ಡೊನಾಲ್ಡ್ ಟ್ರಂಪ್- ನರೇಂದ್ರ ಮೋದಿ online desk
ವಿದೇಶ

ಭಾರತ ಶ್ರೇಷ್ಠ ದೇಶ, ಅಗ್ರಸ್ಥಾನದಲ್ಲಿ ನನ್ನ ಉತ್ತಮ ಸ್ನೇಹಿತ: ವಿಶ್ವ ನಾಯಕರ ಎದುರು ಮೋದಿ ಹೆಸರೆತ್ತದೆ ಹಾಡಿ ಹೊಗಳಿದ​​ ಟ್ರಂಪ್!

ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ಒಟ್ಟಿಗೆ ಸಾಗುತ್ತದೆ ಎಂದು ಭಾವಿಸುವೆ ಎಂದು ಪಕ್ಕದಲ್ಲೇ ಇದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ನೋಡಿದರು.

ಈಜಿಪ್ಟ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ ಎಂದು ಮೋದಿ ಹೆಸರೆತ್ತದೆ ಅವರು ಹೇಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿದ ‘ಗಾಜಾ ಕದನ ವಿರಾಮ‘ದ ಬಳಿಕ ಇಲ್ಲಿ ನಡೆಯುತ್ತಿದ್ದ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಟ್ರಂಪ್ ಭಾಷಣ ಮಾಡಿದ್ದಾರೆ. ಅಲ್ಲದೆ ಭಾರತ ಹಾಗೂ ಪಾಕಿಸ್ತಾನವು ಒಟ್ಟಿಗೆ ಸಾಗುತ್ತವೆ ಎಂದು ಭಾವಿಸುವೆ’ ಎಂದಿದ್ದಾರೆ.

ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ಒಟ್ಟಿಗೆ ಸಾಗುತ್ತದೆ ಎಂದು ಭಾವಿಸುವೆ ಎಂದು ಪಕ್ಕದಲ್ಲೇ ಇದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ನೋಡಿ ಹೇಳಿದರು.

ಈಗ ಭಾರತ ಮತ್ತು ಪಾಕಿಸ್ತಾನ ಚೆನ್ನಾಗಿ ಹೊಂದಿಕೊಳ್ಳುತ್ತವೇ ಅಲ್ಲವೇ ಎಂದೂ ಶೆಹಬಾಜ್ ಷರೀಫ್ ಕಡೆಗೆ ತಿರುಗಿ ಕೇಳಿದರು. ಇದಕ್ಕೆ ಪಾಕ್‌ ಪ್ರಧಾನಿ ಹೌದು ಎನ್ನುತ್ತಲೇ ಸಕಾರಾತ್ಮಕವಾಗಿ ತಲೆಯಾಡಿಸಿದ್ರು. ಭಾರತವು ಒಂದು ಅದ್ಭುತ ದೇಶ, ನನ್ನ ಇಳ್ಳೆಯ ಸ್ನೇಹಿತನ ನೇತೃತ್ವದಲ್ಲಿ ಅದ್ಭುತ ಕೆಲಸಗಳನ್ನ ಮಾಡುತ್ತಿದೆ. ಭಾರತ ಮತ್ತು ಪಾಕಿಸ್ತಾನ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂದು ನಾನು ಭಾವಿಸುತ್ತೇನೆ ಎಂದರು.

ಅದಕ್ಕೂ ಮುನ್ನ ಶರೀಫ್ ಅವರನ್ನು ಟ್ರಂಪ್ ಹೊಗಳಿದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರನ್ನು ‘ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್‘ ಎಂದು ಸಂಬೋಧಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಶರೀಫ್ ಅವರನ್ನು ಆಹ್ವಾನಿಸಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ 7 ಯುದ್ಧಗಳನ್ನು ನಿಲ್ಲಿಸಿದ್ದು, ನಾನೇ ಎಂದು ಹೇಳಿಕೊಳ್ಳುತ್ತಿದ್ದ ಟ್ರಂಪ್, ಇದೀಗ ಇಸ್ರೇಲ್-ಗಾಜಾ ಸಂಘರ್ಷವನ್ನು ಕೂಡ ನಾನೇ ನಿಲ್ಲಿಸಿದ್ದು ಎಂದು ಹೇಳುವ ಮೂಲಕ ಈಗ ಆ ಸಂಖ್ಯೆಯನ್ನು ಎಂಟಕ್ಕೆ ಹೆಚ್ಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾಚಿಕೆಗೇಡಿನ ಸಂಗತಿ! ಭಾರತದ ಕೆಮ್ಮಿನ ಸಿರಪ್‌ ಬಗ್ಗೆ ದೇಶಗಳಿಗೆ WHO ಎಚ್ಚರಿಕೆ

ಹರಿಯಾಣ: ಮೃತ IPS ಅಧಿಕಾರಿ ಪೂರಣ್ ಕುಮಾರ್ ಮನೆಗೆ ರಾಹುಲ್ ಗಾಂಧಿ ಭೇಟಿ, ನ್ಯಾಯಕ್ಕೆ ಆಗ್ರಹ

RSS ಚುಟುವಟಿಕೆ ನಿರ್ಬಂಧಕ್ಕೆ ಪತ್ರ: ಫೋನ್ ರಿಂಗಣಿಸುವುದು ನಿಲ್ಲಿಸಿಲ್ಲ, ಬೆದರಿಕೆ ಕರೆ ಬರುತ್ತಿವೆ; ಪ್ರಿಯಾಂಕ್ ಖರ್ಗೆ

CM Dinner Meet: ಸಂಪುಟ ಪುನಾರಚನೆ ಕುರಿತು ಮಾತುಕತೆ, ಮಾನಸಿಕವಾಗಿ ಸಿದ್ಧರಾಗಿರುವಂತೆ ಸಚಿವರಿಗೆ ಸಿದ್ದು ಸೂಚನೆ..?

KSRTC ಬಸ್‌ನಲ್ಲಿ ವೈದ್ಯೆಗೆ ಲೈಂಗಿಕ ಕಿರುಕುಳ: ಆರೋಪಿ Firoz ಬಂಧನ

SCROLL FOR NEXT