ವಿದೇಶ

ನಾಚಿಕೆಗೇಡು: ಸೇನೆಗೆ ಪಾಕ್ ನೆಲವೇ ಸುರಕ್ಷಿತವಲ್ಲ; ರಾವಲ್ಪಿಂಡಿಯಿಂದ ದುಬೈಗೆ Pak ಸೇನಾ ಕಚೇರಿ ಸ್ಥಳಾಂತರ? ಇದು Operation Sindoor ತಾಕತ್ತು!

ಪಾಕಿಸ್ತಾನವು ತನ್ನ ಸೇನಾ ಪ್ರಧಾನ ಕಚೇರಿಯನ್ನು (GHQ) ರಾವಲ್ಪಿಂಡಿಯಿಂದ ದುಬೈಗೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ದೊಡ್ಡ ಸುದ್ದಿ ಬರುತ್ತಿದೆ.

ಭಾರತೀಯ ದಾಳಿಗಳು ನೂರ್ ಖಾನ್ ವಾಯುನೆಲೆಯ ಮೇಲೆ ಭಾರೀ ಹಾನಿಯನ್ನುಂಟುಮಾಡಿದ ಕೆಲವು ದಿನಗಳ ನಂತರ, ಪಾಕಿಸ್ತಾನವು ತನ್ನ ಸೇನಾ ಪ್ರಧಾನ ಕಚೇರಿಯನ್ನು (GHQ) ರಾವಲ್ಪಿಂಡಿಯಿಂದ ದುಬೈಗೆ ಸ್ಥಳಾಂತರಿಸುವ ಬಗ್ಗೆ ಯೋಚಿಸುತ್ತಿದೆ ಎಂದು ದೊಡ್ಡ ಸುದ್ದಿ ಬರುತ್ತಿದೆ. ದಿ ಫೌಕ್ಸಿ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಪಾಕಿಸ್ತಾನದ ಸಶಸ್ತ್ರ ಪಡೆಗಳ ವಕ್ತಾರರು, "ನಾವು ಭಾರತದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರತಿಬಂಧಿಸಲು ಪ್ರಯತ್ನಿಸಿದಾಗ ನಮ್ಮ ಪ್ರಮುಖ ಸ್ಥಳಗಳು ಬಹಿರಂಗಗೊಂಡಿವೆ. ಆದ್ದರಿಂದ ನಾವು ಪ್ರಮುಖ ಕೇಂದ್ರವನ್ನು ಬದಲಾಯಿಸುತ್ತಿದ್ದೇವೆ ಎಂದು ಹೇಳಿದರು. ಇನ್ನು ಪಾಕ್ ಮನವಿಯನ್ನು ದುಬೈ ತಿರಸ್ಕರಿಸುವ ಸಾಧ್ಯತೆ ಇದೆ ಎಂದು ದಿ ಫೌಕ್ಸಿ ಮೂಲಗಳು ತಿಳಿಸಿವೆ.

ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಿಂದ ಯಾವುದೇ ಹಾನಿಯೂ ಆಗಿಲ್ಲ ಎಂದು ಹೇಳುತ್ತಲೇ ಬಂದಿದ್ದ ಪಾಕಿಸ್ತಾನ ಇದೀಗ ಕೊನೆಗೂ ಸತ್ಯ ಬಾಯ್ಬಿಟ್ಟಿದೆ. ಮೇ 10 ರಂದು ಭಾರತದ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಸ್ಥಳಗಳನ್ನು ನಾಶಪಡಿಸಿದೆ ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ. ಮೇ 9 ಮತ್ತು 10ರ ನಡುವಿನ ರಾತ್ರಿ 2.30ಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಸ್ವತಃ ಕರೆ ಮಾಡಿ ಈ ಮಾಹಿತಿ ನೀಡಿದ್ದಾಗಿ ಷರೀಫ್ ಬಹಿರಂಗಪಡಿಸಿದ್ದಾರೆ.

ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತವು ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದ್ದು 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತು. ಮಿಲಿಟರಿ ಘರ್ಷಣೆಯ ಸಮಯದಲ್ಲಿ, ಪಾಕಿಸ್ತಾನ ಸೇನೆಯ 40 ಸೈನಿಕರು ಸಾವನ್ನಪ್ಪಿದರು. ಅದರ ಯುದ್ಧ ವಿಮಾನಗಳು ಸಹ ಹಾನಿಗೊಳಗಾದವು. ಭಾರತೀಯ ವಾಯುಪಡೆಯು ಪಾಕಿಸ್ತಾನದ ದಾಳಿಗೊಳಗಾದ ಸ್ಥಳಗಳಿಗೆ ಫೋಟೋಗಳನ್ನು ಬಹಿರಂಗಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)