ಡಲ್ಲಾಸ್: ಅಮೆರಿಕದ ಡಲ್ಲಾಸ್ನಲ್ಲಿ ಭಾರತ ಮೂಲದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರು ಕರ್ನಾಟಕದವರು ಎನ್ನಲಾಗಿದೆ.
ಈ ಘಟನೆ ಸೆಪ್ಟೆಂಬರ್ 10 ರಂದು ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ನಡೆದಿದೆ. ಭಾರತ ಮೂಲದ 50 ವರ್ಷದ ಚಂದ್ರ ನಾಗಮಲ್ಲಯ್ಯ ಅವರನ್ನು ಅವರ ಪತ್ನಿ ಮತ್ತು ಮಗನ ಎದುರೇ ರುಂಡ ಕತ್ತರಿಸಿ ಕೊಲೆ ಮಾಡಲಾಗಿದೆ.
ಡಲ್ಲಾಸ್ ಪೊಲೀಸರು ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಅವರನ್ನು ಕೊಲೆ ಪ್ರಕರಣದಲ್ಲಿ ಶಂಕಿತ ಎಂದು ಗುರುತಿಸಿದ್ದು ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. ಜೈಲು ದಾಖಲೆಗಳ ಪ್ರಕಾರ, ಆರೋಪಿಗೆ ಬಾಂಡ್ ರಹಿತ ಬಂಧನ ಆದೇಶ ಹೊರಡಿಸಲಾಗಿದೆ.
ನಾಗಮಲ್ಲಯ್ಯ, ತನ್ನ ಸಹೋದ್ಯೋಗಿ ಯೋರ್ದಾನಿಸ್ ಕೋಬೋಸ್-ಮಾರ್ಟಿನೆಜ್ ಜೊತೆ ಒಡೆದ ವಾಷಿಂಗ್ ಮೆಷಿನ್ ಬಗ್ಗೆ ನಡೆದ ವಾಗ್ವಾದದ ನಂತರ ಹತ್ಯೆ ಮಾಡಲಾಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಕೋಬೋಸ್-ಮಾರ್ಟಿನೆಜ್ ಚಾಕುವನ್ನು ಹೊರತೆಗೆದು ನಾಗಮಲ್ಲಯ್ಯ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ.
ಸೆರೆಯಾದ ದೃಶ್ಯಾವಳಿಗಳಲ್ಲಿ ಕೋಬೋಸ್-ಮಾರ್ಟಿನೆಜ್ ಮಚ್ಚು ಹೊರತೆಗೆದು ನಾಗಮಲ್ಲಯ್ಯನವರ ಮೇಲೆ ಸತತವಾಗಿ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ. ಗಾಯಗೊಂಡ ನಾಗಮಲ್ಲಯ್ಯ ಅವರು ಪತ್ನಿ ಮತ್ತು 18 ವರ್ಷದ ಪುತ್ರನಿದ್ದ ಮೋಟೆಲ್ ಕಚೇರಿಯತ್ತ ಓಡಿಹೋಗಿದ್ದಾರೆ. ಆದರೆ ಆರೋಪಿ ಅವರನ್ನು ಹಿಂಬಾಲಿಸಿ, ನಿರಂತರವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ನಾಗಮಲ್ಲಯ್ಯ ಅವರು ತನ್ನ ಹೆಂಡತಿ ಮತ್ತು 18 ವರ್ಷದ ಮಗ ಇದ್ದ ಮೋಟೆಲ್ ಕಚೇರಿಗೆ ಓಡಿಹೋದರು, ಶಂಕಿತನು ಅವರನ್ನು ಹಿಂಬಾಲಿಸಿ ಅವನ ಮೇಲೆ ಹಲ್ಲೆ ಮಾಡಿದ್ದಾನೆ. ಕೋಬೋಸ್-ಮಾರ್ಟಿನ್ ಹೂಸ್ಟನ್‌ನಲ್ಲಿ ವಾಹನ ಕಳ್ಳತನ ಮತ್ತು ಹಲ್ಲೆ ಸೇರಿದಂತೆ ಅಪರಾಧ ಇತಿಹಾಸವನ್ನು ಹೊಂದಿದ್ದಾನೆ. ನಾಗಮಲ್ಲಯ್ಯ ತುಂಬಾ ಮೃದು ಸ್ವಭಾವದವರಾಗಿದ್ದರು. ಈ ಊಹಿಸಲಾಗದ ಘಟನೆ ಹಠಾತ್ ಮಾತ್ರವಲ್ಲ, ಇದು ಅತ್ಯಂತ ಆಘಾತ ಉಂಟು ಮಾಡಿದೆ ಎಂದು ಸ್ನೇಹಿತರು ಹೇಳಿದ್ದಾರೆ.
ನಾಗಮಲ್ಲಯ್ಯ ಅವರ "ದುರಂತ" ಸಾವಿಗೆ ಭಾರತೀಯ ರಾಯಭಾರಿ ಕಚೇರಿ ಸಂತಾಪ ಸೂಚಿಸಿದೆ. ಅವರ ಕೆಲಸದ ಸ್ಥಳದಲ್ಲಿ ಅವರನ್ನು "ಕ್ರೂರವಾಗಿ ಕೊಲ್ಲಲಾಗಿದೆ" ಎಂದು ಹೇಳಿದರು. ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಹಾಗೂ ಸಾಧ್ಯವಿರುವ ಎಲ್ಲ ರೀತಿಯ ನೆರವು ನೀಡುತ್ತೇವೆ, ಆರೋಪಿ ಡಲ್ಲಾಸ್ ಪೊಲೀಸರ ವಶದಲ್ಲಿದ್ದಾನೆ ಎಂದು ರಾಯಭಾರಿ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