ಜೆರುಸಲೆಂ: ಹಮಾಸ್ ಏಳು ಒತ್ತೆಯಾಳುಗಳನ್ನು ಇಸ್ರೇಲ್ ಗೆ ಹಸ್ತಾಂತರಿಸಿದ್ದು, ಉಭಯ ರಾಷ್ಟ್ರಗಳು ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರುವುದಾಗಿ ಹೇಳಿಕೆ ನೀಡಿವೆ.
20 ಮಂದಿಯಲ್ಲಿ ಏಳು ಮಂದಿ ಒತ್ತೆಯಾಳುಗಳನ್ನು ರೆಡ್ ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ ಎಂದು ಹಮಾಸ್‌ನ ಮಿಲಿಟರಿ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪಿಎಂ ಬೆಂಜಮಿನ್ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಅವರು ಬಿಡುಗಡೆಯಾದ ಒತ್ತೆಯಾಳುಗಳಿಗಾಗಿ ಬರೆದ ವೈಯಕ್ತಿಕ ಸಂದೇಶವನ್ನು ಹಂಚಿಕೊಂಡಿದೆ.
ಒತ್ತೆಯಾಳುಗಳ ವೆಲ್ ಕಮ್ ಕಿಟ್‌ನಲ್ಲಿ ಬಟ್ಟೆ, ವೈಯಕ್ತಿಕ ಉಪಕರಣಗಳು, ಲ್ಯಾಪ್‌ಟಾಪ್, ಸೆಲ್‌ಫೋನ್ ಮತ್ತು ಟ್ಯಾಬ್ಲೆಟ್ ಸೇರಿವೆ. ಇಸ್ರೇಲ್ ಜನರ ಪರವಾಗಿ, ಮರಳಿ ಸ್ವಾಗತ! ನಾವು ನಿಮಗಾಗಿ ಕಾಯುತ್ತಿದ್ದೇವೆ. ನಾವು ನಿಮ್ಮನ್ನು ಅಪ್ಪಿಕೊಳ್ಳುತ್ತೇವೆ ಎಂದು ಸಾರಾ ಮತ್ತು ಬೆಂಜಮಿನ್ ನೆತನ್ಯಾಹು ಅವರ ಕೈಯಲ್ಲಿ ಬರೆದಿದ್ದಾರೆ.