ಡೊನಾಲ್ಡ್ ಟ್ರಂಪ್ 
ವಿದೇಶ

'ಇರಾನ್ ಮೇಲೆ ಯುದ್ಧ ಇನ್ನು 2-3 ವಾರದಲ್ಲಿ ಅಂತ್ಯ': ಡೊನಾಲ್ಡ್ ಟ್ರಂಪ್

ಇದರ ಮಧ್ಯೆ ಅಮೆರಿಕ ವೈಟ್ ಹೌಸ್, ಡೊನಾಲ್ಡ್ ಟ್ರಂಪ್ ದೇಶವನ್ನು ಉದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ ಎಂದು ಘೋಷಿಸಿದೆ. ಇದರಲ್ಲಿ ಇರಾನ್ ಕುರಿತ ಮಹತ್ವದ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ.

ವಾಷಿಂಗ್ಟನ್: ಇರಾನ್‌ನೊಂದಿಗೆ ನಡೆಯುತ್ತಿರುವ ಯುದ್ಧ ಇನ್ನೂ ಎರಡು ಅಥವಾ ಮೂರು ವಾರಗಳಲ್ಲಿ ಅಂತ್ಯಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಮಹತ್ವದ ಹಾರ್ಮೊಜ್ ಕಣಿವೆ (Strait of Hormuz) ತೈಲ ಸಾಗಣೆ ಮಾರ್ಗದ ಭದ್ರತೆಯನ್ನು ಇತರ ದೇಶಗಳೇ ನೋಡಿಕೊಳ್ಳಬೇಕಾಗುತ್ತದೆ ಎಂದು ಕೂಡ ಹೇಳಿದ್ದಾರೆ.

ಇದರ ಮಧ್ಯೆ ಅಮೆರಿಕ ವೈಟ್ ಹೌಸ್, ಡೊನಾಲ್ಡ್ ಟ್ರಂಪ್ ದೇಶವನ್ನು ಉದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ ಎಂದು ಘೋಷಿಸಿದೆ. ಇದರಲ್ಲಿ ಇರಾನ್ ಕುರಿತ ಮಹತ್ವದ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ.

ಮತ್ತೊಂದು ಬೆಳವಣಿಗೆಯಲ್ಲಿ, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧದ ಜಂಟಿ ಕಾರ್ಯಾಚರಣೆ ಮಧ್ಯಪ್ರಾಚ್ಯದ ದಿಕ್ಕನ್ನು ಬದಲಿಸಿದೆ ಎಂದು ಹೇಳಿದ್ದಾರೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಶತ್ರುಗಳು ಮತ್ತೆ ಯುದ್ಧ ಪ್ರಾರಂಭಿಸದಂತೆ ಖಾತರಿ ನೀಡಿದರೆ, ಯುದ್ಧವನ್ನು ಅಂತ್ಯಗೊಳಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಲೆಬನಾನ್‌ನಲ್ಲಿ, ದಕ್ಷಿಣ ಬೈರೂತ್ ಮತ್ತು ಸಮೀಪದ ಪ್ರದೇಶಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇಸ್ರೇಲ್ ಸೇನೆ ಹಿರಿಯ ಹಿಜ್ಬುಲ್ಲಾ ಕಮಾಂಡರ್‌ ಮೇಲೆ ದಾಳಿ ನಡೆಸಿದುದಾಗಿ ತಿಳಿಸಿದೆ. ಇರಾನ್ ಬೆಂಬಲಿತ ಹಿಜ್ಬುಲ್ಲಾ ವಿರುದ್ಧದ ಇಸ್ರೇಲ್ ಕಾರ್ಯಾಚರಣೆಯಲ್ಲಿ ಲೆಬನಾನ್‌ನಲ್ಲಿ 1,200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಒಂದು ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ.

ಯುದ್ಧದ ಅಂತ್ಯ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅಮೆರಿಕದ ಷೇರು ಮಾರುಕಟ್ಟೆಗಳು ಏರಿಕೆ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲದ ಬೆಲೆ 3.2 ಶೇಕಡಾ ಇಳಿದು ಬ್ಯಾರೆಲ್‌ಗೆ 103.97 ಡಾಲರ್ ಆಗಿದೆ. ಜಪಾನ್‌ನ ನಿಕ್ಕೆ ಸೂಚ್ಯಂಕ 3 ಶೇಕಡಾಕ್ಕಿಂತ ಹೆಚ್ಚು ಏರಿಕೆಯಾಗಿ ಆರಂಭವಾಗಿದ್ದು, ದಕ್ಷಿಣ ಕೊರಿಯಾದ ಕೋಸ್ಪಿ ಸುಮಾರು 5 ಶೇಕಡಾ ಏರಿಕೆಯಾಗಿದೆ.

