ಟ್ರಂಪ್ ಮತ್ತು ಕ್ಸಿ ಜಿನ್ ಪಿಂಗ್ 
ವಿದೇಶ

Tariff War: ಉದ್ವಿಗ್ನತೆ ಶಮನಕ್ಕೆ US-China ಮುಂದು; ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ!

ಉಭಯ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಹೆಚ್ಚು ಶಾಶ್ವತವಾದ ಒಪ್ಪಂದದತ್ತ ಕೆಲಸ ಮಾಡಲು ಹೆಚ್ಚುವರಿ ಮೂರು ತಿಂಗಳುಗಳನ್ನು ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.

ಚೆನ್ನೈ: ತೆರಿಗೆ ವಿಚಾರವಾಗಿ ಸಂಘರ್ಷ ನಡೆಸಿದ್ದ ಚೀನಾ ಮತ್ತು ಅಮೆರಿಕ ದೇಶಗಳು ಕೊನೆಗೂ ಪಟ್ಟು ಸಡಿಲಿಸಿದ್ದು, ಉದ್ವಿಗ್ನತೆ ಶಮನಕ್ಕಾಗಿ ಸುಂಕ ಕಡಿತಕ್ಕೆ ಪರಸ್ಪರ ಒಪ್ಪಿಗೆ ಸೂಚಿಸಿವೆ.

ಇತ್ತೀಚಿನ ಅಮೆರಿಕ-ಚೀನಾ ವ್ಯಾಪಾರ ಮಾತುಕತೆಗಳಿಂದ ಹೆಚ್ಚಿನ ವಿವರಗಳು ಹೊರಬರುತ್ತಿದ್ದಂತೆ, ಎರಡೂ ದೇಶಗಳು ಪರಸ್ಪರ ಸರಕುಗಳ ಮೇಲಿನ ಸುಂಕವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ತಾತ್ವಿಕವಾಗಿ ಒಪ್ಪಿಕೊಂಡಿವೆ ಎಂದು ಜಿನೀವಾದಲ್ಲಿ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಉಭಯ ದೇಶಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳಿಗೆ ಹೆಚ್ಚು ಶಾಶ್ವತವಾದ ಒಪ್ಪಂದದತ್ತ ಕೆಲಸ ಮಾಡಲು ಹೆಚ್ಚುವರಿ ಮೂರು ತಿಂಗಳುಗಳನ್ನು ನೀಡುವ ಉದ್ದೇಶವನ್ನು ಈ ಕ್ರಮ ಹೊಂದಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಪ್ರಸ್ತಾವಿತ ಒಪ್ಪಂದದ ಅಡಿಯಲ್ಲಿ, ಅಮೆರಿಕವು ಮೇ 14 ರ ವೇಳೆಗೆ ಹೆಚ್ಚಿನ ಚೀನಾದ ಆಮದುಗಳ ಮೇಲಿನ ತನ್ನ ಸುಂಕವನ್ನು ಶೇ.145%ರಿಂದ 30% ಕ್ಕೆ ಇಳಿಸಲು ಮುಂದಾಗಿದೆ. ಇದರಲ್ಲಿ ಫೆಂಟನಿಲ್‌ಗೆ ಸಂಬಂಧಿಸಿದ ಸುಂಕಗಳು ಸೇರಿವೆ.

ಪ್ರತಿಯಾಗಿ, ಚೀನಾ ಸೋಮವಾರ ನಡೆದ ಬ್ರೀಫಿಂಗ್‌ನಲ್ಲಿ ಹೇಳಿಕೆ ಮತ್ತು ಅಧಿಕಾರಿಗಳ ಪ್ರಕಾರ, ಅಮೆರಿಕ ಸರಕುಗಳ ಮೇಲಿನ ತನ್ನ ಶೇ.125% ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಹೇಳಿದೆ ಎಂದು ಹೇಳಲಾಗಿದೆ. ಉಭಯ ದೇಶಗಳ ನಡುವಿನ ಸುಂಕ ಕಡಿತವು ಈಗ ತಾತ್ಕಾಲಿಕವಾಗಿದೆ ಮತ್ತು ಕನಿಷ್ಠ ಮುಂದಿನ 90 ದಿನಗಳವರೆಗೆ ತಕ್ಷಣವೇ ಜಾರಿಯಲ್ಲಿರುತ್ತದೆ ಎಂದು ಅಮೆರಿಕ -ಚೀನಾ ಅಧಿಕಾರಿಗಳು ಹೇಳಿದ್ದಾರೆ.

