ಡೊನಾಲ್ಡ್ ಟ್ರಂಪ್ 
ವಿದೇಶ

'ಇಂದು ರಾತ್ರಿಯೇ ಇಡೀ ಇರಾನ್ ಅನ್ನು ಸರ್ವನಾಶ ಮಾಡುತ್ತೇವೆ': ಡೆಡ್‌ಲೈನ್ ಮುಗಿಯೋ ಮುನ್ನವೇ ಟ್ರಂಪ್‌ ಕೊನೇಯ ಎಚ್ಚರಿಕೆ!

ಇರಾನ್‌ಗೆ ನೀಡಿದ 48 ಗಂಟೆಗಳ ಡೆಡ್‌ಲೈನ್‌ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8 ಗಂಟೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಟ್ರಂಪ್‌ ಕೊನೆಯ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ಗೆ ನೀಡಿದ್ದ ಗಡುವು ಮುಗಿಯುವ ಕೆಲವೇ ಗಂಟೆಗಳ ಮೊದಲು ಮತ್ತೆ ವಾರ್ನಿಂಗ್ ಕೊಟ್ಟಿದ್ದಾರೆ.

ಇರಾನ್‌ಗೆ ನೀಡಿದ 48 ಗಂಟೆಗಳ ಡೆಡ್‌ಲೈನ್‌ ಅಮೆರಿಕ ಕಾಲಮಾನ ಮಂಗಳವಾರ ರಾತ್ರಿ 8 ಗಂಟೆ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಟ್ರಂಪ್‌ ಕೊನೆಯ ಎಚ್ಚರಿಕೆ ನೀಡಿದ್ದಾರೆ.

ಇಂದು ರಾತ್ರಿಯೇ ಒಂದು ಇಡೀ ನಾಗರಿಕತೆಯೇ ನಾಶವಾಗಬಹುದು ಎಂದು ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದು, ಜಾಗತಿಕ ಸಂಚಲನಕ್ಕೆ ಕಾರಣವಾಗಿದೆ.

ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್, ಈಗ ನಾವು ಸಂಪೂರ್ಣ ಆಡಳಿತ ಬದಲಾವಣೆಯನ್ನು ಬಯಸುತ್ತೇವೆ. ಬಹುಶಃ ಕ್ರಾಂತಿಕಾರಿಯಾಗಿ ಅದ್ಭುತವಾಗಿ ಏನಾದರೂ ಸಂಭವಿಸಬಹುದು, ಯಾರಿಗೆ ಗೊತ್ತು? ಇಂದು ರಾತ್ರಿ ಪ್ರಪಂಚದ ದೀರ್ಘ ಮತ್ತು ಸಂಕೀರ್ಣ ಇತಿಹಾಸದ ಪ್ರಮುಖ ಕ್ಷಣಗಳಲ್ಲಿ ಒಂದಾಗಲಿದೆ ಎಂದಿದ್ದಾರೆ.

"ಇಡೀ ನಾಗರಿಕತೆಯು ಇಂದು ರಾತ್ರಿಯೇ ಸಾಯುತ್ತದೆ. ಮತ್ತೆಂದೂ ಈ ನಾಗರಿಕತೆ ಮರಳುವುದಿಲ್ಲ. ಈ ಘಟನೆ ಸಂಭವಿಸಬೇಕೆಂದು ನಾನು ಬಯಸುವುದಿಲ್ಲ, ಆದರೆ ಅದು ಬಹುಶಃ ಸಂಭವಿಸುವ ಸಾಧ್ಯತೆಯಿದೆ. ಈ ಮೂಲಕ 47 ವರ್ಷಗಳ ಸುಲಿಗೆ, ಭ್ರಷ್ಟಾಚಾರ ಮತ್ತು ಸಾವು ಅಂತಿಮವಾಗಿ ಕೊನೆಗೊಳ್ಳುತ್ತದೆ. ಇರಾನ್‌ನ ಮಹಾನ್ ಜನರನ್ನು ದೇವರು ಆಶೀರ್ವದಿಸಲಿ!" ಟ್ರಂಪ್ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಡುವು ಅಂತ್ಯಕ್ಕೂ ಮೊದಲೇ ಇರಾನ್‌ನ ಖಾರ್ಗ್ ದ್ವೀಪದ ಮೇಲೆ ಅಮೆರಿಕ ರಕ್ಕಸ ದಾಳಿ: 50ಕ್ಕೂ ಹೆಚ್ಚು ಸೇನಾ ನೆಲೆಗಳು ಸರ್ವನಾಶ!

'ನೀವು ಮರೆಯಲಾಗದ ಹೊಡೆತ ತಿನ್ನುತ್ತೀರಿ; ಈ ಬಾರಿ ಭಯಾನಕ ಕ್ಷೀಪಣಿ ಬಳಸುತ್ತೇವೆ': ಟ್ರಂಪ್‌ ಸರ್ವನಾಶ ಹೇಳಿಕೆಗೆ ಇರಾನ್ ತಿರುಗೇಟು

ಬೆಂಗಳೂರು: ಬ್ಲಾಕ್ ನಲ್ಲಿ ದುಪ್ಪಟ್ಟು ಬೆಲೆಗೆ IPL ಟಿಕೆಟ್ ಮಾರಾಟ,11 ಮಂದಿಯ ಬಂಧನ!

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಮಕ್ಕಳ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ CRPF ಫೈರಿಂಗ್; ಇಬ್ಬರು ಸಾವು, 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ವೇದಿಕೆ ಸಜ್ಜಾಗಿದೆ, ಕೆಲವೇ ದಿನಗಳಲ್ಲಿ ಯತ್ನಾಳ್‌ ಬಿಜೆಪಿಗೆ ವಾಪಸ್: ಸಂಚಲನ ಸೃಷ್ಟಿಸಿದ ರಮೇಶ್‌ ಜಾರಕಿಹೊಳಿ ಹೇಳಿಕೆ

SCROLL FOR NEXT