ಹಂಟಿಂಗ್‌ಡನ್ ರೈಲು ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ. 
ವಿದೇಶ

ಬ್ರಿಟನ್ ರೈಲಿನಲ್ಲಿ ದುಷ್ಕರ್ಮಿಗಳಿಂದ ಸಾಮೂಹಿಕ ಇರಿತ: 9 ಜನರ ಸ್ಥಿತಿ ಗಂಭೀರ, ಇಬ್ಬರು ಶಂಕಿತರ ಬಂಧನ

ಚೂರಿ ಇರಿತದಿಂದ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಹಂಟಿಂಗ್ಟನ್: ಬ್ರಿಟನ್‌ನ ಕೇಂಬ್ರಿಡ್ಜ್‌ಶೈರ್‌ನ ರೈಲೊಂದರಲ್ಲಿ ಇಬ್ಬರು ದುಷ್ಕರ್ಮಿಗಳು ಹಲವು ಪ್ರಯಾಣಿಕರಿಗೆ ಚೂಕುವಿನಿಂದ ಇರಿದಿದ್ದು, ಘಟನೆ ಬೆನ್ನಲ್ಲೇ ಪೊಲೀಸರು ಇಬ್ಬರು ಶಂಕಿತರನ್ನು ಬಂಧನಕ್ಕೊಳಪಡಿಸಿದ್ದಾರೆ.

ಚೂರಿ ಇರಿತದಿಂದ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 9 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಬ್ರಿಟಿಷ್ ಸಾರಿಗೆ ಪೊಲೀಸರು ಈ ಘಟನೆಯನ್ನು ಎಕ್ಸ್ ನಲ್ಲಿ ದೃಢಪಡಿಸಿದ್ದು, ಹುಟಿಂಗ್ಡನ್‍ ಗೆ ತೆರಳುತ್ತಿದ್ದ ರೈಲಿನಲ್ಲಿ ನಡೆದ ಅವಘಡದಲ್ಲಿ ಹಲವು ಮಂದಿಗೆ ಇರಿದ ಘಟನೆಗೆ ಸಂಬಂಧಿಸಿದಂತೆ ತುರ್ತು ಸ್ಪಂದನೆ ನಡೆದಿದೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದೆ.

ರೈಲಿನಲ್ಲಿ ಹಲವರಿಗೆ ಇರಿತವಾಗಿದೆ ಎಂಬ ಕುರಿತು ಶನಿವಾರ ಸಂಜೆ 7:39ಕ್ಕೆ (ಸ್ಥಳೀಯ ಸಮಯ) ನಮಗೆ ಕರೆ ಬಂದಿತು.‘ಹಂಟಿಂಗ್‌ಡನ್‌ನಲ್ಲಿ ರೈಲನ್ನು ತಡೆದಾ ಇಬ್ಬರು ಪುರುಷರನ್ನು ಬಂಧಿಸಲಾಯಿತು. ಘಟನೆಯಲ್ಲಿ 10 ಜನರಿಗೆ ಗಾಯವಾಗಿದ್ದು, 9 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏತನ್ಮಧ್ಯೆ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಭಯಾನಕ ಘಟನೆಯನ್ನು ಖಂಡಿಸಿದ್ದು, ಜನರು ಪೊಲೀಸರ ಸಲಹೆಯನ್ನು ಪಾಲಿಸುವಂತೆ ಒತ್ತಾಯಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಗಾಯಾಳುಗಳ ನೆರವಿಗೆ ನಾವಿದ್ದೇವೆ. ಸಂತ್ರಸ್ತರಿಗೆ ಸ್ಪಂದಿಸಿದ ತುರ್ತು ಸೇವೆ ಅಧಿಕಾರಿಗಳಿಗೆ ಧನ್ಯವಾದ. ಆ ಪ್ರದೇಶ ಪ್ರತಿಯೊಬ್ಬರೂ ಪೊಲಿಸರ ಸಲಹೆ ಪಾಲಿಸಬೇಕು’ ಎಂದು ಹೇಳಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಇನ್ನೂ ದೃಢಪಟ್ಟಿಲ್ಲ ಹಾಗೂ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ, 5 ವರ್ಷ ನಾನೇ ಸಿಎಂ': ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಪುನರುಚ್ಛಾರ

ಸಂಸತ್ ಅಧಿವೇಶನಕ್ಕೆ ತೆರೆ: ಲೋಕಸಭೆ, ರಾಜ್ಯಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

G Ram G ಮಸೂದೆ 'ಗ್ರಾಮ ವಿರೋಧಿ'; ಮೋದಿ ಸರ್ಕಾರದಿಂದ 20 ವರ್ಷಗಳ MGNREGA ನಾಶ

Video: ಬುರ್ಜ್ ಖಲೀಫಾಗೆ ಬಡಿದ ಸಿಡಿಲು; ಅದ್ಭುತ ವಿಡಿಯೋ ಹಂಚಿಕೊಂಡ ದುಬೈ ಕ್ರೌನ್ ಪ್ರಿನ್ಸ್; ಸಿಕ್ಕಾಪಟ್ಟೆ ವೈರಲ್!

ಉತ್ತರ ಭಾರತದಾದ್ಯಂತ ಶೂನ್ಯ ಗೋಚರತೆ; ದೆಹಲಿಗೆ ರೆಡ್ ಅಲರ್ಟ್ ಘೋಷಿಸಿದ IMD

SCROLL FOR NEXT