ವಾರಾಂತ್ಯದಲ್ಲಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ವ್ಯಾಪಾರ ಮಾತುಕತೆಯ ಸಮಯದಲ್ಲಿ ಅಮೆರಿಕ ಮತ್ತು ಚೀನಾ ಎರಡೂ ಕಡೆಯವರು ಪ್ರಗತಿಯನ್ನು ವರದಿ ಮಾಡಿದ್ದಾರೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾತುಕತೆಗಳನ್ನು "ಉತ್ಪಾದಕ ಮತ್ತು ರಚನಾತ್ಮಕ" ಎಂದು ಬಣ್ಣಿಸಿದ್ದರು ಅಂತೆಯೇ ಚೀನಾದ ಉಪಾಧ್ಯಕ್ಷ ಹಿ ಲೈಫೆಂಗ್ ಅವುಗಳನ್ನು "ಆಳವಾದ" ಮತ್ತು "ಪ್ರಾಮಾಣಿಕ" ಎಂದು ಕರೆದಿದ್ದರು.

ಇದೇ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ಶ್ವೇತಭವನವು ತನ್ನ ಅಧಿಕೃತ ಹೇಳಿಕೆಯಲ್ಲಿ "ವ್ಯಾಪಾರ ಒಪ್ಪಂದ" ಎಂದು ಉಲ್ಲೇಖಿಸಿದೆ, ಆದರೂ ಅದು ಇನ್ನೂ ನಿರ್ದಿಷ್ಟ ವಿವರಗಳನ್ನು ಬಿಡುಗಡೆ ಮಾಡಿಲ್ಲ. ಸೋಮವಾರ ನಂತರ ಹೆಚ್ಚು ಸಮಗ್ರ ಜಂಟಿ ಹೇಳಿಕೆಯನ್ನು ನಿರೀಕ್ಷಿಸಲಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಚೀನಾದ ಆಮದುಗಳ ಮೇಲೆ ತೀವ್ರ ಸುಂಕಗಳನ್ನು ವಿಧಿಸಿದ ನಂತರ ಅಮೆರಿಕ ಮತ್ತು ಚೀನಾ ಅಧಿಕಾರಿಗಳ ನಡುವಿನ ಮೊದಲ ಮುಖಾಮುಖಿ ಸಭೆ ಇದಾಗಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸುಂಕ ಏರಿಕೆ ಘೋಷಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ ಸೇರಿದಂತೆ ಹಲವು ದೇಶಗಳೂ ಕೂಡ ಸುಂಕ ಏರಿಕೆ ಘೋಷಣೆ ಮಾಡಿದ್ದವು. ಇದು ಉಭಯ ದೇಶಗಳ ನಡುವೆ ವ್ಯಾಪಾರ ಉದ್ವಿಗ್ನತೆಗೆ ಕಾರಣವಾಗಿತ್ತು. ಉಭಯ ದೇಶಗಳ ಈ ನಡೆ ಅಮೆರಿಕೃಚೀನಾ ಮಾತ್ರವಲ್ಲದೇ ಜಾಗತಿಕ ಹಣಕಾಸು ಮಾರುಕಟ್ಟೆಗಳನ್ನು ಅಲುಗಾಡಿಸಿತ್ತು ಮತ್ತು ಸಂಭಾವ್ಯ ಜಾಗತಿಕ ಹಿಂಜರಿತದ ಭಯವನ್ನು ಹುಟ್ಟುಹಾಕಿತ್ತು. ಇದೀಗ ಅಮೆರಿಕ ಮತ್ತು ಚೀನಾ ಉದ್ವಿಗ್ನತೆಯನ್ನು ಶಾಂತಗೊಳಿಸಲು ಮುಂದಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT