ಸಾಂದರ್ಭಿಕ ಚಿತ್ರ 
ವಿದೇಶ

ಸಿಂಗಾಪುರದಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಳಿ ದರೋಡೆ; ಇಬ್ಬರು ಭಾರತೀಯರಿಗೆ ಜೈಲು ಶಿಕ್ಷೆ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರಿಗೆ ತಲಾ ಐದು ವರ್ಷ ಒಂದು ತಿಂಗಳು ಜೈಲುವಾಸ ಮತ್ತು 12 ಬೆತ್ತದ ಹೊಡೆತಗಳ ಶಿಕ್ಷೆ ವಿಧಿಸಿ ಸಿಂಗಾಪುರ ಕೋರ್ಟ್ ಆದೇಶ ನೀಡಿದೆ.

ಸಿಂಗಾಪೂರ್: ಸಿಂಗಾಪುರಕ್ಕೆ ತೆರಳಿದ್ದ ಇಬ್ಬರು ಭಾರತೀಯರ ಪುರುಷರು ಲಾಡ್ಜ್​ವೊಂದರಲ್ಲಿ ಇಬ್ಬರು ಲೈಂಗಿಕ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿ, ದರೋಡೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರಿಗೆ ತಲಾ ಐದು ವರ್ಷ ಒಂದು ತಿಂಗಳು ಜೈಲುವಾಸ ಮತ್ತು 12 ಬೆತ್ತದ ಹೊಡೆತಗಳ ಶಿಕ್ಷೆಯನ್ನು ವಿಧಿಸಿ ಸಿಂಗಾಪುರ ಕೋರ್ಟ್ ಆದೇಶ ನೀಡಿದೆ.

23 ವರ್ಷದ ಅರೋಕ್ಕಿಯಸಾಮಿ ಡೈಸನ್ ಮತ್ತು 27 ವರ್ಷದ ರಾಜೇಂದ್ರನ್ ಮಾಯಿಲರಸನ್ ಶಿಕ್ಷೆಗೊಳಗಾದ ಅಪರಾಧಿಗಳು. ಇಬ್ಬರು ಕೋರ್ಟ್​ನಲ್ಲಿ ಸ್ವಯಂಪ್ರೇರಣೆಯಿಂದ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ.

ಡೈಸನ್ ಮತ್ತು ರಾಜೇಂದ್ರನ್ ಏ.24 ರಂದು ರಜೆಯ ನಿಮಿತ್ತ ಭಾರತದಿಂದ ಸಿಂಗಾಪುರಕ್ಕೆ ತೆರಳಿದ್ದಾರೆ. ಎರಡು ದಿನಗಳ ಬಳಿಕ ಲಿಟಲ್ ಇಂಡಿಯಾ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಮಾತನಾಡಿಸಿದ್ದು, ಲೈಂಗಿಕ ಸೇವೆಗಳಿಗಾಗಿ ವೇಶ್ಯೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಇದೆಯೇ ಎಂದು ಕೇಳಿದ್ದಾನೆ. ಬಳಿಕ ಹೋಗುವಾಗ ಇಬ್ಬರು ಮಹಿಳೆಯರ ಸಂಪರ್ಕ ಮಾಹಿತಿಯನ್ನು ಕೊಟ್ಟಿದ್ದಾನೆ.

ಲೈಂಗಿಕ ಸೇವೆಗಾಗಿ ಎಂದು ಓರ್ವ ಮಹಿಳೆಯನ್ನು ತಮ್ಮ ಕೋಣೆಗೆ ಕರೆಸಿಕೊಂಡು, ಅವಳ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಕಪಾಳಮೋಕ್ಷ ಮಾಡಿದ್ದಾರೆ. ಆಕೆಯ ಆಭರಣಗಳು, 2 ಸಾವಿರ ಸಿಂಗಾಪುರ್ ಡಾಲರ್ ನಗದು, ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚಿದ್ದಾರೆ.

ಅದೇ ರೀತಿ ಮತ್ತೊಬ್ಬ ಮಹಿಳೆಯನ್ನು ಸಂಪರ್ಕಿಸಿ ಅವಳನ್ನು ರೂಮ್​ಗೆ ಕರೆಸಿಕೊಂಡು ದರೋಡೆ ಮಾಡಿದ್ದು, ಘಟನೆ ಬಗ್ಗೆ ಹೊರಗಡೆ ಹೇಳದಂತೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬೆಳಗ್ಗೆ ಸಂತ್ರಸ್ತೆ ಘಟನೆಯನ್ನು ಇನ್ನೊಬ್ಬ ವ್ಯಕ್ತಿ ಮುಂದೆ ನಡೆದ ಘಟನೆ ಬಗ್ಗೆ ಹೇಳಿದ್ದು, ಇಬ್ಬರ ಕೃತ್ಯ ಬಯಲಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ದೂರು ನೀಡಿದ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT