ಡೊನಾಲ್ಡ್ ಟ್ರಂಪ್, ಪುಟಿನ್ 
ವಿದೇಶ

Tomahawk Missiles: ಅಮೆರಿಕಕ್ಕೆ ಬ್ರೇಕ್ ಹಾಕಿದ ರಷ್ಯಾ; ಮುಂದಿನ ವಾರ ಉಕ್ರೇನ್‌ ಜೊತೆ ಮಾತುಕತೆ

ಪುಟಿನ್ ಅವರೊಂದಿಗಿನ ಒಂದು ಗಂಟೆ ಅವಧಿಯ ದೂರವಾಣಿ ಸಂಭಾಷಣೆಯಲ್ಲಿ ಮಹತ್ತರ ಪ್ರಗತಿ" ಸಾಧಿಸಿದ ನಂತರ, ಮುಂಬರುವ ಕೆಲವು ವಾರಗಳಲ್ಲಿ ಉಭಯ ನಾಯಕರು ಹಂಗೇರಿಯಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ವಾಷಿಂಗ್ಟನ್: ಶುಕ್ರವಾರ ಶ್ವೇತಭವನದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಭೇಟಿಗೂ ಮುನ್ನಾ ಮಾತನಾಡಿದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನ್‌ಗೆ ಟೊಮಾಹಾಕ್ ಕ್ರೂಸ್ ಕ್ಷಿಪಣಿ ಪೂರೈಕೆ ಮೂಲಕ ತನ್ನ ದೇಶದ ಸಂಗ್ರಹವನ್ನು ಖಾಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪುಟಿನ್ ಅವರೊಂದಿಗಿನ ಒಂದು ಗಂಟೆ ಅವಧಿಯ ದೂರವಾಣಿ ಸಂಭಾಷಣೆಯಲ್ಲಿ ಮಹತ್ತರ ಪ್ರಗತಿ" ಸಾಧಿಸಿದ ನಂತರ, ಮುಂಬರುವ ಕೆಲವು ವಾರಗಳಲ್ಲಿ ಉಭಯ ನಾಯಕರು ಹಂಗೇರಿಯಲ್ಲಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ನಾನು, ಒಪ್ಪಿತ ಸ್ಥಳವಾದ ಬುಡಾಪೆಸ್ಟ್, ಹಂಗೇರಿಯಲ್ಲಿ ಭೇಟಿಯಾಗುತ್ತೇವೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಟ್ರಂಪ್ ಮತ್ತು ಪುಟಿನ್ ಈ ಹಿಂದೆ ಅಲಾಸ್ಕಾದಲ್ಲಿ ಭೇಟಿಯಾಗಿದ್ದರು. ಉಕ್ರೇನ್‌ಗೆ ಟೊಮಾಹಾಕ್ ಕ್ಷಿಪಣಿ ಪೂರೈಸುವ ವಿಷಯವನ್ನು ಚರ್ಚಿಸಲಾಗಿದೆ ಅಮೆರಿಕಕ್ಕೂ ಟೊಮಾಹಾಕ್ ಕ್ಷಿಪಣಿ ಅಗತ್ಯವಿದೆ. ನಮ್ಮಲ್ಲಿ ಬಹಳಷ್ಟು ಇವೆ. ಆದರೂ ನಮಗೆ ಅವು ಬೇಕು" ಎಂದು ಅವರು ಹೇಳಿರುವುದಾಗಿ ಸುದ್ದಿಸಂಸ್ಥೆ TASS ವರದಿಯಲ್ಲಿ ಹೇಳಿದೆ.

ಅಂದರೆ, ನಮ್ಮ ದೇಶಕ್ಕಾಗಿ ಅವುಗಳನ್ನು ಖಾಲಿ ಮಾಡಿಕೊಳ್ಳಲು ಇಷ್ಟವಿಲ್ಲ. ಅವು ಬಹಳ ಮುಖ್ಯವಾಗಿದ್ದು, ತುಂಬಾ ಶಕ್ತಶಾಲಿ, ನಿಖರವಾಗಿ ಗುರಿ ತಲುಪಬಲ್ಲವು. ಆದರೆ ನಮಗೆ ಅವುಗಳ ಅಗತ್ಯವಿದೆ. ಆದ್ದರಿಂದ ಅವುಗಳ ಬಗ್ಗೆ ನಾವು ಏನು ಮಾಡಬಹುದು ಎಂದು ತಿಳಿದಿಲ್ಲ ಎಂದು ಟ್ರಂಪ್ ಹೇಳಿರುವುದಾಗಿ ರಷ್ಯಾದ ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ.