ಹಾರ್ಮೊಜ್ ಕಣಿವೆಯ ಬಗ್ಗೆ ಮಾತನಾಡಿದ ಟ್ರಂಪ್, ಫ್ರಾನ್ಸ್, ಚೀನಾ ಸೇರಿದಂತೆ ಇತರ ದೇಶಗಳು ತಮ್ಮ ತೈಲ ಸಾಗಣೆಯನ್ನು ತಾವೇ ಸುರಕ್ಷಿತಗೊಳಿಸಿಕೊಳ್ಳಬೇಕು ಎಂದು ಹೇಳಿದರು. ಆ ಮಾರ್ಗದ ಬಗ್ಗೆ ನಾವು ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ, ನ್ಯಾಟೋ ಮೈತ್ರಿ ರಾಷ್ಟ್ರಗಳು ಮತ್ತು ಇತರ ದೇಶಗಳು ಅಮೆರಿಕಕ್ಕೆ ಸಹಾಯ ಮಾಡದಿರುವ ಬಗ್ಗೆ ಟೀಕಿಸಿದ್ದಾರೆ. ಅಮೆರಿಕ ನಿಮಗೆ ಇನ್ನು ಸಹಾಯ ಮಾಡುವುದಿಲ್ಲ. ಇರಾನ್ ಈಗ ಬಹುತೇಕ ದುರ್ಬಲಗೊಂಡಿದೆ. ಕಠಿಣ ಭಾಗ ಮುಗಿದಿದೆ. ನಿಮ್ಮ ತೈಲವನ್ನು ನೀವೇ ಪಡೆಯಿರಿ ಎಂದು ಬರೆದಿದ್ದಾರೆ.

ಈ ನಡುವೆ, ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಸುಯುತ್ತಿದೆ ಎಂಬುದನ್ನು ಇರಾನ್ ನಿರಾಕರಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ, ಅಮೆರಿಕ ಪ್ರತಿನಿಧಿ ಸ್ಟೀವ್ ವಿಟ್ಕಾಫ್‌ನಿಂದ ಸಂದೇಶಗಳು ಬರುತ್ತಿವೆ ಆದರೆ ಅದು ಮಾತುಕತೆ ಎಂದಲ್ಲ ಎಂದು ಹೇಳಿದ್ದಾರೆ.

ಇರಾನ್ ಕ್ರಾಂತಿಕಾರಿ ಗಾರ್ಡ್ಸ್, ಗೂಗಲ್, ಮೆಟಾ, ಆಪಲ್ ಸೇರಿದಂತೆ ಪ್ರಮುಖ ಅಮೆರಿಕ ತಂತ್ರಜ್ಞಾನ ಕಂಪನಿಗಳ ವಿರುದ್ಧ ಪ್ರತೀಕಾರದ ಬೆದರಿಕೆ ನೀಡಿದೆ. ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, ಮುಂದಿನ ದಿನಗಳು ನಿರ್ಣಾಯಕವಾಗಲಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ H1N1 ಫ್ಲೂ ಆತಂಕ: ಇಬ್ಬರಲ್ಲಿ ಸೋಂಕು ದೃಢ, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಬಾಬ್ ಅಂಗಡಿಗಳ ತೆರವಿಗೆ ಆಗ್ರಹ!

Video: ಮೆಟ್ರೋ ರೈಲಿನಲ್ಲಿ ಮಹಿಳೆಯ ಖಾಸಗಿ ಅಂಗಗಳ ಫೋಟೋ ತೆಗೆದ ಆರೋಪ: CISF ಅಧಿಕಾರಿಗೆ ಪ್ರಯಾಣಿಕರ ತರಾಟೆ, ರಂಪಾಟ

'ನಾನು ನಲ್ಸಾರ್ ಆಹ್ವಾನವನ್ನೇ ಸ್ವೀಕರಿಸಿಲ್ಲ; ಅಲ್ಲಿಗೆ ಹೋಗುವ ಪ್ರಶ್ನೆಯೇ ಇಲ್ಲ': CJI ಸೂರ್ಯಕಾಂತ್ ಸ್ಪಷ್ಟನೆ

ಚಾಮರಾಜನಗರ ಶೂಟೌಟ್‌ ಕೇಸ್: ‘ಮೃತರು ರೈತರೇ ಹೊರತು ಬೇಟೆಗಾರರಲ್ಲ’; ಮೂವರು ತಮಿಳರ ಹತ್ಯೆಗೆ ಸಿಎಂ ವಿಜಯ್ ತೀವ್ರ ಖಂಡನೆ, ಉನ್ನತ ಮಟ್ಟದ ತನಿಖೆಗೆ ಆಗ್ರಹ..!