬ್ಬಂದಿ ಬದಲಾಯಿಸಲಿದ್ದಾರೆ. ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್ ಸಾಗಣೆಯಲ್ಲಿ ಪ್ರಮುಖ ವೈಫಲ್ಯಗಳನ್ನು ಎದುರಿಸಿದ ನಂತರ ಈ ಇಬ್ಬರು ಪರೀಕ್ಷಾ ಪೈಲಟ್‌ಗಳು ದೀರ್ಘಾವಧಿಯ ವಾಸ್ತವ್ಯಕ್ಕಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಥಳಾಂತರಗೊಳ್ಳಬೇಕಾಯಿತು.
ಸ್ಟಾರ್‌ಲೈನರ್‌ನ ಚೊಚ್ಚಲ ಸಿಬ್ಬಂದಿ ಹಾರಾಟವು ಕೇವಲ ಒಂದು ವಾರದಲ್ಲಿ ಮುಗಿಯಬೇಕಿತ್ತು, ಆದರೆ ಕ್ಯಾಪ್ಸುಲ್ ನ್ನು ಖಾಲಿಯಾಗಿ ಹಿಂತಿರುಗಿಸಲು ಆದೇಶಿಸಿ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಅವರನ್ನು ಹಿಂತಿರುಗುವ ಹಂತಕ್ಕಾಗಿ ಸ್ಪೇಸ್‌ಎಕ್ಸ್‌ಗೆ ವರ್ಗಾಯಿಸಿತು.