ಪುಟಿನ್ ಕಾರು ಸ್ಫೋಟ 
ವಿದೇಶ

ರಷ್ಯಾ ಅಧ್ಯಕ್ಷರ ಕಾರು ಸ್ಫೋಟ: ವ್ಲಾಡಿಮಿರ್ ಪುಟಿನ್ ಹತ್ಯೆಗೆ ಸ್ಕೆಚ್? Video

ಲುಬಿಯಾಂಕದಲ್ಲಿರುವ ಮಾಸ್ಕೋದ ಎಫ್ ಎಸ್ ಬಿ ರಹಸ್ಯ ಸೇವೆಯ ಪ್ರಧಾನ ಕಚೇರಿ ಬಳಿ ಮಾರ್ಚ್ 29 ರಂದು ರಷ್ಯಾ ಅಧ್ಯಕ್ಷರ ಕಾರು ಸ್ಫೋಟ ಸಂಭವಿಸಿದೆ.

ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಾರು' ಔರಸ್ ಸೆನಾಟ್ ಲಿಮೋಸಿನ್ ಸ್ಫೋಟಗೊಂಡು ಬೆಂಕಿಗಾಹುತಿಯಾಗಿದೆ. ಈ ಸ್ಫೋಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪುಟಿನ್ ಹತ್ಯೆ ಯತ್ನವೇ ಎಂಬ ಸಂಶಯ ಮೂಡಿಸಿದೆ.

ಯುರೋ ವೀಕ್ಲಿ ಪ್ರಕಾರ, ಲುಬಿಯಾಂಕದಲ್ಲಿರುವ ಮಾಸ್ಕೋದ ಎಫ್ ಎಸ್ ಬಿ ರಹಸ್ಯ ಸೇವೆಯ ಪ್ರಧಾನ ಕಚೇರಿ ಬಳಿ ಮಾರ್ಚ್ 29 ರಂದು ರಷ್ಯಾ ಅಧ್ಯಕ್ಷರ ಕಾರು ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಘಟನೆಯಲ್ಲಿ ಯಾವುದೇ ಗಾಯಗಳು ಅಥವಾ ಸಾವುಗಳ ಕುರಿತ ವರದಿಯಾಗಿಲ್ಲ. ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಕೊನೆಗೊಳಿಸಲು ಬೆಂಬಲಿಸಿ ಅಮೆರಿಕ ಜೊತೆಗೆ ಮಾತುಕತೆ ನಡೆಸುತ್ತಿರುವಂತೆಯೇ ಕಾರು ಸ್ಫೋಟ ಘಟನೆ ರಷ್ಯಾದ ಅಧ್ಯಕ್ಷರ ಹತ್ಯೆಯ ಯತ್ನದ ವದಂತಿಗಳಿಗೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ವೈರಲ್ ವೀಡಿಯೊದಲ್ಲಿ ಘಟನೆ ನಡೆದ ಸ್ಥಳದಲ್ಲಿದ್ದ ಸಂಸ್ಥೆಗಳ ಕಾರ್ಮಿಕರು ಬೆಂಕಿಯನ್ನು ನಂದಿಸಲು ಸಹಾಯ ಮಾಡುತ್ತಿರುವುದನ್ನು ಕಾಣಬಹುದು. ಬೆಂಕಿ ಕಾರಿನ ಇಂಜಿನ್ ಬೇ ಪ್ರದೇಶದಿಂದ ಪ್ರಾರಂಭವಾಗಿ ಅದರ ಒಳಭಾಗಕ್ಕೆ ವ್ಯಾಪಿಸಿದೆ ಎನ್ನಲಾಗಿದೆ. ವಾಹನದಿಂದ ದಟ್ಟವಾದ ಹೊಗೆ ಬರುತ್ತಿರುವುದು ಕಂಡುಬಂದಿದೆ.

ಘಟನೆಯಲ್ಲಿ ಕಾರಿನ ಮುಂಭಾಗದ ಭಾಗವೂ ಹಾನಿಗೊಳಗಾಗಿದೆ. ಆದರೆ ಘಟನೆ ವೇಳೆ ಕಾರಿನಲ್ಲಿ ಯಾರಿದ್ದರು ಎಂಬುದು ಸ್ಪಷ್ಟವಾಗಿಲ್ಲ, ಏಕೆಂದರೆ ಯಾವುದೇ ಗಾಯಗಳು ವರದಿಯಾಗಿಲ್ಲ ಎಂದು ದಿ ಸನ್ ವರದಿ ಮಾಡಿದೆ. ಕಾರಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಕಾರು ಹೊತ್ತಿ ಉರಿದಿದೆ ಎಂದು ಯುರೋವೀಕ್ಲಿ ವರದಿ ಮಾಡಿದೆ.

ಉಕ್ರೇನ್ ಜೊತೆಗೆ ಸಂಭಾವ್ಯ ಮಾತುಕತೆ ಹಿನ್ನೆಲೆಯಲ್ಲಿ ತನ್ನ ಸಂಧಾನದ ಸ್ಥಾನವನ್ನು ಬಲಪಡಿಸಲು 1,000-ಕಿಲೋಮೀಟರ್ ವ್ಯಾಪ್ತಿಯಲ್ಲಿ ಹೊಸ ಆಕ್ರಮಣವನ್ನು ರಷ್ಯಾ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಉಕ್ರೇನಿಯನ್ ಸರ್ಕಾರ ಮತ್ತು ಮಿಲಿಟರಿ ವಿಶ್ಲೇಷಕರು ಸುದ್ದಿಸಂಸ್ಥೆ AP ಯೊಂದಿಗೆ ಮಾತನಾಡಿದ್ದಾರೆ. ಈಶಾನ್ಯ ಪ್ರದೇಶಗಳಲ್ಲಿ ರಷ್ಯಾ ಹೊಸ ಆಕ್ರಮಣಗಳಿಗೆ ಸಿದ್ಧವಾಗುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ಹೇಳಿದ್ದರು.

ಮೂರು ವರ್ಷಗಳ ತೀವ್ರ ಹೋರಾಟದ ನಂತರ ಕದನ ವಿರಾಮಕ್ಕೆ ಒಪ್ಪಿಗೆ ನೀಡುವಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವೊಲಿಸಲು ಪ್ರಯತ್ನಿಸುತ್ತಿದ್ದರೂ ಎರಡೂ ಕಡೆಯವರು ತಮ್ಮ ವೈಮಾನಿಕ ದಾಳಿಯನ್ನು ಹೆಚ್ಚಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಇಂಧನ ಸೌಲಭ್ಯಗಳ ಮೇಲಿನ ದಾಳಿ ಮುಷ್ಕರ ಮಾಡದಿರುವ ಬದ್ಧತೆಯನ್ನು ಉಲ್ಲಂಘಿಸಲಾಗಿದೆ ಎಂದು ಎಂದು ಪರಸ್ಪರ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT