ಕದನ ವಿರಾಮದ ಭಾಗವಾಗಿ ಇಂದು ಹಮಾಸ್ ಎಲ್ಲಾ 20 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಹಮಾಸ್ ಅವರನ್ನು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಹಸ್ತಾಂತರಿಸಿದೆ. 20 ಒತ್ತೆಯಾಳುಗಳನ್ನು 2 ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡಲಾಯಿತು. 13 ಒತ್ತೆಯಾಳುಗಳ ಎರಡನೇ ತಂಡವನ್ನು ದಕ್ಷಿಣ ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿ ವರ್ಗಾಯಿಸಲಾಯಿತು. ಸತ್ತ 28 ಒತ್ತೆಯಾಳುಗಳ ಶವಗಳನ್ನು ಸಹ ಹಿಂತಿರುಗಿಸಲಾಗುತ್ತದೆ. ಪ್ರತಿಯಾಗಿ, ಇಸ್ರೇಲ್ 1,900ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲಿದೆ. ಒತ್ತೆಯಾಳುಗಳ ಬಿಡುಗಡೆಯ ನಂತರ, ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಬೀದಿಗಳಲ್ಲಿ ಜನರು ಸಂಭ್ರಮಿಸುತ್ತಿರುವುದು ಕಂಡುಬಂದಿದೆ. ಇಸ್ರೇಲಿ ಧ್ವಜಗಳನ್ನು ಹಾರಿಸಿದರು. ಇದನ್ನು ಟ್ರಂಪ್ ಅವರ ಗಾಜಾ ಶಾಂತಿ ಯೋಜನೆಯ ಪ್ರಮುಖ ಯಶಸ್ಸು ಎಂದು ಪರಿಗಣಿಸಲಾಗುತ್ತಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿ ನೂರಾರು ಮಂದಿಯನ್ನು ಒತ್ತೆಯಾಳುಗಳಾಗಿ ತೆಗೆದುಕೊಂಡಿತು ಎಂಬುದನ್ನು ಗಮನಿಸಬೇಕು. ಈ ದಾಳಿಯಲ್ಲಿ 1,200 ಇಸ್ರೇಲಿಗಳು ಸಾವನ್ನಪ್ಪಿದರೆ ಹಮಾಸ್ 251 ಒತ್ತೆಯಾಳುಗಳನ್ನು ವಶಕ್ಕೆ ಪಡೆದುಕೊಂಡಿತ್ತು. ನಂತರ ಇಸ್ರೇಲ್ ಹಮಾಸ್ ವಿರುದ್ಧ ಯುದ್ಧವನ್ನು ಪ್ರಾರಂಭಿಸಿತು. ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಇಂದು ಮಧ್ಯಪ್ರಾಚ್ಯಕ್ಕೆ ಸ್ಮರಣೀಯ ದಿನ. ಮಧ್ಯಪ್ರಾಚ್ಯ ಶಾಂತಿಗೆ ಇದು ಬಹಳ ಮುಖ್ಯವಾದ ದಿನ ಎಂದು ಹೇಳಿದರು.
ನೆಸ್ಸೆಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಜಾದಲ್ಲಿ ಯುದ್ಧ ಮುಗಿದಿದೆ ಎಂದು ಹೇಳಿದರು. ಇದು ಒಂದು ಉತ್ತಮ ದಿನ. ಇದು ಒಂದು ಹೊಚ್ಚ ಹೊಸ ಆರಂಭ ಮತ್ತು ಈ ರೀತಿಯ ಘಟನೆ ಹಿಂದೆಂದೂ ಸಂಭವಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಇಸ್ರೇಲ್ ಬೀದಿಗಳಲ್ಲಿ ಪ್ರೀತಿಯ ಹರಿವು ಅದ್ಭುತವಾಗಿದೆ. ಇದು ಅದ್ಭುತ ದಿನವಾಗಿತ್ತು ಎಂದು ಟ್ರಂಪ್ ಹೇಳಿದರು.
ನೆಸ್ಸೆಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗಾಜಾದಲ್ಲಿ ಯುದ್ಧ ಮುಗಿದಿದೆ ಎಂದು ಹೇಳಿದರು. ಇದು ಒಂದು ಉತ್ತಮ ದಿನ. ಇದು ಒಂದು ಹೊಚ್ಚ ಹೊಸ ಆರಂಭ ಮತ್ತು ಈ ರೀತಿಯ ಘಟನೆ ಹಿಂದೆಂದೂ ಸಂಭವಿಸಿಲ್ಲ ಎಂದು ನಾನು ಭಾವಿಸುತ್ತೇನೆ. ಇಸ್ರೇಲ್ ಬೀದಿಗಳಲ್ಲಿ ಪ್ರೀತಿಯ ಹರಿವು ಅದ್ಭುತವಾಗಿದೆ. ಇದು ಅದ್ಭುತ ದಿನವಾಗಿತ್ತು ಎಂದು ಟ್ರಂಪ್ ಹೇಳಿದರು. ಇನ್ನು ಟ್ರಂಪ್ ಇಸ್ರೇಲ್ ಸೆನೆಟ್ ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು "ಅತ್ಯುತ್ತಮ ಕೆಲಸ ಮಾಡಿದ್ದಾರೆ. ಕೆಲವು ಒತ್ತೆಯಾಳುಗಳನ್ನು ನಿರೀಕ್ಷೆಗಿಂತ ಮುಂಚಿತವಾಗಿ ಬಿಡುಗಡೆ ಮಾಡಬಹುದು. ಗಾಜಾ ಪ್ರದೇಶದ ಪುನರ್ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಶೀಘ್ರದಲ್ಲೇ ಶಾಂತಿ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಯಹೂದಿಗಳಾಗಲಿ, ಮುಸ್ಲಿಮರಾಗಲಿ, ಅಥವಾ ಅರಬ್ ದೇಶಗಳಾಗಲಿ ಎಲ್ಲರೂ ಸಂತೋಷವಾಗಿದ್ದಾರೆ. ನಾವು ಇಸ್ರೇಲ್ ನಂತರ ಈಜಿಪ್ಟ್‌ಗೆ ಹೋಗುತ್ತಿದ್ದೇವೆ. ನಾವು ಬಹಳ ಶಕ್ತಿಶಾಲಿ, ದೊಡ್ಡ ಮತ್ತು ಶ್ರೀಮಂತ ದೇಶಗಳ ನಾಯಕರನ್ನು ಭೇಟಿಯಾಗಲಿದ್ದೇವೆ. ಅವರೆಲ್ಲರೂ ಈ ಒಪ್ಪಂದಕ್ಕೆ ಒಲವು ತೋರುತ್ತಿದ್ದಾರೆಂದು ಹೇಳಿದರು.