ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶುಕ್ರವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಮತ್ತು ಪ್ರಭಾವಶಾಲಿ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್‌ನ ನಿಷೇಧ ತೆರವುಗೊಳಿಸುವ ಬಗ್ಗೆ ಮತ್ತು ವ್ಯಾಪಾರದ ಬಗ್ಗೆ ಚರ್ಚಿಸಿದ್ದಾರೆ.
ಚೀನಾ ಸರ್ಕಾರಿ ಮಾಧ್ಯಮ ಸಿಸಿಟಿವಿ ಮತ್ತು ಕ್ಸಿನ್ಹುವಾ ಸುದ್ದಿ ಸಂಸ್ಥೆ ಉಭಯ ನಾಯಕರ ನಡುವೆ ಮಾತುಕತೆ ಆರಂಭವಾಗಿದೆ ಎಂದು ತಿಳಿಸಿವೆ.
"ಟಿಕ್‌ಟಾಕ್ ಮತ್ತು ವ್ಯಾಪಾರ" ಕುರಿತು ಚರ್ಚಿಸುವುದಾಗಿ ಮತ್ತು ನಾವು ಅದರ ಎಲ್ಲಾ ವಿಷಯಗಳ ಬಗ್ಗೆ ಒಪ್ಪಂದಗಳಿಗೆ ಬಹಳ ಹತ್ತಿರದಲ್ಲಿದ್ದೇವೆ ಹಾಗೂ ಚೀನಾದೊಂದಿಗಿನ ನನ್ನ ಸಂಬಂಧವು ತುಂಬಾ ಉತ್ತಮವಾಗಿದೆ" ಎಂದು ಟ್ರಂಪ್ ಗುರುವಾರ ಹೇಳಿದ್ದರು.
ಜನವರಿಯಲ್ಲಿ ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಇದು ಅವರ ಎರಡನೇ ದೂರವಾಣಿ ಕರೆಯಾಗಿದೆ.
ಜೂನ್ 5 ರಂದು, ಅಮೆರಿಕ ಅಧ್ಯಕ್ಷರು, ಚೀನಾಗೆ ಭೇಟಿ ನೀಡುವಂತೆ ನನಗೆ ಕ್ಸಿ ಆಹ್ವಾನಿಸಿದ್ದರು ಮತ್ತು ನಾನು ಚೀನಾದ ನಾಯಕನಿಗೆ ಅಮೆರಿಕಕ್ಕೆ ಆಗಮಿಸುವಂತೆ ಇದೇ ರೀತಿಯ ಆಹ್ವಾನ ನೀಡಿದ್ದೆ ಎಂದು ಹೇಳಿದ್ದರು.