ಸರಿತಾ ರಾಮರಾಜು 
ವಿದೇಶ

ಡಿಸ್ನಿಲ್ಯಾಂಡ್ ಪ್ರವಾಸಕ್ಕೆ ಕರೆದೊಯ್ದು 11 ವರ್ಷದ ಮಗನ ಕತ್ತು ಸೀಳಿ ಕೊಲೆ ಮಾಡಿದ ಭಾರತ ಮೂಲದ ಮಹಿಳೆ

ಸರಿತಾ ರಾಮರಾಜು ಅವರು 2018ರಲ್ಲಿ ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಮಗು ತಂದೆಯ ಕಸ್ಟಡಿಯಲ್ಲಿ ಇತ್ತು.

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತ ಮೂಲದ ಮಹಿಳೆಯೊಬ್ಬರು ತಮ್ಮ 11 ವರ್ಷದ ಮಗನನ್ನು ನಿರ್ದಯವಾಗಿ ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ.

48 ವರ್ಷದ ಸರಿತಾ ರಾಮರಾಜು ಎಂಬವರು ತಮ್ಮ ಮಗನನ್ನು ಡಿಸ್ನಿಲ್ಯಾಂಡ್‌ಗೆ ಮೂರು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ, ಅಲ್ಲಿಯೇ ಹೋಟೆಲ್‌ನಲ್ಲಿ ಮಗನ ಕತ್ತು ಸೀಳಿ ಕೊಲೆ ಮಾಡಿರುವುದು ಪೋಲಿಸರಿಗೆ ತಿಳಿದುಬಂದಿದೆ. ಮಗನನ್ನು ಕೊಂದ ನಂತರ, ತಾನೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಮಗನನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಸರಿತಾ ರಾಮರಾಜು ಅವರು 2018ರಲ್ಲಿ ತಮ್ಮ ಪತಿಯೊಂದಿಗೆ ವಿಚ್ಛೇದನ ಪಡೆದಿದ್ದರು. ಮಗು ತಂದೆಯ ಕಸ್ಟಡಿಯಲ್ಲಿ ಇತ್ತು. ಕೆಲ ದಿನಗಳ ಹಿಂದೆ ಮಗನನ್ನು ಭೇಟಿಯಾಗಿ ಕೆಲವು ದಿನಗಳ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ, ತಾಯಿ ಮಗನೊಂದಿಗೆ ಹೊರಟಿದ್ದರು.

ಡಿಸ್ನಿಲ್ಯಾಂಡ್‌ಗೆ ತಾವು ಮೂರು ದಿನಗಳ ಪಾಸ್ ಖರೀದಿಸಿದ್ದಾಗಿ ಪತ್ತೆಯಾಗಿದೆ. ಮಗು ಕೂಡ ತಾಯಿಯ ಜತೆ ಖುಷಿಯಿಂದ ಪ್ರವಾಸಕ್ಕೆ ತೆರಳಿದ್ದ. ಸ್ಯಾಂಟಾ ಅನಾ ಎಂಬ ಸ್ಥಳದ ಹೋಟೆಲ್‌ನಲ್ಲಿ ತಂಗಿದ್ದರು. ಮಾರ್ಚ್ 19ರಂದು ಹಿಂದಿರುಗಬೇಕಾಗಿತ್ತು. ಮಗನನ್ನು ತಂದೆ ಕಸ್ಟಡಿಗೆ ನೀಡಬೇಕಾಗಿತ್ತು. ಆದರೆ, ಅದಕ್ಕೂ ಮುನ್ನ ಈ ದುರ್ಘಟನೆ ನಡೆದಿದೆ.

ಅತ್ಯಂತ ವಿಚಿತ್ರವೆಂದರೆ, ಮಗನನ್ನು ಕೊಂದ ನಂತರ ತಾನೇ ಪೊಲೀಸರಿಗೆ ಕರೆಮಾಡಿ ವಿಷಯವನ್ನು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಗನನ್ನು ಕೊಲ್ಲಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ತನಿಖೆ ಮುಂದುವರಿದಿದೆ.

ಭಾರತದ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ ಎಂದು ಪ್ರಕಾಶ್ ರಾಜು ಹೇಳಿದ್ದರು ಎಂದು NBC ವರದಿ ಹೇಳಿದ್ದು, ದಂಪತಿಗಳು ಜನವರಿ 2018 ರಲ್ಲಿ ವಿಚ್ಛೇದನ ಪಡೆದಿದ್ದಾರೆ, ರಾಜು ಅವರಿಗೆ ಮಗನ ಕಸ್ಟಡಿಯನ್ನು ನೀಡಲಾಯಿತು. ನ್ಯಾಯಾಲಯದ ದಾಖಲೆಗಳ ಪ್ರಕಾರ ಸರಿತಾ ರಾಮರಾಜು ಭೇಟಿ ಮಾಡುವ ಹಕ್ಕುಗಳನ್ನು ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel