ಡೊನಾಲ್ಡ್ ಟ್ರಂಪ್ 
ವಿದೇಶ

ನಾನು ಅಂದುಕೊಂಡರೆ ಸುಲಭವಾಗಿ ಕ್ಷಣಾರ್ಧದಲ್ಲಿ ಸಂಘರ್ಷ ನಿಲ್ಲಿಸಬಲ್ಲೆ: Afghan-Pak ಯುದ್ಧದ ಬಗ್ಗೆ ಟ್ರಂಪ್

ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಭೀಕರ ಸಂಘರ್ಷ ಮುಂದುವರೆದಿದೆ. ಶನಿವಾರ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಹೊಸ ವಾಯುದಾಳಿಗಳನ್ನು ಪ್ರಾರಂಭಿಸಿದೆ.

ವಾಷಿಂಗ್ಟನ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಭೀಕರ ಸಂಘರ್ಷ ಮುಂದುವರೆದಿದೆ. ಶನಿವಾರ ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಹೊಸ ವಾಯುದಾಳಿಗಳನ್ನು ಪ್ರಾರಂಭಿಸಿದೆ. ಶುಕ್ರವಾರ ಮುಂಜಾನೆ ಮಿರ್ ಅಲಿಯಲ್ಲಿರುವ ಖಡ್ಡಿ ಕೋಟೆಯ ಮೇಲಿನ ದಾಳಿಯ ಹೊಣೆಯನ್ನು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ನ ಹಫೀಜ್ ಗುಲ್ ಬಹದ್ದೂರ್ ಗುಂಪು ಹೊತ್ತುಕೊಂಡಿತ್ತು. ಏತನ್ಮಧ್ಯೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಪ್ರವೇಶಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಉಭಯ ದೇಶಗಳು ಬಯಸಿದರೆ ಸಂಘರ್ಷವನ್ನು ಸುಲಭವಾಗಿ ಪರಿಹರಿಸಬಲ್ಲೆ ಎಂದು ಹೇಳಿದರು. ಇದು ಬಹುತೇಕ ಕೊನೆಯ ಆಯ್ಕೆಯಾಗಿದೆ. ಇನ್ನು ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ ಎಂದು ಅವರು ನಂಬುತ್ತಾರೆ. ನಾನು ಅದನ್ನು ಪರಿಹರಿಸಬೇಕಾದರೆ, ಅದು ನನಗೆ ಸುಲಭ. ಈ ಮಧ್ಯೆ, ನಾನು ಅಮೆರಿಕವನ್ನು ನಡೆಸಬೇಕು. ಆದರೆ ನಾನು ಯುದ್ಧಗಳನ್ನು ಪರಿಹರಿಸಲು ಇಷ್ಟಪಡುತ್ತೇನೆ. ಟ್ರಂಪ್ ಪ್ರಕಾರ, ಅಫ್ಘಾನಿಸ್ತಾನ-ಪಾಕಿಸ್ತಾನ ಸಂಘರ್ಷದಂತಹ ದಶಕಗಳಷ್ಟು ಹಳೆಯದಾದ ವಿವಾದವನ್ನು ಪರಿಹರಿಸುವುದು ಅವರಿಗೆ ಕಷ್ಟಕರವಾದ ಕೆಲಸವಲ್ಲವಂತೆ.

ಪ್ರಾಣ ಮತ್ತು ಆಸ್ತಿಪಾಸ್ತಿ ನಷ್ಟವನ್ನು ತಡೆಗಟ್ಟುವಲ್ಲಿ ತಾನು ಹೆಮ್ಮೆಪಡುತ್ತೇನೆ ಎಂದು ಅವರು ಮತ್ತಷ್ಟು ಹೇಳಿದರು. ಏಕೆ ಗೊತ್ತಾ? ಜನರು ಸಾಯುವುದನ್ನು ತಡೆಯುವುದು ನನಗೆ ಇಷ್ಟ. ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಮತ್ತು ಈ ಯುದ್ಧದಲ್ಲಿ ನಾನು ಯಶಸ್ವಿಯಾಗುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದರು.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಭಾರೀ ಬಾಂಬ್ ದಾಳಿ

ಪಾಕಿಸ್ತಾನಿ ಪತ್ರಿಕೆ "ಡಾನ್" ಪ್ರಕಾರ, ಪಾಕಿಸ್ತಾನವು ಶುಕ್ರವಾರ ತಡರಾತ್ರಿ ಅಂಗೂರ್ ಅಡ್ಡಾ ಪ್ರದೇಶ ಮತ್ತು ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಉರ್ಗುನ್ ಮತ್ತು ಬರ್ಮಲ್ ಜಿಲ್ಲೆಗಳಲ್ಲಿನ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡಿದೆ. ವರದಿಯ ಪ್ರಕಾರ, ಅಫ್ಘಾನ್ ಸರ್ಕಾರ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದವು ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಅಡಗುತಾಣಗಳ ಮೇಲಿನ ದಾಳಿಯನ್ನು ಒಳಗೊಂಡಿಲ್ಲ ಎಂದು ಪಾಕಿಸ್ತಾನಿ ಭದ್ರತಾ ಮೂಲಗಳು ತಿಳಿಸಿವೆ.

ಅಫ್ಘಾನ್ ಮತ್ತು ಪಾಕಿಸ್ತಾನಿ ನಿಯೋಗಗಳು ಮಾತುಕತೆಗಾಗಿ ಕತಾರ್ ರಾಜಧಾನಿ ದೋಹಾಗೆ ತೆರಳಿವೆ. ಕಳೆದ ಕೆಲವು ದಿನಗಳಿಂದ ಎರಡೂ ಕಡೆಗಳಲ್ಲಿ ಡಜನ್‌ಗಟ್ಟಲೆ ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿರುವ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಗುರಿಯನ್ನು ಈ ಸಭೆ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಲೋಕಸಭೆಯಲ್ಲಿಂದು ಚರ್ಚೆ, ಎಲ್ಲರ ಚಿತ್ತ ಪ್ರಧಾನಿ ಮೋದಿಯತ್ತ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರ-ವಿಪಕ್ಷಗಳ ನಡುವೆ ಜಟಾಪಟಿ ಸಾಧ್ಯತೆ; ನಾಡದ್ರೋಹಿ MES ಮತ್ತೆ ಕ್ಯಾತೆ, 'ಮಹಾ ಮೇಳವ' ಸಮಾವೇಶಕ್ಕೆ ಮುಂದು..!

'ಮುಖ್ಯಮಂತ್ರಿಗಳೇ ಗಮನ ಕೊಡಿ': ಬಸ್ ಇಲ್ಲ.. ನಿತ್ಯ ಶಾಲೆಗೆ ಕಾಡಿನಲ್ಲಿ 14 ಕಿ.ಮೀ ನಡೆದೇ ಸಾಗುವ ವಿದ್ಯಾರ್ಥಿಗಳು!

ಬಾಬರ್ ಒಬ್ಬ ಆಕ್ರಮಣಕಾರ, ಬಾಬ್ರಿ ವಿಚಾರವನ್ನು ಭಾರತದ ಭ್ರಾತೃತ್ವ ಭಾವನೆಗೆ ಹೋಲಿಸದಿರಿ...

Goa Nightclub Tragedy: ನಾಲ್ವರ ಬಂಧನ, ಮೂವರು ಅಧಿಕಾರಿಗಳು ಅಮಾನತು

SCROLL FOR NEXT