ಇಂಡೋನೇಷ್ಯಾದ ಪೂರ್ವ ಜಾವಾದ ಸಿಡೋರ್ಜೊದಲ್ಲಿರುವ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದ ಸ್ಥಳದಲ್ಲಿ ರಕ್ಷಕರು  
ವಿದೇಶ

ಇಂಡೋನೇಷ್ಯಾದಲ್ಲಿ ಶಾಲಾ ಕಟ್ಟಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿ 91 ವಿದ್ಯಾರ್ಥಿಗಳು ಸಮಾಧಿ ಶಂಕೆ

ಪೂರ್ವ ಜಾವಾ ಪ್ರಾಂತ್ಯದ ಶತಮಾನಗಳಷ್ಟು ಹಳೆಯದಾದ ಅಲ್ ಖೋಜಿನಿ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯಲ್ಲಿ ವಿಸ್ತರಣೆಯನ್ನು ಅನಧಿಕೃತವಾಗಿ ಮಾಡಲಾಗುತ್ತಿತ್ತು.

ಸಿಡೋರ್ಜೊ: ಇಸ್ಲಾಮಿಕ್ ಶಾಲಾ ಕಟ್ಟಡ ಕುಸಿದು ಎರಡು ದಿನಗಳ ನಂತರ ಕನಿಷ್ಠ 91 ವಿದ್ಯಾರ್ಥಿಗಳು ಕಾಂಕ್ರೀಟ್ ಅವಶೇಷಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯಲ್ಲಿ ಮಕ್ಕಳ ಹಾಜರಾತಿ ದಾಖಲೆಗಳು ಮತ್ತು ಕಾಣೆಯಾದವರ ಆತಂಕಗೊಂಡ ಕುಟುಂಬಗಳ ವರದಿಗಳನ್ನು ಪರಿಶೀಲಿಸಿದ ನಂತರ ಅಧಿಕಾರಿಗಳು ಈ ಸಂಖ್ಯೆಯನ್ನು ತಿಳಿಸಿದ್ದಾರೆ.

ಪೂರ್ವ ಜಾವಾ ಪ್ರಾಂತ್ಯದ ಶತಮಾನಗಳಷ್ಟು ಹಳೆಯದಾದ ಅಲ್ ಖೋಜಿನಿ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯಲ್ಲಿ ವಿಸ್ತರಣೆಯನ್ನು ಅನಧಿಕೃತವಾಗಿ ಮಾಡಲಾಗುತ್ತಿತ್ತು. ಪ್ರಾರ್ಥನಾ ಮಂದಿರದಲ್ಲಿ ಸೋಮವಾರ ಮಧ್ಯಾಹ್ನ ಪ್ರಾರ್ಥನೆ ಸಲ್ಲಿಸುತ್ತಿದ್ದ ನೂರಾರು ವಿದ್ಯಾರ್ಥಿಗಳ ಮೇಲೆ ಕಟ್ಟಡ ಕುಸಿದುಬಿದ್ದಿದೆ.

ಇದುವರೆಗೆ ಕನಿಷ್ಠ ಮೂರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 100 ಮಂದಿ ಗಾಯಗೊಂಡಿದ್ದಾರೆ, ಹಲವರ ತಲೆಗೆ ಗಾಯಗಳಾಗಿದ್ದು ಮೂಳೆಗಳು ಮುರಿದಿವೆ. ಕನಿಷ್ಠ ಆರು ಮಕ್ಕಳು ಅವಶೇಷಗಳ ಅಡಿಯಲ್ಲಿ ಜೀವಂತವಾಗಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಜೀವಂತವಾಗಿ ಹೊರತೆಗೆಯಲು ರಕ್ಷಣಾ ಕಾರ್ಯಕರ್ತರು ಕಿರಿದಾದ ಅಂತರಗಳಿಂದ ಆಮ್ಲಜನಕ, ನೀರು ಮತ್ತು ಆಹಾರವನ್ನು ಪೂರೈಸುತ್ತಿದ್ದಾರೆ, ವಿದ್ಯಾರ್ಥಿಗಳು ಹೆಚ್ಚಾಗಿ ಏಳರಿಂದ 12 ನೇ ತರಗತಿಯ ಬಾಲಕರು, 12 ರಿಂದ 18 ವರ್ಷ ವಯಸ್ಸಿನವರು. ಕಟ್ಟಡದ ಇನ್ನೊಂದು ಭಾಗದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸುತ್ತಿದ್ದು ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಬದುಕುಳಿದವರು ತಿಳಿಸಿದ್ದಾರೆ.

ಪ್ರಾರ್ಥನಾ ಮಂದಿರವು ಎರಡು ಅಂತಸ್ತುಗಳದ್ದಾಗಿತ್ತು ಆದರೆ ಅವುಗಳನ್ನು ಕಟ್ಟಲು ಅನುಮತಿ ಪಡೆದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅಮೆರಿಕಕ್ಕೆ 'ದೊಡ್ಡ ಅವಮಾನ': Donald Trump

ಸುಂಕ ಅನಿಶ್ಚಿತತೆ ಮಧ್ಯೆ ವಿತ್ತೀಯ ನೀತಿ ಪ್ರಕಟ: ರೆಪೊ ದರ ಯಥಾಸ್ಥಿತಿ ಕಾಯ್ದುಕೊಂಡ RBI

Madhya Pradesh: 15 ದಿನದಲ್ಲಿ 6 ಮಕ್ಕಳ ಕಿಡ್ನಿ ಫೇಲ್, ಸಾವು..! 2 Cough Syrup ನಿಷೇಧ! ICMR ತಂಡ ದೌಡು

ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 69ಕ್ಕೆ ಏರಿಕೆ

35ರ ಮಹಿಳೆಯೊಂದಿಗೆ 75 ವರ್ಷದ ವೃದ್ಧನ ಮದುವೆ, ಮೊದಲ ರಾತ್ರಿ ಬೆನ್ನಲ್ಲೇ ಸಾವು!

SCROLL FOR NEXT