ಸಿರಿಯಾ ಅಧ್ಯಕ್ಷ ಅಲ್-ಶರಾ ಮತ್ತು ಡೊನಾಲ್ಡ್ ಟ್ರಂಪ್ 
ವಿದೇಶ

'ಎಷ್ಟು ಪತ್ನಿಯರು?' ಶ್ವೇತಭವನದಲ್ಲಿ ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಕಾಲೆಳೆದ ಡೊನಾಲ್ಡ್ ಟ್ರಂಪ್!

ಸುಂಗಧ ದ್ರವ್ಯವನ್ನು ಅಲ್-ಶರಾ ಮತ್ತು ಅವರ ಸಿಬ್ಬಂದಿ ಮೇಲೆ ಸ್ಪ್ರೇ ಮಾಡಿದ ನಂತರ ಟ್ರಂಪ್‌, ಇದು ನಿಮ್ಮ ಪತ್ನಿಗೆ ನೀಡುತ್ತಿದ್ದೇನೆ. ನಿಮಗೆ ಎಷ್ಟು ನಿಮಗೆ ಎಷ್ಟು ಪತ್ನಿಯರು ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿದರು.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸಿರಿಯನ್ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರ ಬಳಿ ನಿಮಗೆ ಎಷ್ಟು ಪತ್ನಿಯರು ಎಂದು ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶ್ವೇತಭವನದಲ್ಲಿ ಸಿರಿಯಾ ಅಧ್ಯಕ್ಷ ಅಹ್ಮದ್ ಅಲ್-ಶರಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಿರಿಯಾ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಂಬಂಧಗಳು, ಅವುಗಳನ್ನು ಅಭಿವೃದ್ಧಿಗೊಳಿಸಿ ಬಲಪಡಿಸುವ ಮಾರ್ಗಗಳು ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.

ಸುಂಗಧ ದ್ರವ್ಯವನ್ನು ಅಲ್-ಶರಾ ಮತ್ತು ಅವರ ಸಿಬ್ಬಂದಿ ಮೇಲೆ ಸ್ಪ್ರೇ ಮಾಡಿದ ನಂತರ ಟ್ರಂಪ್‌, ಇದು ನಿಮ್ಮ ಪತ್ನಿಗೆ ನೀಡುತ್ತಿದ್ದೇನೆ. ನಿಮಗೆ ಎಷ್ಟು ನಿಮಗೆ ಎಷ್ಟು ಪತ್ನಿಯರು ಎಂದು ಲಘು ದಾಟಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಅಲ್-ಶರಾ ಒಬ್ಬಳು ಎಂದು ಉತ್ತರ ನೀಡಿ ನಕ್ಕಿದ್ದಾರೆ.

ಸಿರಿಯಾ ಮೇಲಿನ ನಿರ್ಬಂಧವನ್ನು 6 ತಿಂಗಳು ಅಮಾನತುಗೊಳಿಸುವುದಾಗಿ ಅಮೆರಿಕದ ಖಜಾನೆ ಇಲಾಖೆ ಘೋಷಿಸಿದ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ. 1946ರಲ್ಲಿ ಸ್ವಾತಂತ್ರ್ಯ ಪಡೆದ ಬಳಿಕ ಸಿರಿಯಾದ ನಾಯಕರೊಬ್ಬರು ಅಮೆರಿಕಕ್ಕೆ ನೀಡಿರುವ ಮೊದಲ ಭೇಟಿ ಇದಾಗಿದ್ದು ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ನಾಟಕೀಯ ಬದಲಾವಣೆಯನ್ನು ಸೂಚಿಸುತ್ತದೆ.

1946 ರಲ್ಲಿ ಫ್ರಾನ್ಸ್‌ನಿಂದ ಸಿರಿಯಾ ಸ್ವಾತಂತ್ರ್ಯ ಪಡೆದ ನಂತರ ಸಿರಿಯಾ ನಾಯಕರೊಬ್ಬರು ಶ್ವೇತಭವನಕ್ಕೆ ಮಾಡಿದ ಮೊದಲ ಅಧಿಕೃತ ಭೇಟಿಯಾಗಿತ್ತು. ಈ ಹಿಂದೆ ಅಲ್‌ ಶರಾ ಅವರನ್ನು ಉಗ್ರ ಎಂದು ಅಮೆರಿಕ ಕರೆದಿತ್ತು. ಅಷ್ಟೇ ಅಲ್ಲದೇ ಅಲ್‌ ಶರಾ ತಲೆಗೆ 10 ಮಿಲಿಯನ್‌ ಡಾಲರ್‌ ಬಹುಮಾನ ಸಹ ಘೋಷಿಸಿತ್ತು. ಅಲ್-ಖೈದಾ ಜೊತೆ ಸಂಬಂಧ ಹೊಂದಿರುವ ಸಿರಿಯನ್ ಭಯೋತ್ಪಾದಕ ಗುಂಪಿನ ನಾಯಕ ಎಂದು ಅಮೆರಿಕ ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್