ಟ್ರಂಪ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಉಕ್ರೇನ್‌ಗೆ ಟೊಮಾಹಾಕ್ಸ್‌ನ ಸಂಭವನೀಯ ಪೂರೈಕೆ ವಿಷಯವನ್ನು ಟ್ರಂಪ್ ಪ್ರಸ್ತಾಪಿಸಿದ್ದಾರೆ. ಟೊಮಾಹಾಕ್ಸ್ ಯುದ್ಧಭೂಮಿಯಲ್ಲಿನ ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ, ಆದರೆ ಯುಎಸ್-ರಷ್ಯಾ ಸಂಬಂಧಗಳಿಗೆ ಮತ್ತು ಶಾಂತಿ ಪ್ರಕ್ರಿಯೆಯಲ್ಲಿ ಮುಂದುವರಿಯುವ ಅವಕಾಶವನ್ನು ಹಾನಿಗೊಳಿಸುತ್ತದೆ ಎಂದು ಟ್ರಂಪ್‌ಗೆ ಪುಟಿನ್ ಹೇಳಿದ್ದಾರೆ ಎಂದು ರಷ್ಯಾ ರಾಯಭಾರಿ ಅಧಿಕಾರಿ ಉಷಕೋವ್ ಹೇಳಿದ್ದಾರೆ.

ಕ್ಷಿಪಣಿಗಳ ಪೂರೈಕೆಯನ್ನು ಹೆಚ್ಚಿಸಲು, ಟೊಮಾಹಾಕ್ ಕ್ಷಿಪಣಿಗಳನ್ನು ಕೀವ್‌ಗೆ ವರ್ಗಾಯಿಸಲು ಝೆಲೆನ್ಸ್ಕಿ ಅಮೆರಿಕವನ್ನು ಪದೇ ಪದೇ ಕೇಳಿದ್ದಾರೆ. ಕಳೆದ ವಾರ, ಯುಎಸ್ ಅಧ್ಯಕ್ಷರು ಟೊಮಾಹಾಕ್ ಕ್ಷಿಪಣಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಅವರು ರಷ್ಯಾದ ಅಧ್ಯಕ್ಷರೊಂದಿಗೆ ಚರ್ಚಿಸಬೇಕು ಎಂದು ಹೇಳಿದ್ದರು.

ಟೊಮಾಹಾಕ್ ಕ್ಷಿಪಣಿಗಳು 1,500 ಮೈಲುಗಳ ವ್ಯಾಪ್ತಿಯನ್ನು ಹೊಂದಿದ್ದು, ಉಕ್ರೇನ್ ಸುಲಭವಾಗಿ ರಷ್ಯಾದ ಮೇಲೆ ದಾಳಿ ನಡೆಸಲು ಅನುವು ಮಾಡಿಕೊಡುತ್ತದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ಚರ್ಚಿಸಲು ಎರಡೂ ದೇಶಗಳ ಉನ್ನತ ಸಲಹೆಗಾರರು ಮುಂದಿನ ವಾರ ಭೇಟಿಯಾಗಲಿದ್ದಾರೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರತಿನಿಧಿಸುತ್ತಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಶೃಂಗಸಭೆಯಲ್ಲಿ ಕೆಲಸ ಮಾಡಲು ಮುಂಬರುವ ದಿನಗಳಲ್ಲಿ ರೂಬಿಯೊ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಕ್ರೆಮ್ಲಿನ್ ಸಹಾಯಕ ಉಷಕೋವ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಿಟಿಷರ ದಬ್ಬಾಳಿಕೆ ನಡುವೆಯೂ 'ವಂದೇ ಮಾತರಂ' ಬಂಡೆಯಂತೆ ಗಟ್ಟಿಯಾಗಿ ನಿಂತಿತು: ಲೋಕಸಭೆಯಲ್ಲಿ ಪ್ರಧಾನಿ ಮೋದಿ

ಮಲಯಾಳಂ ನಟಿ ಮೇಲೆ ಅತ್ಯಾಚಾರ ಪ್ರಕರಣ: ನಟ ದಿಲೀಪ್ ಖುಲಾಸೆ; ಪಲ್ಸರ್ ಸುನಿ ಸೇರಿ ಆರು ಮಂದಿ ತಪ್ಪಿತಸ್ಥರು

ಮಧ್ಯಪ್ರದೇಶ: ಕೋಟಿ ಕೋಟಿ ಬಹುಮಾನ ಹೊಂದಿದ್ದ 10 ನಕ್ಸಲರು ಶಸ್ತ್ರಾಸ್ತ್ರ ಸಹಿತ ಶರಣಾಗತಿ!

ಡಿಕೆಶಿ ಅವಕಾಶ ಕೇಳಿದ್ರು, ಆದ್ರೆ CM ಬದಲಾವಣೆಗೆ ಹೈಕಮಾಂಡ್ ಸಮ್ಮತಿಸಿಲ್ಲ: ಯತೀಂದ್ರ ಸ್ಫೋಟಕ ಹೇಳಿಕೆ

'₹500 ಕೋಟಿ ಕೊಟ್ಟರೆ ಸಿಎಂ ಹುದ್ದೆ': ನವಜೋತ್ ಕೌರ್ ಸಿಧು 'ಮೆಂಟಲ್ ಆಸ್ಪತ್ರೆಗೆ' ದಾಖಲಾಗಬೇಕು; ಡಿಕೆ ಶಿವಕುಮಾರ್

SCROLL FOR NEXT