ಜೋಹಾನ್ಸ್ ಬರ್ಗ್: ಜಿ-20 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜೊತೆಗಿನ ಆತ್ಮೀಯತೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಉಭಯ ನಾಯಕರು ನಗುತ್ತಾ, ಶೇಕ್ ಹ್ಯಾಂಡ್ ಮಾಡಿದ್ದು, ಪರಸ್ಪರ ಉಭಯ ಕುಶಲೋಪರಿ ವಿಚಾರಿಸುತ್ತಿರುವುದು ವಿಡಿಯೋದಲ್ಲಿದೆ.
ಇತ್ತೀಚಿಗೆ ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯಾಗಿದ್ದರು. ಮೆಲೋನಿಯವರು ಮೋದಿಯವರನ್ನು ನೀವು ಅತ್ಯುತ್ತಮರು ಎಂದು ಹೊಗಳಿದ್ದು, ಅದಕ್ಕೆ ಮೋದಿ ನಗುತ್ತಾ ಪ್ರತಿಕ್ರಿಯಿಸಿರುವ ವಿಡಿಯೋ ಮೆಲೋಡಿ ಮೂಮೆಂಟ್ಸ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದಕ್ಕೂ ಮುನ್ನ ನಡೆದ ಇಬ್ಬರು ಪ್ರಧಾನಿಗಳ ಭೇಟಿಯೂ ಎಲ್ಲರ ಗಮನ ಸೆಳೆದಿತ್ತು.
ಮೆಲೋನಿ ಭೇಟಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಭ್ರಜಿಲ್ ಅಧ್ಯಕ್ಷ ಸಿಲ್ವಾ ಸೇರಿದಂತೆ ವಿಶ್ವದ ಅನೇಕ ನಾಯಕರನ್ನು ತಬ್ಬಿಕೊಳ್ಳುವುದರೊಂದಿಗೆ ಪರಸ್ಪರ ಶುಭ ಕೋರಿದ್ದಾರೆ.