ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ನಡೆಸುತ್ತಿರುವ ಯುದ್ಧ 34ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಮತ್ತೊಂದು ಆಯಾಮ ಪಡೆದುಕೊಂಡಿದೆ.
ಚೀನಾದ ಹಸ್ತಕ್ಷೇಪ ಇದಕ್ಕೆ ಕಾರಣವಾಗಿದ್ದು, ಅಮೆರಿಕ ಸಿಡಿದೆದ್ದಿದೆ. ಪನಾಮ-ಧ್ವಜದ ಹಡಗುಗಳ ವಿಚಾರದಲ್ಲಿ ಚೀನಾ ಮಧ್ಯ ಪ್ರವೇಶಿಸುತ್ತಿದೆ ಎಂಬುದು ಅಮೆರಿಕ ಆರೋಪಿಸಿದೆ.
ಹೌದು. ಕಾನೂನುಬದ್ಧ ವ್ಯಾಪಾರದಲ್ಲಿ ತೊಡಗಿರುವ ಪನಾಮ-ಧ್ವಜದ ಹಡಗುಗಳನ್ನು ಬಂಧಿಸಲು ಅಥವಾ ತಡೆಯಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಕಿಡಿಕಾರಿದ್ದಾರೆ.
ಇದು ಇಂಧನ ಪೂರೈಕೆಯನ್ನು ಜಾಲವನ್ನು ಅಸ್ಥಿರಗೊಳಿಸುತ್ತದೆ. ವೆಚ್ಚವನ್ನು ಹೆಚ್ಚಿಸುತ್ತದೆ.ಅಲ್ಲದೇ ಜಾಗತಿಕ ವ್ಯಾಪಾರ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಪನಾಮಕ್ಕೆ ವಾಷಿಂಗ್ಟನ್‌ನ ಸಂಪೂರ್ಣ ಬೆಂಬಲವನ್ನು ದೃಢಪಡಿಸಿದ್ದಾರೆ. ಅದರ ಸಾರ್ವಭೌಮತ್ವವನ್ನು ಬೆಂಬಲಿಸಲು ಮತ್ತು ಯಾವುದೇ ಪ್ರತೀಕಾರದ ಅಥವಾ ಬಲವಂತದ ಕ್ರಮಗಳನ್ನು ವಿರೋಧಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.