ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ ಓವಲ್ ಕಚೇರಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸ್ತಲಾಘವ ಮಾಡುತ್ತಿದ್ದಾರೆ. 
ವಿದೇಶ

ಮೋದಿ ಬಹಳ ಬುದ್ಧಿವಂತ ವ್ಯಕ್ತಿ, ವ್ಯಾಪಾರ ಮಾತುಕತೆ ಸುಗಮವಾಗಿ ಸಾಗುತ್ತದೆ ಎಂಬ ವಿಶ್ವಾಸ ಇದೆ: ಡೊನಾಲ್ಡ್ ಟ್ರಂಪ್

ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಸುಂಕಗಳ ಮೇಲೆ ಟ್ರಂಪ್ ಅವರು ನೀಡುತ್ತಿರುವ ಹೇಳಿಕೆಗಳಿಂದಾಗಿ ಈ ಮಾತುಗಳು ಮಹತ್ವ ಪಡೆದಿವೆ.

ನ್ಯೂಯಾರ್ಕ್: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿ ಹಾಗೂ ನನ್ನ ಉತ್ತಮ ಸ್ನೇಹಿತ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಸುಂಕ ವಿಧಿಸುವ ವಿಚಾರದಲ್ಲಿ ಭಾರತ ಮತ್ತು ನಮ್ಮ ದೇಶದ ನಡುವೆ ಮಾತುಕತೆಗಳು ಉತ್ತಮವಾಗಿ ಸಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಇತರ ದೇಶಗಳು ಅಮೆರಿಕದ ಸರಕುಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಸುಂಕಗಳ ಮೇಲೆ ಟ್ರಂಪ್ ಅವರು ನೀಡುತ್ತಿರುವ ಹೇಳಿಕೆಗಳಿಂದಾಗಿ ಈ ಮಾತುಗಳು ಮಹತ್ವ ಪಡೆದಿವೆ. ಪ್ರಧಾನಿ ಮೋದಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದರು, ನಾವು ಯಾವಾಗಲೂ ಉತ್ತಮ ಸ್ನೇಹಿತರಾಗಿದ್ದೇವೆ ಎಂದು ನಿನ್ನೆ ಶ್ವೇತಭವನದಲ್ಲಿ ಟ್ರಂಪ್ ಹೇಳಿದ್ದಾರೆ.

ಭಾರತವು ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಇದು ಕ್ರೂರ ಕ್ರಮ. ಪ್ರಧಾನಿ ಮೋದಿಯವರು ತುಂಬಾ ಬುದ್ಧಿವಂತರು. ಹಾಗೆಯೇ ನನ್ನ ಉತ್ತಮ ಸ್ನೇಹಿತನೂ ಹೌದು. ನಮ್ಮ ಮಾತುಕತೆ ಸುಗಮವಾಗಿ ಸಾಗುತ್ತಿದೆ. ಭಾರತ ಮತ್ತು ನಮ್ಮ ದೇಶದ ನಡುವೆ ಇದು ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

ಮೋದಿಯವರು ಒಬ್ಬ ಉತ್ತಮ ಪ್ರಧಾನಿ. ಕಳೆದ ಫೆಬ್ರವರಿಯಲ್ಲಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡಿದ್ದ ವೇಳೆ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದ್ದರು. ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಒಂದು ತಿಂಗಳಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು.

ಭಾರತವು ಅತಿ ಹೆಚ್ಚು ಸುಂಕ ಹೊಂದಿರುವ ರಾಷ್ಟ್ರ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಅಮೆರಿಕದ ಸರಕುಗಳ ಮೇಲೆ ಸುಂಕ ವಿಧಿಸುವ ದೇಶಗಳ ಮೇಲೆ ಸುಂಕ ವಿಧಿಸುವ ಕ್ರಮ ಏಪ್ರಿಲ್ 2 ರಿಂದ ಪ್ರಾರಂಭವಾಗುತ್ತವೆ ಎಂದು ಪುನರುಚ್ಚರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬೆದರಿಕೆ ನಡುವೆ 'ಆರ್ ಎಸ್ ಎಸ್' ಕುರಿತು ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ! ಇದರಲ್ಲಿ ಏನಿದೆ?

ಮುಳುಗುತ್ತಿದೆ ದೊಡ್ಡಣ್ಣನ ಸಾಮ್ರಾಜ್ಯ! (ಹಣಕ್ಲಾಸು)

ಮಕ್ಕಳ ಜೀವ ತೆಗೆದ ಕೆಮ್ಮಿನ ಸಿರಪ್ ಬಳಿಕ ಭೀತಿ ಹುಟ್ಟಿಸುತ್ತಿವೆ 'ಆ್ಯಂಟಿಬಯಾಟಿಕ್'ಗಳು

India vs Australia ODI Series: ವಿರಾಟ್, ರೋಹಿತ್ ಶರ್ಮಾ ನಿವೃತ್ತಿ? ಸುಳಿವು ನೀಡಿದ ರವಿಶಾಸ್ತ್ರಿ!

ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ: Donald Trump

SCROLL FOR NEXT