ಹೊವಾರ್ಡ್ ಲುಟ್ನಿಕ್ 
ವಿದೇಶ

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್

ಈ ತಿಂಗಳು ಟ್ರಂಪ್ ಆಡಳಿತವು ಹೊಸ H1B ಕೆಲಸದ ವೀಸಾಗಳಿಗೆ 100,000 ಡಾಲರ್ ಒಂದು ಬಾರಿ ಶುಲ್ಕವನ್ನು ಘೋಷಿಸಿತು.

ನ್ಯೂಯಾರ್ಕ್/ವಾಷಿಂಗ್ಟನ್: ಮುಂದಿನ ವರ್ಷ ಫೆಬ್ರವರಿ 2026 ರ ಮೊದಲು H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳಾಗಲಿವೆ ಎಂದು ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ. ಮುಂದಿನ ವರ್ಷ 100,000 ಡಾಲರ್ ಹೊಸ ಶುಲ್ಕ ಜಾರಿಗೆ ಬರುತ್ತದೆ.

'ಅಗ್ಗದ' ತಂತ್ರಜ್ಞಾನ ಸಲಹೆಗಾರರು ದೇಶಕ್ಕೆ ಬಂದು ಅವರ ಕುಟುಂಬಗಳನ್ನು ಕರೆತರುವ ಕಲ್ಪನೆ ತಪ್ಪು ಎಂದು ಅವರು ವ್ಯಾಖ್ಯಾನಿಸಿದರು.

ಈ ತಿಂಗಳು ಟ್ರಂಪ್ ಆಡಳಿತವು ಹೊಸ H1B ಕೆಲಸದ ವೀಸಾಗಳಿಗೆ 100,000 ಡಾಲರ್ ಒಂದು ಬಾರಿ ಶುಲ್ಕವನ್ನು ಘೋಷಿಸಿತು. ಇದು ತಾತ್ಕಾಲಿಕ ವೀಸಾಗಳ ಮೇಲೆ ಅಮೆರಿಕದಲ್ಲಿ ಕೆಲಸ ಮಾಡಲು ಬಯಸುವ ಭಾರತೀಯ ವೃತ್ತಿಪರರ ಮೇಲೆ ಪರಿಣಾಮ ಬೀರುತ್ತದೆ.

H1B ಘೋಷಣೆಗೆ ಸಹಿ ಹಾಕಿದಾಗ ಓವಲ್ ಕಚೇರಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕ ಇದ್ದ ಲುಟ್ನಿಕ್, ನವೀಕರಣಗಳು ಮತ್ತು ಮೊದಲ ಬಾರಿಗೆ ಅರ್ಜಿದಾರರು ಸೇರಿದಂತೆ ಎಲ್ಲಾ H1B ವೀಸಾಗಳಿಗೆ 100,000 ಡಾಲರ್ ವಾರ್ಷಿಕ ಶುಲ್ಕವಾಗಿರುತ್ತದೆ.

ವ್ಯಾಪಕ ಭೀತಿ ಮತ್ತು ಅವ್ಯವಸ್ಥೆಯ ನಡುವೆ, ಟ್ರಂಪ್ ಆಡಳಿತವು H1B ವೀಸಾಗಳಿಗೆ ಹೊಸ ಶುಲ್ಕದ ಅವಶ್ಯಕತೆಯು ಪ್ರಸ್ತುತ ವೀಸಾ ಹೊಂದಿರುವವರಿಗೆ ಅನ್ವಯಿಸುವುದಿಲ್ಲ ಮತ್ತು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸುವ ಒಂದು ಬಾರಿ ಪಾವತಿಯಾಗಿದೆ ಎಂದು ಸ್ಪಷ್ಟಪಡಿಸಿದೆ.

"ಈ ಕಾರ್ಯವಿಧಾನ ಮತ್ತು ಪ್ರಕ್ರಿಯೆಯು 2026 ರ ಫೆಬ್ರವರಿಯಲ್ಲಿ ಜಾರಿಗೆ ಬರಲಿದೆ. ಈಗ ಮತ್ತು 2026 ರ ನಡುವೆ ಸಾಕಷ್ಟು ಬದಲಾವಣೆಗಳು ಇರುತ್ತವೆ ಎಂದು ಲುಟ್ನಿಕ್ ಭಾನುವಾರ ನ್ಯೂಸ್‌ನೇಷನ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT