ಜಗತ್ತಿನಾದ್ಯಂತ ಅಭಿಮಾನಿಗಳನ್ನ ಹೊಂದಿರುವ ಪಾಪ್ ಗಾಯಕಿ ರಿಹಾನಾ ಇದೀಗ ಮೂರನೇ ಮಗುವಿನ ತಾಯಿಯಾಗಿದ್ದಾರೆ. ದೀರ್ಘಕಾಲದ ಸಂಗಾತಿ ಹಾಗೂ ರ‍್ಯಾಪರ್ ಆಸ್ಯಾಪ್ ರಾಕಿ ಅವರೊಂದಿಗಿನ ಸಂಬಂಧದಲ್ಲಿ ಗ್ರ್ಯಾಮಿ ವಿಜೇತ ಸಿಂಗರ್ ರಿಹಾನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಭಾರತೀಯರಿಗೂ ಪರಿಚಿತರಾದ ಪಾಪ್ ತಾರೆ ಮತ್ತು ಫ್ಯಾಷನ್ ಮಾಡೆಲ್ ರಿಹಾನ ಅವರು ಸೆಪ್ಟೆಂಬರ್ 13 ರಂದು ತಮ್ಮ ಮೂರನೇ ಮಗುವಿಗೆ ಜನ್ಮ ನೀಡಿದ್ದು, ರಾಕಿ ಐರಿಶ್ ಮೇಯರ್ಸ್ ಎಂದು ಹೆಸರಿಟ್ಟಿದ್ದಾರೆ.
ಈ ಬಗ್ಗೆ ಗಾಯಕಿ ರಿಹಾನ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಗಾಯಕ ರಾಪರ್ ರಾಕಿ ಅವರು ‘ಮೈ ಲಿಟಲ್ ಲೇಡೀಸ್' ಎಂದು ಪ್ರತಿಕ್ರಿಯಿಸಿದ್ದಾರೆ. ಇವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಶುಭಕೋರಿದ್ದಾರೆ.
ಮೊದಲೇ ಇಬ್ಬರು ಗಂಡು ಮಕ್ಕಳನ್ನ ಪಡೆದುಕೊಂಡಿರುವ ರಿಹಾನಾ ಈಗ ಹೆಣ್ಣು ಹುಟ್ಟಿದ್ದಕ್ಕೆ ಭಾರೀ ಖುಷಿಯಿಂದ ಸುದ್ದಿ ಹಂಚಿಕೊಂಡಿರುವ ರಿಹಾನಾ ಈಗ ಫ್ಯಾಮಿಲಿ ಕಂಪ್ಲೀಟ್ ಆಗಿದೆ ಎಂದಿದ್ದಾರೆ. 37 ವರ್ಷದ ಗಾಯಕಿ ರಿಹಾನಾ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧ ಸಂಗೀತಗಾರ್ತಿ ಎಂದು ಹೆಸರು ಪಡೆದುಕೊಂಡಿದ್ದಾರೆ.